ನಿಪ್ಪಾಣಿ: ರೈತರಿಗೆ ಅನುಕೂಲಕ್ಕಾಗಿ ಕೃಷಿ ಉತ್ಸವ ಹಮ್ಮಿಕೊಳ್ಳಲಾಗಿದೆ. ರೈತರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷಕ್ಕಿಂತ ಹೆಚ್ಚು ರೈತರು ಕೃಷಿ ಉತ್ಸವಕ್ಕೆ ಆಗಮಿಸುತ್ತಿರುವುದು ಖುಷಿ ತಂದಿದೆ ಎಂದು ಜೊಲ್ಲೆ ಗ್ರೂಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಹೇಳಿದರು.
ನಗರದಲ್ಲಿ ಜೊಲ್ಲೆ ಗ್ರೂಪ್ ಮತ್ತು ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಹಮ್ಮಿಕೊಂಡಿರುವ ಕೃಷಿ ಉತ್ಸವದಲ್ಲಿ ಶನಿವಾರ ಪಾಲ್ಗೊಂಡು ಮಾತನಾಡಿದರು.
ಉತ್ಸವದಲ್ಲಿ ಕೃಷಿಗೆ ಸಂಬಂಧಿತ ವಿವಿಧ ಬೀಜಗಳು, ರಸಗೊಬ್ಬರಗಳು, ಯಂತ್ರೋಪಕರಣಗಳು ಕಾರ್ಯವಿಧಾನದ ಮಾಹಿತಿ ಪಡೆದುಕೊಂಡರು. ಜಾನುವಾರು ಪ್ರದರ್ಶನ ಕೂಡ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ಬ್ಯಾಂಕ್‌ಗಳು ರೈತರಿಗೆ ಬೆಳೆ ಸಾಲ, ಕೃಷಿ ಯಂತ್ರ, ನೀರಾವರಿ ಪಂಪ್‌ಸೆಟ್ ಮತ್ತು ಹೈಟೆಕ್ ಕೃಷಿ ಉಪಕರಣಗಳ ಖರೀದಿ, ಪಶುಸಂಗೋಪನೆ, ರೇಷ್ಮೆ ಕೃಷಿ ಮತ್ತು ಭೂಮಿ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಯಡಿ ಸಾಲ ಸೌಲಭ್ಯ ನೀಡುತ್ತಿವೆ. ರೈತರು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೆನರಾ ಬ್ಯಾಂಕ್ ಆರ್‌ಜಿಎಂ ಪನಿಶಯನ್ ಎಂ. ಹೇಳಿದರು. ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಕನ್ಹೇರಿ ಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಇತರರು ಜಾನುವಾರು ಪ್ರದರ್ಶನ ವೀಕ್ಷಿಸಿದರು.
Laxmi News 24×7