Breaking News

ಹುಬ್ಬಳ್ಳಿ:ಮಹಿಳೆಯರ ಬಟ್ಟೆ ಕಳ್ಳತನ ಮಾಡುತ್ತಿದ್ದ ಕಳ್ಳ…………

Spread the love

ಹುಬ್ಬಳ್ಳಿ: ಮಹಿಳೆಯರ ಬಟ್ಟೆ ಕದಿಯುತ್ತಿದ್ದ ವಿಕೃತ ಮನಸ್ಸಿನ ಯುವಕನೊಬ್ಬನಿಗೆ ಸಾರ್ವಜನಿಕರು ಥಳಿಸಿರುವ ಘಟನೆ ನಗರದಲ್ಲಿ ನಡೆದಿದೆ.

ಯುವಕನು ಕಳೆದ ಹಲವು ದಿನಗಳಿಂದ ಹುಬ್ಬಳ್ಳಿಯ ಈಶ್ವರ ನಗರ, ನೇಕಾರನಗರದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರ ಬಟ್ಟೆ ಕಳ್ಳತನ ಮಾಡುತ್ತಿದ್ದ. ಇದರಿಂದಾಗಿ ಕಳ್ಳನನ್ನು ಹಿಡಿಯಲು ಸಾರ್ವಜನಿಕರು ಕಾಯುತ್ತಿದ್ದರು.

ಯುವಕ ಇಂದು ಕೂಡ ಬಟ್ಟೆ ಕದಿಯಲು ನೇಕಾರನಗರದ ಬಡಾವಣೆಗೆ ಬಂದಿದ್ದ. ಬಟ್ಟೆ ಕದ್ದು ಇನ್ನೇನು ಪರಾರಿಯಾಗುತ್ತಿದ್ದಂತೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಬಳಿಕ ಆತನನ್ನು ಕಂಬಕ್ಕೆ ಕಟ್ಟಿದ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಒಪ್ಪಿಸಿದ್ದಾರೆ.


Spread the love

About Laxminews 24x7

Check Also

ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಥೈಲ್ಯಾಂಡ್ ಮೂಲದ ಸುಂದರಿ ಈ ಬಾರಿಯ ಮಿಸ್ ವರ್ಲ್ಡ್-2025

Spread the loveಹೈದರಾಬಾದ್‌ನಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಥೈಲ್ಯಾಂಡ್ ಮೂಲದ ಸುಂದರಿ ಈ ಬಾರಿಯ ಮಿಸ್ ವರ್ಲ್ಡ್-2025 ವಿಶ್ವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ