ಗೋಕಾಕ: ಹಿರಿಯ ಸಹಕಾರಿ, ಮಹಾಲಕ್ಷ್ಮೀ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷ ಬಾಳಾಸಾಹೇಬ ಮಾಂಗಳೇಕರ ಅವರ ಮಾರ್ಗದರ್ಶನದಲ್ಲಿ ಮತ್ತು ಗ್ರಾಹಕರ ಸಹಕಾರದಿಂದ ನಮ್ಮ ಬ್ಯಾಂಕು ಪ್ರಸಕ್ತ ಸಾಲಿನಲ್ಲಿ 1.70 ಕೋಟಿ ರೂಗಳ ಲಾಭ ಗಳಿಸಿದೆ ಎಂದು ಇಲ್ಲಿನ ಮಹಾಲಕ್ಷ್ಮೀ ಅರ್ಬನ್ ಬ್ಯಾಂಕಿನ ಉಪಾಧ್ಯಕ್ಷ ಜಿತೇಂದ್ರ ಬಾಳಾಸಾಹೇಬ ಮಾಂಗಳೇಕರ ಹೇಳಿದರು.
ಬ್ಯಾಂಕಿನ 44ನೇ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮೀ ಅರ್ಬನ್ ಬ್ಯಾಂಕ್ ಗ್ರಾಹಕರ ಹಿತಕ್ಕನುಗುಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಹಕರಿಗೆ ಅತ್ತುತ್ತಮವಾದ ಸೇವೆಯನ್ನು ನೀಡುತ್ತಿದೆ ಎಂದು ಹೇಳಿದರು.
ಸಹಕಾರಿ ರಂಗದಲ್ಲಿ ಇದೇ ಮೊದಲ ಬಾರಿಗೆ ಮೋಬಾಯಿಲ್ ಬ್ಯಾಂಕಿಂಗ್ ಆಪ್ಯ್, ಹೊಸ ತಂತ್ರಜ್ಞಾನಗಳಾದ ಚೆಕ್‍ಬುಕ್ಕ್ ಪ್ರಿಂಟಿಂಗ್, ಪಾಸಿಟಿವ್ ಪೇ, ಎಮಿಡಿಯಟ್ ಫಂಡ್ ಟ್ರಾನ್ಸ್‍ಫರ್, ಯುಪಿಐ ಮುಂತಾದ ಸೌಲಭ್ಯಗಳನ್ನು ಗ್ರಾಹಕರಿಗೆ ಪರಿಚಯಿಸಿದ ಕೀರ್ತಿ ನಮ್ಮ ಬ್ಯಾಂಕಿಗೆ ಸಲ್ಲುತ್ತದೆ. ಕೊರೋನಾ ಹಾವಳಿಯ ಮಧ್ಯೆ ನಮ್ಮ ಬ್ಯಾಂಕು ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿದೆ. ಬ್ಯಾಂಕಿನ ಮೊಬಾಯಿಲ್ ಬ್ಯಾಂಕಿಂಗ್ ಆಫ್ಯ್‍ನ್ನು ಗೂಗಲ್ ಪೇ ನಲ್ಲಿ ಪ್ರಾರಂಭಿಸಲಾಗಿದೆ. ಬ್ಯಾಂಕಿನ ಗ್ರಾಹಕರು ಹತ್ತಿರ ಶಾಖೆಗೆ ಭೇಟಿ ನೀಡಿ ಆಪ್ಯ್ ಬಳಕೆ ಮಾಡಿಕೊಳ್ಳುವಂತೆ ವಿನಂತಿಸಿದರು. ಡಿಜಿಟಲ್ ಬ್ಯಾಂಕಿಂಗ್ ಡ್ರೈವಿನ್ ಭಾಗವಾಗಿ ಬ್ಯಾಂಕ್ ಶೀಘ್ರದಲ್ಲಿಯೇ ಆಯ್‍ಎಮ್‍ಪಿಎಸ್, ಯುಪಿಐ ಮತ್ತು ಸಕಾರಾತ್ಮಕ ವೇತನವನ್ನು ಪ್ರಾರಂಭಿಸಲಿದೆ ಎಂದು ಮಾಂಗಳೇಕರ ಹೇಳಿದರು.
ಇಡೀ ಬೆಳಗಾವಿ ಜಿಲ್ಲೆಯಾಧ್ಯಂತ ಬ್ಯಾಂಕ್ ಜನಮನ ಗೆದ್ದು, ಪ್ರಸಕ್ತ ಸಾಲಿನಲ್ಲಿ 114.84 ಕೋಟಿ ಠೇವಣಿ ಸಂಗ್ರಹಿಸಿದ್ದು ಕಳೆದ ವರ್ಷಕ್ಕಿಂತ ಈ ಸಾಲಿನಲ್ಲಿ ಶೇಕಡಾ 24.37 ರಷ್ಟು ಪ್ರಗತಿಯಾಗಿದೆ. 72.31 ಕೋಟಿ ರೂಗಳ ಸಾಲವನ್ನು ನೀಡಿಕೆಯಲ್ಲಿಯೂ ವೃದ್ದಿಯಾಗಿದೆ. ಪ್ರಸಕ್ತ ವರ್ಷದಲ್ಲಿ 2747 ಕೋಟಿ ರೂಗಳ ವ್ಯವಹಾರವನ್ನು ಮಾಡಿರುವುದು ಬ್ಯಾಂಕಿನ ಆರ್ಥಿಕ ಪ್ರಗತಿಗೆ ಸಾಕ್ಷಿಯಾಗಿದೆ ಎಂದು ಜಿತೇಂದ್ರ ಮಾಂಗಳೇಕರ ಹೇಳಿದರು.
ಈ ಸಂದರ್ಭದಲ್ಲಿ ಬ್ಯಾಂಕಿನ್ ಆಡಳಿತ ಮಂಡಳಿಯ ಸದಸ್ಯರಾದ ಎಸ್.ಬಿ.ಕದಮ್, ಎಸ್.ಡಿ.ಜಾಧವ, ಆರ್.ಎ.ಚಿಗಡೊಳ್ಳಿ, ಆರ್.ವಿ.ಪೂಜೇರಿ, ಎಸ್.ಎಸ್.ಸುಪಲಿ, ಎಮ್.ವಿ.ಪವಾರ, ಪಿ.ಎಸ್. ಶಿಂತ್ರೆ, ಜಿ.ಆರ್.ಖಿಲಾರಿ ಮುಂತಾದವರು ಉಪಸ್ಥಿತರಿದ್ದರು.