ಹೊಸಕೋಟೆ, ಜೂ.3- ಕಾಂಗ್ರೆಸ್‍ನ ಹಲವಾರು ಮುಖಂಡರು ಮಾಜಿ ಸಚಿವ ಎಂಟಿಬಿ ನಾಗರಾಜ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಸ್ಥಳೀಯರ ಸಮಸ್ಯೆ ಬಗೆಹರಿಸಲು ಮುಂದಾಗದಿರುವ ಹಿನ್ನೆಲೆಯಲ್ಲಿ ಆ ಪಕ್ಷದ ಮುಖಂಡರ ವರ್ತನೆಯಿಂದ ಬೇಸತ್ತು ರಾಮಮೂರ್ತಿ ಮತ್ತಿತರರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ ಎಂದು ಎಂಟಿಬಿ ನಾಗರಾಜ್ ತಿಳಿಸಿದರು.
ರಾಮಮೂರ್ತಿ ಮತ್ತು ಅವರ ಸ್ನೇಹಿತರ ಜತೆಗೂಡಿ ಗಣಗಲು ಗ್ರಾಮದಲ್ಲಿ ಉಚಿತ ಆಹಾರ ಕಿಟ್‍ಗಳನ್ನು ವಿತರಿಸಿದ ನಂತರ ಅವರು ಮಾತನಾಡಿದರು. ಇಡೀ ತಾಲ್ಲೂಕಿನಾದ್ಯಂತ ಕಡು ಬಡವರಿಗೆ ನಾವು ಉಚಿತ ಆಹಾರ ಧಾನ್ಯಗಳ ಕಿಟ್ ವಿತರಿಸುತ್ತಿದ್ದೇವೆ ಎಂದರು.
ಮುಖಂಡ ರಾಮಮುರ್ತಿ ಮಾತನಾಡಿ, ನಾವು ನಮ್ಮ ಕುಟುಂಬ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಗಳಾಗಿದ್ದು, ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅತಿ ಹೆಚ್ಚು ಮತಗಳನ್ನು ನೀಡಿದ್ದೇವೆ.
ಕೊರೊನಾ ಬಂದು 2 ತಿಂಗಳು ಕಳೆದರೂ ನಮ್ಮ ಗ್ರಾಮಕ್ಕೆ ಯಾವುದೇ ಪಕ್ಷದವರು ಅಥವಾ ಕಾಂಗ್ರೆಸ್ ಪಕ್ಷದವರು ತಿರುಗಿಯೂ ನೋಡಿಲ್ಲ. ಅದ್ದರಿಂದ ನಮ್ಮ ಗ್ರಾಮದ ಮುಖಂಡರೆಲ್ಲ ಸೇರಿ ಅಭಿವೃದ್ಧಿಗೋಸ್ಕರ ಮತ್ತೆ ನಾವು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇವೆ ಎಂದರು.
ತಾಲ್ಲೂಕು ಬಿಜೆಪಿ ಅಧ್ಯಕ್ಷ ಕೆ.ಸತೀಶ್, ನಗರ ಘಟಕದ ಅಧ್ಯಕ್ಷ ಸಿ.ಜಯರಾಜ್,ದೊಡ್ಡಗಟ್ಟಿಗನಬ್ಬಿ ಪಂಚಾಯ್ತಿ ಅಧ್ಯಕ್ಷ ಎಸ್.ಟಿ.ಬಿ ಮುನಿರಾಜು, ಮುಖಂಡರಾದ ರಾಜೇಂದ್ರ, ಜುಂಜಪ್ಪ,ಗೋಪಾಲ್, ಕೃಷ್ಣಪ್ಪ, ಅಂಬರೀಶ್, ರಾಜಣ್ಣ, ಕುಶಾಲ್, ಮಧುದೂಧನ್, ವೆಂಕಟಸ್ವಾಮಿ, ಮರಿಯಪ್ಪ ಮತ್ತಿತರರಿದ್ದರು.