ಗೋಕಾಕ ಫಾಲ್ಸ್‌ನಲ್ಲಿ ಗೋಕಾಕ ಖ್ಯಾತ ಶಿಲ್ಪಿ ಜಕಣಾಚಾರಿ ಅವರಿಂದ ನಿರ್ಮಿತವಾಗಿರುವ ಐತಿಹಾಸಿಕ ತಡಸಲ ಮಹಾಲಿಂಗೇಶ್ವರ “ತಟಾಕೇಶ್ವರ” ದೇವಸ್ಥಾನದಲ್ಲಿ ಮಹಾಶಿವರಾತ್ರಿವನ್ನು ಪ್ರತಿ ವರ್ಷದಂತೆ ಇ ವರ್ಷವು ಅತಿ ವಿಜೃಂಭಣೆಯಿಂದ ಆಚರಣೆ ಮಾಡಿದಲಾಗಿತ್ತು.
1153 ನೇ ಕಾಲದಲ್ಲಿ ನಿರ್ಮಿತವಾದ ಈ ದೇವಸ್ಥಾನ ಪ್ರತಿ ಶಿಲ್ಪಗಳೂ ಐತಿಹಾಸಿಕ ಮಹತ್ವ ಸಾರುತ್ತವೆ. ಪಕ್ಕದಲ್ಲಿ ಫಾಲ್ಸ್ ಹಸಿರಿನ ನಿಸರ್ಗ ತಾಣ ಇದ್ದು ಇದರ ಮುಂದೆ ಹರಿದು ಬರುವ ಘಟಪ್ರಭೆ 134 ಕಲ್ಲಿನ ಪದರಗಳ ಮಧ್ಯೆ ಸಾಗಿ ಜಲಪಾತವಾಗಿ ವೈಭವ ಸೃಷ್ಟಿಸುವ ತಾಣದ ದಂಡೆಯಲ್ಲೇ ಈ ದೇಗುಲವಿದೆ. ಜಲಪಾತಕ್ಕೆ ಭೇಟಿ ನೀಡುವ ಬಹುತೇಕರು ಪ್ರವಾಸಿಗರು, ಭಕ್ತರು ಮಹಾಲಿಂಗೇಶ್ವರನಿಗೂ ನಮಿಸುತ್ತಾರೆ.
ಪ್ರಾಚೀನ ಬ್ರಿಟಿಷರ ಆಳ್ವಿಕೆಯಿಂದಲೂ ಜವಳಿ ಕಾರ್ಖಾನೆಯ ಕಾರ್ಮಿಕರು ಇಲ್ಲಿ ಸಂಭ್ರಮ ಹಾಗೂ ಸೌಹಾರ್ದದಿಂದ ಗ್ರಾಮದೇವರಾದ ಮಹಾಲಿಂಗೇಶ್ವರನ ಸೇವೆಗೆ ಅಣಿಯಾಗುವ ಸಂದರ್ಭವೇ ಈ ಜಾತ್ರಾ ಮಹೋತ್ಸವ.. ದೇವಸ್ಥಾನಕ್ಕೆ ಜನಪ್ರತಿನಿಧಿಗಳು, ಸುತ್ತಲಿನ ಎಲ್ಲ ಗ್ರಾಮದವರು ಸಹಾಯ ನೀಡುತ್ತ ಬಂದಿದ್ದಾರೆ. ಮಹಾಶಿವರಾತ್ರಿ ದಿನದಂದು ಇಲ್ಲಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಬರುತ್ತಾರೆ.
‘ಕೋವಿಡ್-19 ಕಾರಣದಿಂದ, ಅಧಿಕಾರಿಗಳ ನಿರ್ದೇಶನದಂತೆ ಅಂತರ ಕಾಯ್ದುಕೊಂಡು ಜಾತ್ರಾ ಮಹೋತ್ಸವ ಆಚರಿಸಲಾಗಿದೆ ಎಂದು ಸಮಿತಿ ತಿಳಿಸಿದೆ.
ಬುಧವಾರದಿಂದಲೇ ಶಿವರಾತ್ರಿ ಕಾರ್ಯಕ್ರಮ, ಜಾತ್ರಾ ಮಹೋತ್ಸವ ಚಾಲನೆಗೊಂಡಿದು ಗುರುವಾರ ಮಾರ್ಚ್ 11ಬೆಳಿಗ್ಗೆ ಮಹಾರುದ್ರಾಭಿಷೇಕ, ಬಿಲ್ವಾರ್ಚನೆ, ಪೂಜಾ ನೈವೇದ್ಯ ಹಾಗೂ ಭಜನೆ ನಡೆಯಲಿದೆ. ಮರಡಿಮಠದ ಪವಾಡೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಂಜೆ 4.30ಕ್ಕೆ ರಥೋತ್ಸವ ನಡೆಯಲಿದೆ. ಶಾಸಕ ರಮೇಶ ಜಾರಕಿಹೊಳಿ ಉದ್ಘಾಟಿಸುವರು. ವಾದ್ಯ ಮೇಳ ಹಾಗೂ ಜಾನಪದ ಕಲಾ ತಂಡಗಳು ಪಾಲ್ಗೊಳ್ಳಲಿರುವ ಈ ಮೆರವಣಿಗೆ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ಗೋಕಾಕ ಮಿಲ್ ವ್ಯವಸ್ಥಾಪಕ ನಿರ್ದೇಶಕ, ಮುಖ್ಯಕಾರ್ಯಕಾರಿ ಅಧಿಕಾರಿ ರಮೇಶ ಆರ್. ಪಾಟೀಲ, ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ, ಗೋಕಾಕ ಮಿಲ್ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ಶರದ ದೇಶಪಾಂಡೆ, ಸಹಾಯಕ ವ್ಯವಸ್ಥಾಪಕ ಚಿದಂಬರ ಕುಲಕರ್ಣಿ, ಡಿವೈಎಸ್ಪಿ ಜಾವೇದ ಇನಾಮದಾರ, ಸಿಪಿಐ ಗೋಪಾಲ ರಾಠೋಡ, ಪಿಎಸ್‌ಐ ಎ.ಪಿ. ಅಮ್ಮಿನಭಾವಿ, ಪಿಎಸ್‌ಐ ಕೆ.ಬಿ. ವಾಲೀಕಾರ ಪಾಲ್ಗೊಳ್ಳಲಿದ್ದಾರೆ.