ಗೋಕಾಕ : ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಳ್ಳಿರಿ ಎಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ತಮ್ಮ ಕಛೇರಿಯಲ್ಲಿ ತಾಲೂಕಿನ ಕೊಣ್ಣೂರ ಪುರಸಭೆಯ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಅನುದಾನ ವಿತರಿಸಿ ಮಾತನಾಡಿದರು.
ಸನ್ 2019-20 ಮತ್ತು 2020-21 ರ ಸಾಲಿನ ಎಸ್.ಎಫ್.ಸಿ ಅನುದಾನ ಶೇ 24.10% ರ ಯೋಜನೆಯಡಿಯಲ್ಲಿ ರೂ 2.42 ಲಕ್ಷಗಳ ಅನುದಾನದಲ್ಲಿ 5 ಫಲಾನುಭವಿಗಳಿಗೆ ಪರಿಶಿಷ್ಟ ಜಾತಿ ವರ್ಗದ ಬಿ.ಇ ಓದುತ್ತಿರುವ ವಿಧ್ಯಾರ್ಥಿಗಳಿಗೆ ಲ್ಯಾಫ್-ಟಾಫ್ ವಿತರಣೆ ಶೇ. 5% ರ ಯೋಜನೆಯಲ್ಲಿ ವಿಕಲಚೇತನರಿಗೆ ರೂ. 0.98 ಲಕ್ಷ ಅನುದಾನದಲ್ಲಿ 1 ಫಲಾನುಭವಿಗೆ ತ್ರಿಚಕ್ರ ವಾಹನ ಮತ್ತು ರೂ.0.48 ಲಕ್ಷ ಅನುದಾನದಲ್ಲಿ 3 ಫಲಾನುಭವಿಗಳಿಗೆ ಶ್ರವಣ ಸಾಧನ ಹಾಗೂ ಪ್ರಧಾನ ಮಂತ್ರಿ ಆವಾಸ ಯೋಜನೆಯಲ್ಲಿ 124 ಫಲಾನುಭವಿಗಳಿಗೆ ಮನೆ ನಿರ್ಮಾಣದ ಕಾಮಗಾರಿ ಆದೇಶ ಪ್ರತಿಗಳ ವಿತರಿಸಿದರು.
ಕಾರ್ಯಕ್ರಮದಲ್ಲಿ ಪುರಸಭೆಯ ಅಧ್ಯಕ್ಷೆ ರಜಿಯಾಬೇಗಂ ಹೊರಕೇರಿ, ಸದಸ್ಯರಾದ ಪ್ರಕಾಶ ಕರನಿಂಗ, ವಿನೋದ ಕರನಿಂಗ, ಯಲ್ಲಪ್ಪಾ ಗಾಡಿವಡ್ಡರ, ಕುಮಾರ ಕೊಣ್ಣೂರ, ಅಶೋಕ ಕುಮಾರನಾಯ್ಕ,ಗೂಳಪ್ಪಾ ಅಸೋದೆ, ರಾಮಲಿಂಗ ಮಗದುಮ, ಇಮ್ರಾನ ಜಮಾದಾರ, ರಜಿಯಾಸುಲ್ತಾನ ನಧಾಫ್, ಸಾಯಿರಾಬಾನು ಜಮಾದಾರ, ಸ್ಥಾಯಿ ಸಮೀತಿ ಚೇರಮನ್ ಸಾವಂತ ತಳವಾರ, ಮುಖ್ಯಾಧಿಕಾರಿ ಶಿವಾನಂದ ಹಿರೇಮಠ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಫಲಾನುಭವಿಗಳು ಇದ್ದರು.
