Breaking News

ಗೋಕಾಕ: ನಗರದ ಪ್ರವಾಸಿ ಮಂದಿರದಲ್ಲಿ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಬಣ) ಬೆಳಗಾವಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ರೈತ ಮುಖಂಡರು.

Spread the love

ಗೋಕಾಕ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ (ಕೋಡಿಹಳ್ಳಿ ಬಣ)ಬೆಳಗಾವಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆಯು ಸೋಮವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಜರುಗಿತು.

ಜಿಲ್ಲಾಧ್ಯಕ್ಷ ಸತ್ತೆಪ್ಪ ಮಲ್ಲಾಪೂರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜುಲೈ-21 ರಂದು ರಾಜ್ಯ ಮಟ್ಟದ ರೈತ ಹುತ್ಮಾತ ದಿನಾಚರಣೆಯನ್ನು ಯರಗಟ್ಟಿಯಲ್ಲಿ ನಡೆಸಲು ನಿರ್ಧರಿಸಲಾಯಿತ್ತಲ್ಲದೇ ಕೃಷಿ ಇಲಾಖೆ ನೀಡುತ್ತಿರುವ ಉಪಕರಣಗಳ ಸಹಾಯಧನವನ್ನು ರದ್ದು ಮಾಡಿದ್ದು ಅದನ್ನು ಪುನ: ಆರಂಭಿಸಬೇಕು. ನೀರಿನ ಪಂಪಸೆಟ್‍ಗಳನ್ನು ನಡೆಸಲು 3ಪೇಸ್ ದಿನದ 8 ಗಂಟೆಗಳ ವರೆಗೆ ವಿದ್ಯುತ್ತ ನೀಡಬೇಕು. ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ವಿವಿಧ ಬ್ಯಾಂಕಗಳಿಂದ ರೈತರು ಪಡೆದ ಸಾಲವನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು. 2019 ಸಾಲಿನಲ್ಲಿ ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳ ನಿರ್ಮಾಣಕ್ಕೆ ಹಣ ಮಂಜೂರ ಮಾಡಬೇಕು. ಸಕ್ಕರೆ ಕಾರ್ಖಾನೆಗಳ ಬಾಕಿ ಇರುವ ಕಬ್ಬಿನ ಬಿಲ್ಲ್‍ಗಳನ್ನು ತಕ್ಷಣವೇ ಪಾವತಿಸಲು ಸರ್ಕಾರ ಆದೇಶಿಸಬೇಕು. ಹನಿ ನೀರಾವರಿ ಯೋಜನೆಯನ್ನು ಪ್ರಾರಂಭಿಸಬೇಕು. ಆಕ್ರಮ ಅರಣ್ಯ ಭೂಮಿಯನ್ನು ರೈತರಿಗೆ ಅನುಕೂಲವಾಗಲು ಸಕ್ರಮಗೊಳಿಸಬೇಕು. ಸಣ್ಣ ಹಾಗೂ ಅತಿ ಸಣ್ಣ ನೀರಾವರಿ ಯೋಜನೆಗಳನ್ನು ಬೇಗನೆ ಆರಂಭಿಸಬೇಕು. 65 ವರ್ಷ ಮೇಲ್ಪಟ್ಟ ರೈತರಿಗೆ 5 ಸಾವಿರ ರೂಗಳ ಮಾಸಾಸನ ನೀಡಬೇಕು. ಕೇಂದ್ರ ಸರ್ಕಾರ ಜಾರಿಗೆ ತಂದ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ರಾಜ್ಯ ಮಟ್ಟದ ರೈತ ಹುತ್ಮಾತ ಕಾರ್ಯಕ್ರಮದಲ್ಲಿ ಚರ್ಚಿಸಿ ಮುಂದಿನ ಹೋರಾಟದ ರೂಪರೇಷೆಗಳನ್ನು ಹಾಕಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.

ಈ ಸಭೆಯಲ್ಲಿ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ, ರಾಜ್ಯ ಸಮಿತಿ ಸದಸ್ಯ ಗಣಪತಿ ಈಳಿಗೇರ, ಜಿಲ್ಲಾ ಸಮಿತಿಯ ರಮೇಶ ಮಡಿವಾಳ, ಮುತ್ತೆಪ್ಪ ಕುರಬರ, ಭೀಮಶಿ ಹುಲಗುಂದ, ಶಿವು ಪಾಟೀಲ, ಬಾಳಯ್ಯ ಹಿರೇಮಠ, ಬಾಬು ಹಿರೇಮಠ, ತ್ಯಾಗರಾಜ ಕದಂಬ, ಜಿಲ್ಲೆಯ ವಿವಿಧ ತಾಲೂಕಿನ ಅಧ್ಯಕ್ಷರಾದ ಮುತ್ತೆಪ್ಪ ಬಾಗನ್ನವರ, ಪ್ರಕಾಶ ಹಾಲನ್ನವರ, ಮಲಿಕಸಾಬ ಜಮಾದಾರ, ಸುಲೇಮಾನ ಗಾಣಿಗೇರ, ರಂಗಪ್ಪ ಪಾಂಡರೆ, ಮಂಜುನಾಥ ಪಾಟೀಲ, ರವಿ ಪಂಟೆಕರ, ಮಹಾದೇವ ಮಡಿವಾಳ,ಪಾರಿಶ ಯಳಗುಡ ಸೇರಿದಂತೆ ಅನೇಕರು ಇದ್ದರು.

 

 


Spread the love

About Laxminews 24x7

Check Also

ಬಿವೈ ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲಾ; ಮಾಜಿ ಶಾಸಕ ನಡಹಳ್ಳಿ*

Spread the love ಬಿವೈ ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲಾ; ಮಾಜಿ ಶಾಸಕ ನಡಹಳ್ಳಿ* ವಿಜಯೇಂದ್ರ ಬದಲಾವಣೆ ಪ್ರಶ್ನೆಯೇ ಇಲ್ಲ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ