ಬೆಳಗಾವಿ: ಹಿಂಡಲಗಾ ಕೈದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿದ್ದು, ಹಿಂಡಲಗಾ ಹಾಗೂ ಕ್ಯಾಂಪ್ ಪೊಲೀಸ್ ಠಾಣೆಯ ಸಿಬ್ಬಂದಿಯಲ್ಲಿ ಆತಂಕ ಶುರುವಾಗಿದೆ.
ಈಚೇಗೆ ಕುಖ್ಯಾತ ರೌಡಿಯನ್ನು ಕ್ಯಾಂಪ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದರು. ಬಳಿಕ ಮೂರು ದಿನಗಳ ಹಿಂದೆಷ್ಟೇ ಹಿಂಡಲಗಾ ಜೈಲಿಗೆ ಕಳಿಸಲಾಗಿತ್ತು. ಆದ್ರೆ ಇಂದು ಕೈದಿಗೆ ಕೊರೊನಾ ಸೋಂಕು ಶಂಕೆ ವ್ಯಕ್ತವಾಗಿದೆ.
ಇದರಿಂದ ಕ್ಯಾಂಪ್ ಹಾಗೂ ಹಿಂಡಲಗಾ ಪೊಲೀಸ ಸಿಬ್ಬಂದಿಗೆ ಆತಂಕ ಮನೆ ಮಾಡಿದೆ. ಜತೆಗೆ ಹಿಂಡಲಗಾ ಜೈಲಿನಲ್ಲಿ 830 ಜನರು ಇದ್ದಾರೆ.
ಬಂಧಿತ ದರೋಡೆ ಕೋರನಿಗೆ ಸೊಂಕಿನ ಶಂಕೆ ಹಿನ್ನಲೆಯಲ್ಲಿ ಕ್ಯಾಂಪ್ ಠಾಣೆ, ಹಿಂಡಲಗಾ ಜೈಲು ಶೀಲ್ ಡೌನ್ ಮಾಡುವುದರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಕ್ವಾರಂಟೈನ್ ಆಗುವ ಸಾದ್ಯತೆ ಇದೆ.