Breaking News

ಹುಬ್ಬಳ್ಳಿ ನೇಹಾ ಹಿರೇಮಠ ಹತ್ಯೆ ಕೇಸ್​: ಹಂತಕ ಫಯಾಜ್​​ಗೆ ಮತ್ತೆ ಜೈಲೇ ಗತಿ

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ, ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಪ್ರಕರಣದ ಆರೋಪಿ ಫಯಾಜ್ ಜಾಮೀನು ಅರ್ಜಿಯನ್ನು 3ನೇ ಬಾರಿಗೆ ಧಾರವಾಡ ಹೈಕೋರ್ಟ್​ ಪೀಠ  ತಿರಸ್ಕರಿಸಿ ಇಂದು ಆದೇಶ ಹೊರಡಿಸಿದೆ. ಆ ಮೂಲಕ ಫಯಾಕ್​​ಗೆ ಮತ್ತೆ ಜೈಲೇ ಗತಿ ಆಗಿದೆ.

2024 ಏಪ್ರಿಲ್ 18ರಂದು ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜು ಕ್ಯಾಂಪಸ್​ನಲ್ಲಿ‌ ವಿದ್ಯಾರ್ಥಿನಿ ನೇಹಾ ಹಿರೇಮಠ ಬರ್ಬರ ಹತ್ಯೆಯಾಗಿತ್ತು. ಫಯಾಜ್ ಅನ್ನೋ ಆಕೆಯ ಸಹಪಾಠಿ ಮಾರಕಾಸ್ತ್ರಗಳಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ. ಈ ಪ್ರಕರಣ ದೇಶಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಅನೇಕ ಕಡೆ ಹೋರಾಟಗಳು ನಡೆದಿದ್ದವು. ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಸರ್ಕಾರ, ಆದಷ್ಟು ಬೇಗ ಪ್ರಕರಣದ ತನಿಖೆ ಮುಗಿಸಿ ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡುತ್ತೇವೆ ಎಂದಿತ್ತು. ಇನ್ನು ಘಟನೆ ನಂತರ ಹುಬ್ಬಳ್ಳಿ ವಿದ್ಯಾನಗರ ಠಾಣೆ ಪೊಲೀಸರು ಆರೋಪಿ ಫಯಾಜ್​​ನನ್ನು ಬಂಧಿಸಿದ್ದರು.

ಇನ್ನು ಕಳೆದ ಆಗಸ್ಟ್​ನಲ್ಲಿ ಹುಬ್ಬಳ್ಳಿಯ ಒಂದನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಆರೋಪಿ ಫಯಾಜ್ ಜಾಮೀನು ಅರ್ಜಿ ಸಲ್ಲಿಸಿದ್ದ. ಆದರೆ ನ್ಯಾಯಾಲಯ ಆತನ ಜಾಮೀನು ಅರ್ಜಿ ತಿರಸ್ಕಾರ ಮಾಡಿತ್ತು. ನಂತರ ಆತ ಹೈಕೋರ್ಟ್ ಮೆಟ್ಟಿಲೇರಿದ್ದ. ಅಲ್ಲಿ ಕೂಡ ಆತನ ಜಾಮೀನು ಅರ್ಜಿ ತಿರಸ್ಕಾರವಾಗಿತ್ತು. ಸದ್ಯ ಆರೋಪಿ ಜೈಲಿನಲ್ಲಿದ್ದಾನೆ.

ಇನ್ನು ಪ್ರಕರಣದ ತ್ವರಿತ ಇತ್ಯರ್ಥಕ್ಕಾಗಿ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರನ್ನು ಕೂಡ ನಿಯೋಜಿಸಿದೆ. ಆದರೆ ಪ್ರಕರಣದ ತನಿಖೆ ಮಾತ್ರ ಆರಂಭವಾಗಿರಲಿಲ್ಲ. ಇತ್ತೀಚೆಗೆ ಹುಬ್ಬಳ್ಳಿಯ ಒಂದನೇ ಜಿಲ್ಲಾ ಸಂತ್ರ ನ್ಯಾಯಾಧೀಶರು, ಟ್ರಯಲ್​ಗೆ ದಿನಾಂಕ್ ಫಿಕ್ಸ್​ ಮಾಡಿದ್ದರು. ಅದರಂತೆ ಹುಬ್ಬಳ್ಳಿಯ ಒಂದನೇ ಜಿಲ್ಲಾ ಸತ್ರ ಇನ್ನು ಕಳೆದ ತಿಂಗಳು ಹುಬ್ಬಳ್ಳಿಯ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರು ಟ್ರಯಲ್ ಆರಂಭಿಸಿದ್ದರು. ಸಾಕ್ಷಿಗಳ ವಿಚಾರಣೆ ನ್ಯಾಯಾಲಯದಲ್ಲಿ ಆರಂಭವಾಗಿದೆ.


Spread the love

About Laxminews 24x7

Check Also

ಹುಬ್ಬಳ್ಳಿ | ಫ್ಲೈವುಡ್‌ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ – ನಾಲ್ವರು ಕಾರ್ಮಿಕರು ಅಸ್ವಸ್ಥ

Spread the loveಹುಬ್ಬಳ್ಳಿ: ಬಿಲ್ಡಿಂಗ್‌ ಒಂದರ ಫ್ಲೈವುಡ್‌ ಕೆಲಸದ ವೇಳೆ ಕೆಮಿಕಲ್ ರಿಯಾಕ್ಷನ್ ಆಗಿ ನಾಲ್ವರು ಕಾರ್ಮಿಕರು ಅಸ್ವಸ್ಥರಾದ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ