ಗೋಕಾಕದಲ್ಲಿ ಲಾಕಡೌನ್ ಜಾರಿಯಲ್ಲಿದ್ದರೂ ಜನಜೀವನಕ್ಕೆ ಎಂದಿನಂತೆಯೇ ಇದೆ. ಲಾಕಡೌನ್ ಲೆಕ್ಕಕ್ಕಿಲ್ಲದಂತೆ ಜನ ಓಡಾಡುತ್ತಿದ್ದಾರೆ. ಲಾಕಡೌನ್ ಆದ ಪ್ರದೇಶದಲ್ಲಿ ಹೇಳೊರಿಲ್ಲ,ಕೇಳೊರಿಲ್ಲ ಅನ್ನೋ ಸ್ಥಿತಿ ಇದ
ಕೊರೋನಾ ಸೋಂಕು ತಡೆಗೆ ಲಾಕ್‍ಡೌನ್ ಘೋಷಿಸಲಾಗಿದೆ. ಆದರೆ ಗೋಕಾಕ ಜನತೆ ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಹೇಗೆ ಬೇಕೋ ಹಾಗೆ ವರ್ತಿಸುತ್ತಿದ್ದಾರೆ. ಇದೆಲ್ಲ ಗೊತ್ತಿದ್ದರೂ ಗೋಕಾಕ ತಹಸೀಲ್ದಾರ್ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಿಲ್ಲ.ವಸ್ತುಸ್ಥಿತಿಯನ್ನು ಪರಿಶೀಲಿಸುತ್ತಿಲ್ಲ.
ಕೊರಾನಾ ಕೇಸ್‍ಗಳು ಹೆಚ್ಚುತ್ತಿವೆ. ಇದನ್ನು ತಡೆಯಲು ಲಾಕ್‍ಡೌನ್ ಘೋಷಿಸಲಾಗಿತ್ತು. ಆದರೆ ಲಾಕ್‍ಡೌನ್ ನಿಯಮ ಉಲ್ಲಂಘನೆ ಇಲ್ಲಿ ನಿರಂತರವಾಗಿದೆ. ಎಷ್ಟೇ ಹೇಳಿದರೂ ಜನರು ಕೇಳುತ್ತಿಲ್ಲ.