ಬೆಂಗಳೂರು: ಗುತ್ತಿಗೆದಾರರಿಂದ ಕಮಿಷನ್ ಪಡೆದ ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ್ ಶೇಗಜಿ ಮತ್ತು ನಿರ್ದೇಶಕ ಚಿಂಚಳಿ ಅವರನ್ನು ಅಮಾನತು ಮಾಡಲಾಗಿದೆ.
ಸಣ್ಣ ಗುತ್ತಿಗೆದಾರರಿಂದ 3%ವರೆಗೆ ಕಮಿಷನ್ ಕೇಳುವ ಆಡಿಯೋ ವೈರಲ್ ಆದ ಬೆನ್ನಲ್ಲೇ ಗುತ್ತಿಗೆದಾರರ ಸಂಘ ಸುದ್ದಿಗೋಷ್ಠಿ ನಡೆಸಿ ಈ ಕ್ರಮವನ್ನು ತೆಗೆದುಕೊಂಡಿದೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ, ಇದು ಖಾಸಗಿ ಜಾಗದಲ್ಲಿ ಆಗಿರುವ ವ್ಯವಹಾರ. ಈ ಘಟನೆಗೂ ಗುತ್ತಿಗೆದಾರರ ಸಂಘಕ್ಕೂ ಸಂಬಂಧ ಇಲ್ಲ. ಯಾವ ಕಾರಣಕ್ಕೂ ನಾವು 80% ಇದೆ ಎಂದು ಹೇಳಿಲ್ಲ ಎಂದು ತಿಳಿಸಿದರು.
ಅಮಾನತು ಬಳಿಕ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಜಗನ್ನಾಥ್ ಶೇಗಜಿ, ನಾನು ಯಾವುದೇ ಕಮಿಷನ್ ಕೇಳಿಲ್ಲ. ಅಧಿಕಾರಿಗಳು ನನ್ನ ವಿರುದ್ದ ಷಡ್ಯಂತ್ರ ಮಾಡಿದ್ದಾರೆ. ನನ್ನ ಧ್ವನಿಯನ್ನ ಹತ್ತಿಕ್ಕಲು ಈ ರೀತಿ ಮಾಡಿದ್ದಾರೆ ಎಂದು ದೂರಿದ್ದಾರೆ.
Laxmi News 24×7