Breaking News

ನಯನತಾರಾ, ಗೆಳೆಯ ವಿಘ್ನೇಶ್‍ಗೆ ಕೊರೊನಾ ವದಂತಿ- ಸ್ಪಷ್ಟನೆ ಕೊಟ್ಟ ನಟಿ…………

Spread the love

ಹೈದರಾಬಾದ್: ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಲಿವಿಂಗ್ ರಿಲೇಷನ್‍ಶಿಪ್‍ನಲ್ಲಿರುವುದು ಗೊತ್ತಿರುವ ವಿಚಾರ. ಆದರೆ ಈ ಜೋಡಿ ಶೀಘ್ರವೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಮಧ್ಯೆ ಇವರಿಬ್ಬರಿಗೂ ಕೊರೊನಾ ಸೋಂಕು ಇದೆ ಎಂಬ ಸುದ್ದಿ ವೈರಲ್ ಆಗಿದೆ. ಈ ಸುದ್ದಿಗೆ ಇದೀಗ ನಟಿ ನಯನತಾರಾ ಸ್ಪಷ್ಟನೆ ಕೊಟ್ಟಿದ್ದಾರೆ.

ಚೆನ್ನೈನಲ್ಲಿ ದಿನೇ ದಿನೇ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇಬ್ಬರಿಗೂ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಈ ಬಗ್ಗೆ ತಿಳಿದ ನಯನತಾರಾ ಮತ್ತು ವಿಘ್ನೇಶ್ ತಕ್ಷಣ ಕೊರೊನಾ ವದಂತಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.

 

ಇನ್‍ಸ್ಟಾಗ್ರಾಂನಲ್ಲಿ ‘ಬೇಬಿ ಶಾರ್ಕ್’ ಸಾಂಗ್‍ಗೆ ‘ಬೇಬಿ ಫೇಸ್’ ಫಿಲ್ಟರ್ ಬಳಸಿ, ವಿಡಿಯೋ ಮಾಡಿರುವ ನಯನತಾರಾ ಮತ್ತು ವಿಘ್ನೇಶ್ ವದಂತಿಗಳಿಗೆ ಸಖತ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ‘ಹಾಯ್ ನಾವಿಬ್ಬರು ಜೀವಂತವಾಗಿ, ಆರೋಗ್ಯಕರವಾಗಿ ಮತ್ತು ಸಂತೋಷದಿಂದ ಇದ್ದೇವೆ ಎಂದು ಮೊದಲಿಗೆ ಹೇಳಿದ್ದಾರೆ.

ನಂತರ “ನಿಮ್ಮ ಜೋಕರ್ ಕಲ್ಪನೆಯನ್ನು ಮತ್ತು ನಿಮ್ಮ ಸಿಲ್ಲಿ ಜೋಕ್‍ಗಳನ್ನು ನೋಡಲು ದೇವರು ನಮಗೆ ಸಾಕಷ್ಟು ಬಲ ಹಾಗೂ ಸಂತೋಷ ನೀಡಿದ್ದಾನೆ” ಎಂದು ಹೇಳುವ ಮೂಲಕ ಸುದ್ದಿ ಹರಿಬಿಟ್ಟವರನ್ನು ನಯನತಾರಾ ವ್ಯಂಗ್ಯವಾಡಿದ್ದಾರೆ.

 

ವಿಘ್ನೇಶ್ ಶಿವನ್ ಕೂಡ ನಯನತಾರಾ ಹಾಕಿರುವ ವಿಡಿಯೋವನ್ನೇ ಪೋಸ್ಟ್ ಮಾಡಿ, ನಾವು ಸಂತಸದಿಂದ ಇದ್ದೇವೆ ಎಂದು ಹೇಳಿದ್ದಾರೆ. ನಂತರ ಇಬ್ಬರೂ ರೊಮ್ಯಾಂಟಿಕ್ ಫೋಟೊವೊಂದನ್ನು ಶೇರ್ ಮಾಡಿದ್ದಾರೆ.

ಈ ಮೂಲಕ ನಯನತಾರಾ ಮತ್ತು ವಿಘ್ನೇಶ್ ಬಗ್ಗೆ ಹಬ್ಬಿದ್ದ ಕೊರೊನಾ ವೈರಸ್ ಸುದ್ದಿ ಸಂಪೂರ್ಣ ಸುಳ್ಳು ಅನ್ನೋದು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಈ ಜೋಡಿ ಲಾಕ್‍ಡೌನ್ ಸಮಯವನ್ನು ಎಂಜಾಯ್ ಮಾಡಿಕೊಂಡು, ಸಂತೋಷದಿಂದ ಕಾಲಕಳೆಯುತ್ತಿದ್ದಾರೆ.


Spread the love

About Laxminews 24x7

Check Also

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ.

Spread the love ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಹಾರಕ್ಕೆ ಪ್ರಯಾಣ. ಬೆಂಗಳೂರು : …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ