Breaking News

ಫೈಲ್‌ಗಳನ್ನು ಹೊಸ ಅಧಿಕಾರಿಗಳಿಗೆ ಕೊಡ್ಬೇಡಿ – ವರ್ಗಾವಣೆಯಾದ್ರೂ ಅಧಿಕಾರಿಗಳಿಗೆ ವರ್ತಿಕಾ ಕರೆ

Spread the love

ಬಳ್ಳಾರಿ: ಬ್ಯಾನರ್‌ ಗಲಭೆ ಬಳಿಕ ವರ್ಗಾವಣೆ ಆಗಿದ್ದ ಡಿಐಜಿ ಆಗಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್  ಹಂತದ ಅಧಿಕಾರಿಗಳಿಗೆ ಕರೆ ಮಾಡಿ ಯಾವುದೇ ಫೈಲ್‌ಗಳನ್ನು ಈಗಿನ ಅಧಿಕಾರಿಗಳಿಗೆ ನೀಡದಂತೆ ಬೆದರಿಕೆ ಹಾಕಿದ್ದಾರೆ.

ವರ್ತಿಕಾ ಅವರನ್ನು ಸರ್ಕಾರ ವರ್ಗಾವಣೆ ಮಾಡಿ ಅವರ ಜಾಗಕ್ಕೆ ಐಪಿಎಸ್ ಹರ್ಷ ಅವರನ್ನ ನೇಮಕ ಮಾಡಿತ್ತು. ವರ್ಗಾವಣೆ ಬಳಿಕ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಮೊರೆ ಹೋಗಿರುವ ಕಟಿಯಾರ್ ಅವರು ಮತ್ತೇ ಬಳ್ಳಾರಿಗೆ ಬರುವ ತವಕದಲ್ಲಿದ್ದಾರೆ

ಈಗ ಬಳ್ಳಾರಿಯ ವಲಯ ಸಹಾಯಕ ಆಡಳಿತಾಧಿಕಾರಿ ಬಸವರಾಜ್ ಅವರಿಗೆ ವಾಟ್ಸಪ್‌ ಕರೆ ಮಾಡಿದ್ದ ವರ್ತಿಕಾ ಕಟಿಯಾರ್, ಪ್ರಮುಖ ಕಡತಗಳನ್ನ ಈಗಿನ ಅಧಿಕಾರಿಗೆ ನೀಡದಂತೆ ಸೂಚನೆ ನೀಡಿದ್ದಾರೆ.

ನನ್ನ ವರ್ಗಾವಣೆ ವಿಚಾರ ಸಿಎಟಿಯಲ್ಲಿದೆ. ಕಡತಗಳನ್ನು ನೀಡಿದರೆ ಸಿಎಟಿಯಲ್ಲಿ ಪ್ರತಿವಾದಿ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ. ವರ್ತಿಕಾ ಕಟಿಯಾರ್ ಕರೆ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಕರೆ ಬಳಿಕ ವರ್ತಿಕಾ ಕಟಿಯಾರ್ ಅವರಿಗೆ ಪತ್ರ ಬರೆದ ಬಳ್ಳಾರಿ ವಲಯ ಸಹಾಯಕ ಆಡಳಿತಾಧಿಕಾರಿ ಬಸವರಾಜ್ ನಿಮ್ಮ ನಿರ್ದೇಶನ ನನ್ನ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದೆ. ಹೀಗಾಗಿ ಯಾವುದೇ ಕರೆ, ಪತ್ರಗಳು, ಮೌಖಿಕವಾಗಿ ತಿಳಿ ಹೇಳುವುದು ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Spread the love

About Laxminews 24x7

Check Also

ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿಯನ್ನು ಕೊಲೆಗೈದು ಪರಾರಿಯಾಗಿದ್ದ ಬಾಲಕ ಕೊನೆಗೂ ಅರೆಸ್ಟ್‌

Spread the loveಬಳ್ಳಾರಿ: ಖಾಸಗಿ ಶಾಲಾ ಹಾಸ್ಟೆಲ್‌ನಲ್ಲಿ ಹಲ್ಲೆ ಮಾಡಿ ನಾಪತ್ತೆಯಾಗಿದ್ದ ಬಾಲಕನನ್ನು ಪೊಲೀಸರು  ಕೊನೆಗೂ ಪತ್ತೆ ಹಚ್ಚಿದ್ದಾರೆ. ಮೊನ್ನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ