ಗೋಕಾಕನಲ್ಲಿರುವ ಜನ ಪ್ರಸಿದ್ಧ ಆಸ್ಪತ್ರೆ ಅಂದರೆ ಅದು ಗೋಕಾಕ ಸರಕಾರಿ ತಾಲೂಕ ಆಸ್ಪತ್ರೆ. ಆದರೆ ಈ ಆಸ್ಪತ್ರೆಯಲ್ಲಿ ಕೆಲವು ಡಾಕ್ಟರಗಳು ಮತ್ತು ನರ್ಸಗಳಿಂದ ಅಮಾನವೀಯ ವರ್ತನೆಯಿಂದ ಕಪ್ಪು ಚುಕ್ಕಿ ಆಗಿದೆ ಎಂದರೆ ತಪ್ಪಾಗಲಾರದು.
ಅದು ಹೇಗೆಂದರೆ ಕೆಲವು ದಿನಗಳಿಂದ ತಾಲೂಕ ಆಸ್ಪತ್ರೆಯಲ್ಲಿ ಬರುವಂತಹ ತುಂಬು ಗರ್ಭಿಣಿಯರು ತೋರಿಸಿಕೊಳ್ಳಲಿಕ್ಕೆ ಬಂದರೆ ಈ ಡಾಕ್ಟರಗಳು ಮತ್ತು ನರ್ಸಗಳಿಂದ ಅವರಿಗೆ ನರಕಯಾತನೆ ಆಗುವ ಹಾಗೆ ಮಾಡುತ್ತಾರೆ ಎಂದರೆ ತಪ್ಪಾಗಲಾರದು ಮತ್ತು ಆಸ್ಪತ್ರೆಗೆ ಬಂದ ತಕ್ಷಣ ಸರ್ ತಮಗೆ ಗೊತ್ತಿರಬೇಕು ಹೆಣ್ಣು ಮಕ್ಕಳಿಗೆ ಹೆರಿಗೆ ನೋವು ಯಾವಾಗಬರುತ್ತೆ ಎಂಬುದು ಯಾರಿಗೂ ಗೊತ್ತಿರದ ಸಂಗತಿ ಆದರೆ ಇಲ್ಲಿ ಈ ದಿನಮಾನದಲ್ಲಿ ನಡೆಯುತ್ತಿರುವ ರೋಗ ಮಾಹಾಮಾರಿ ಕೋವಿಡ -19 ಇದನ್ನು ಪರೀಕ್ಷೆ ಮಾಡಿಕೊಂಡು ಬಂದರೆ ಮಾತ್ರ ನಾವು ನಿಮ್ಮನ್ನು ನೋಡುತ್ತೇವೆ. ಇಲ್ಲವಾದರೆ ನಮ್ಮ ಹತ್ತಿರ ನಿಮ್ಮನ್ನು ನೋಡುವಂತಹ ಸಾಮಗ್ರಿಗಳು ಇಲ್ಲವೆಂದು ಹೇಳುತ್ತಾರೆ.
ನೀವು ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಹೋಗಿ ಎಂದು ರಾತ್ರಿ ಹಗಲಿರುಳು ಎನ್ನದೆ ನಾವು ವೈದ್ಯರೇ ಅಲ್ಲವೆನ್ನುವ ರೀತಿ ಹೊರದಬ್ಬುವಂತಹ ಕೆಲಸ ಮಾಡುತ್ತಾರೆ. ಪಾಪ ಬಡ ಜನರು ತಾಲೂಕಾ ಸರಕಾರಿ ಆಸ್ಪತ್ರೆಯನ್ನೇ ನಂಬಿಕೊಡು ಬಂದಿರುವಂಥವರ ಪರಸ್ಥಿತಿ ಏನಾಗಬಾರದು.
ಅದಕ್ಕಾಗಿ ಇಂತಹ ಅಮಾನವೀಯ ವರ್ತನೆಯಿಂದ ಕೆಲಸ ಮಾಡುತ್ತಿರುವ ಡಾಕ್ಟರಗಳು ಮತ್ತು ನರ್ಸಗಳ ಮೇಲೆ ಕ್ರಮ ತೆಗೆದುಕೊಂಡು ಮೊದಲಿನ ಹಾಗೆ
ತಾಲೂಕಾ ಆಸ್ಪತ್ರೆ ಮುಂಚುಣಿಯಲ್ಲಿರುವ ಹಾಗೆ ತಾವು ನೋಡಿಕೊಳ್ಳಬೇಕು ಮತ್ತು ಒಂದುವೇಳೆ ಬಹಳ ಒತ್ತಡದ ನಡುವೆಯು ರೋಗಿಗಳನ್ನು ಹೆರಿಗೆ ಚಿಕಿತ್ಸೆ ಮಾಡಲು ಮಾಡಿಕೊಡಿ. ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಇಂದು ತಾಲೂಕ ಆಸ್ಪತ್ರೆ ಮನವಿ ಮಾಡಿದರು.