ಬೆಳಗಾವಿ: ಭಾರತದ ರಾಣಿಯರು ಎಲ್ಲ ಅಡಚಣೆಗಳ ನಡುವೆಯೂ ಸದಾ ಧೈರ್ಯದಿಂದ ಹೋರಾಡಿದವರು. ಅವರ ಧೈರ್ಯ, ನಾಯಕತ್ವ ಮತ್ತು ದೂರದೃಷ್ಟಿ ಗುಣಗಳು ಇಂದಿನ ಸಮಾಜದಲ್ಲಿ ಮಹಿಳೆಗೆ ಪ್ರೇರಣೆಯಾಗಿವೆ. ಈ ಮಹಾನ್ ಮಹಿಳೆಯರ ಕಥೆಗಳು ಇಂದಿನ ಕಾಲದಲ್ಲೂ ಅತ್ಯಂತ ಪ್ರಸ್ತುತವಾಗಿದ್ದು, ಆಧುನಿಕ ಮಹಿಳೆಯರಿಗೆ ಶಕ್ತಿ, ಗೌರವ ಮತ್ತು ಉದ್ದೇಶಪೂರ್ಣ ನಾಯಕತ್ವಕ್ಕೆ ಪ್ರೇರಕ ಶಕ್ತಿಯಾಗಿವೆ ಎಂದು ಲೇಖಕಿ ಶೆಫಾಲಿ ವೈದ್ಯ ಹೇಳಿದರು.
ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ವತಿಯಿಂದ ನಗರದ ಕೆಎಲ್‌ಇ ಕನ್ವೆನ್ಷನ್ ಸೆಂಟರ್‌ನಲ್ಲಿ ಮಂಗಳವಾರ ಗಿವ್ ಟು ಗೈನ್ ಘೋಷವಾಕ್ಯದಡಿ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು ನಮ್ಮ ರಾಣಿಯರ ಸಾಹಸಗಾಥೆಗಳು ಕೇವಲ ಇತಿಹಾಸದ ಕಥೆಗಳಲ್ಲ. ಇಂದಿನ ಸಮಾಜದಲ್ಲಿಯೂ ನಾಯಕತ್ವ, ಸ್ಥೈರ್ಯ ಮತ್ತು ಆತ್ಮವಿಶ್ವಾಸಕ್ಕೆ ಶಕ್ತಿಯುತ ಆದರ್ಶಗಳಾಗಿವೆ. ಹೀಗಾಗಿ ಇಂದಿನ ಮಹಿಳೆಯರು ತಾವು ಎದುರಿಸುತ್ತಿರುವ ಸವಾಲುಗಳು ಮೆಟ್ಟಿ ನಿಂತು ಅವಕಾಶಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಕೆಎಲ್‌ಇ ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಆಶಾ ಕೋರೆ, ಮುಖ್ಯ ಸಂಯೋಜಕಿ ಡಾ.ಪ್ರೀತಿ ದೊಡವಾಡ, ಕಾರ್ಯದರ್ಶಿ ಡಾ.ನೇಹಾ ಧಡೇದ, ಉಪಾಧ್ಯಕ್ಷರಾದ ಡಾ.ಅಲ್ಕಾ ಕಾಳೆ, ಸರ್ವಮಂಗಳ ಹಾಗೂ 1200ಕ್ಕೂ ಹೆಚ್ಚು ಮಹಿಳಾ ಅಧ್ಯಾಪಕಿಯರು ಪಾಲ್ಗೊಂಡಿದ್ದರು.
Laxmi News 24×7