Breaking News

ಆಕೆ’ಗೆ ತಾಳಿ- ‘ಈಕೆ’ಗೆ ತಾಳಿ ಭರವಸೆ: ಶ್ರೀಮಂತನ ಠಾಣೆಗೆ ಬಂದಳು ಪ್ರಿಯತಮೆ…!

Spread the love

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯ ಠಾಣೆಗಳಲ್ಲಿ ಪೊಲೀಸರ ಪ್ರೇಮ ಪ್ರಕರಣಗಳು ಅವರದ್ದೆ ಠಾಣೆಯ ಮೆಟ್ಟಿಲೇರನ್ನೇರುತ್ತಿರುವುದು ಕಂಡು ಬರುತ್ತಿದೆ. ಶಂಭೋ ಶಂಭೋ ಪೊಲೀಸಪ್ಪನ ಪ್ರಿಯತಮೆ ಠಾಣೆಗೆ ಬಂದು ಹೋಗಿದ್ದು, ಇನ್ನೂ ಹಸಿರಿರುವಾಗಲೇ ಮತ್ತೊಂದು ಠಾಣೆಯಲ್ಲಿ ಇಂತಹದ್ದೆ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ.

ತನ್ನ ಹೆಸರಿನಲ್ಲೇ ‘ಶ್ರೀಮಂತ’ ಎಂದು ಕೊಳ್ಳುವ ಆಸಾಮಿಯೇ ಹುಬ್ಬಳ್ಳಿಯ ಎಪಿಎಂಸಿಯಲ್ಲಿ ಆಗಾಗ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗಲೇ, ಆಕೆಯೊಂದಿಗೆ ಎಲ್ಲವನ್ನೂ ಮುಗಿಸಿ, ಈಗ ಕೈ ತೊಳೆದುಕೊಳ್ಳಲು ಮುಂದಾಗಿದ್ದಾನಂತೆ.

ಈ ವಿಷಯ ಗೊತ್ತಾದ ತಕ್ಷಣವೇ ಠಾಣೆಗೆ ಬಂದು ಕೂತಿದ್ದ ಪ್ರೇಮಿಯನ್ನ ಹೇಗೆ ‘ರಮ್ಮಿ’ಸಬೇಕೆಂದು ತಿಳಿಯದೇ ಠಾಣೆಯಲ್ಲಿನ ಪೊಲೀಸರೇ ಪರದಾಟ ನಡೆಸಿದರಂತೆ. ಆಗ, ಯುವತಿಯ ತಂದೆ ಬಂದು ಕರೆದುಕೊಂಡು ಹೋಗಿದ್ದಾರೆಂದು ಗೊತ್ತಾಗಿದೆ.

ಮುಂಗಾರು ಮಳೆಯ ಸಮಯದಲ್ಲಿ ಕೈ ಹಿಡಿದು ಈ ವರ್ಷದ ಮಳೆಯಲ್ಲಿ ಕೈ ಬಿಡುತ್ತಿರುವ ಪೊಲೀಸನ ಬಗ್ಗೆ ಕ್ರಮ ಜರುಗಿಸಿ, ಆಕೆಗೊಂದು ನ್ಯಾಯ ಕೊಡಿಸಬೇಕಾಗಿದ್ದು ಹಿರಿಯ ಅಧಿಕಾರಿಗಳ ಜವಾಬ್ದಾರಿಯಾಗಿದೆ ಅಲ್ಲವೇ..


Spread the love

About Laxminews 24x7

Check Also

ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ

Spread the love ಬೆಲಗಾಮ್ ಎಜ್ಯುಕೇಷನ್ ಸೊಸೈಟಿಯ ಶತಮಾನೋತ್ಸವ ಡಿಸೆಂಬರ್ 20 ರಿಂದ 26 ರ ವರೆಗೆ ವಿಶೇಷ ಕಾರ್ಯಕ್ರಮ; …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ