Breaking News

ಐತಿಹಾಸಿಕ ಬೆಂಗಳೂರು ಕರಗ ಉತ್ಸವಕ್ಕೆ ಚಾಲನೆ

Spread the love

ಬೆಂಗಳೂರು: 11 ದಿನಗಳ ಕಾಲ ನಡೆಯುವ ವಿಶ್ವವಿಖ್ಯಾತ ಬೆಂಗಳೂರು ಕರಗ  ಉತ್ಸವಕ್ಕೆ ಇಂದು (ಮಾ.21) ಚಾಲನೆ ಸಿಗಲಿದೆ.

ಇಂದು ಸಂಜೆ ತಿಗಳರಪೇಟೆಯ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ಧ್ವಜಾರೋಹಣ ಮೂಲಕ ಉತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ.

ಒಟ್ಟು 11 ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಮಾ.30ರಂದು ಹಸಿ ಕರಗವಿದ್ದು, ಏ.1ರಂದು ಮಧ್ಯರಾತ್ರಿ ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ದಿನವೇ ದ್ರೌಪದಿ ದೇವಿಯ ಹೂವಿನ ಕರಗವು ಸಂಚರಿಸಿ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಲಿದೆ. ಈ ಬಾರಿಯು ಎ.ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕರಗ ಶಕ್ತ್ಯೋತ್ಸವ ಕುರಿತು ಇಂದು 11 ಗಂಟೆಗೆ ಸುದ್ದಿಗೋಷ್ಠಿ ನಡೆಯಲಿದೆ.

16ನೇ ಬಾರಿಗೆ ಕರಗ ಹೊರಲಿದ್ದಾರೆ ಜ್ಞಾನೇಂದ್ರ ಸ್ವಾಮಿ
ಏಪ್ರಿಲ್ 1ರಂದು ನಡೆಯಲಿರುವ ಶಕ್ತ್ಯೋತ್ಸವದಲ್ಲಿ ಎ. ಜ್ಞಾನೇಂದ್ರ ಸ್ವಾಮಿ ಕರಗ ಹೊರಲಿದ್ದಾರೆ. ಕಳೆದ ವರ್ಷ 15ನೇ ಬಾರಿ ಯಶಸ್ವಿಯಾಗಿ ಕರಗ ಹೊತ್ತಿದ್ದ ಜ್ಞಾನೇಂದ್ರ ಸ್ವಾಮಿ, ಈ ಸಲ 16ನೇ ಬಾರಿಗೆ ಕರಗ ಹೊರಲಿದ್ದಾರೆ.


Spread the love

About Laxminews 24x7

Check Also

ಸವದತ್ತಿ ಯಲ್ಲಮ್ಮ ದೇವಸ್ಥಾನದ ನೇಮಕಾತಿ ಹಾಗೂ ಮುಜರಾಯಿ ಇಲಾಖೆ ಸಿಬ್ಬಂದಿಗಳ ಹಿತರಕ್ಷಣೆಗಾಗಿ ವಿಧಾನಸಭೆಯಲ್ಲಿ ಧ್ವನಿ!

Spread the love​ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭಾ ಬಜೆಟ್ ಅಧಿವೇಶನದಲ್ಲಿ, ಸವದತ್ತಿ ಯಲ್ಲಮ್ಮ ಕ್ಷೇತ್ರದ ಪರವಾಗಿ ಧಾರ್ಮಿಕ ದತ್ತಿ ಇಲಾಖೆಯ (ಮುಜರಾಯಿ) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ