ಹುಬ್ಬಳ್ಳಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಆಕ್ಸಿಜನ್ ನೀಡಿದ್ದ ಸಂದರ್ಭದಲ್ಲಿ ಯಾವುದೇ ಸ್ಟ್ರೆಚರ್ ಸಹಾಯ ಇಲ್ಲದಿರುವುದರಿಂದ ತಂದೆಯೇ ಹೊತ್ತುಕೊಂಡು ಹೋಗಿರುವ ಘಟನೆಯೊಂದು ಹುಬ್ಬಳ್ಳಿ ಪ್ರತಿಷ್ಠಿತ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಕಿಮ್ಸ್ ಸಿಬ್ಬಂದಿಗಳ ನಿಷ್ಕಾಳಜಿಯನ್ನು ಎತ್ತಿ ತೋರುವ ದೃಶ್ಯವೊಂದು ಸಾರ್ವಜನಿಕರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಸಾರ್ವಜನಿಕ ಸೇವೆಗೆ ಕೈ ಜೋಡಿಸಿದ್ದು, ನಿಜಕ್ಕೂ ವಿಶೇಷವಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಧನ್ವಂತರಿ ಎಂಬುವಂತ ಹೆಗ್ಗಳಿಕೆ ಪಾತ್ರವಾಗಿರುವ ಕಿಮ್ಸ್ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಆದರೆ ಸಿಬ್ಬಂದಿಗಳ ನಿಷ್ಕಾಳಜಿಯಿಂದ ಕಿಮ್ಸ್ ಆಸ್ಪತ್ರೆಗೆ ಕಪ್ಪು ಚುಕ್ಕೆ ಇಟ್ಟಂತಾಗಿದೆ
.
ಇನ್ನೂ ಸಿಬ್ಬಂದಿಗಳು ಏನು ಗೊತ್ತಿರದ ಮಗುವಿನ ತಂದೆಯ ಕೈಯಲ್ಲಿ ಆಕ್ಸಿಜನ್ ಹಾಕಿದ್ದ ಮಗುವನ್ನು ಕೊಟ್ಟಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆಸಿಬ್ಬಂದಿಗಳ ವರ್ತನೆಯಿಂದ ಒಂದಿಲ್ಲೊಂದು ರೀತಿಯಲ್ಲಿ ಸುದ್ದಿಯಾಗುತ್ತಿದ್ದ ಕಿಮ್ಸ್ ಆಸ್ಪತ್ರೆ ಮತ್ತೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಯಾವುದೇ ಸ್ಟ್ರೆಚರ್ ಸಿಗದ ಹಿನ್ನಲೆಯಲ್ಲಿ ತಂದೆಯೇ ಹೊತ್ತುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿರುವ ವಿಡಿಯೋ ಮನ ಕಲಕುವಂತಿದೆ
. ಕೂಡಲೇ ಅಧಿಕಾರಿಗಳು ಹಾಗೂ ಕಿಮ್ಸ್ ನಿರ್ದೇಶಕರು ಎಚ್ಚೆತ್ತುಕೊಂಡ ಅವ್ಯವಸ್ಥೆ ಸರಿಪಡಿಸಬೇಕು ಎಂಬುವುದು ಸಾರ್ವಜನಿಕರ ಒತ್ತಾಸೆಯಾಗಿದೆ.