Breaking News

2 ದಿನದ ಹಿಂದೆ ಮದ್ವೆಯಾಗಿದ್ದ ನವವಿವಾಹಿತೆ ಆತ್ಮಹತ್ಯೆ………..

Spread the love

ಗದಗ: ಎರಡು ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ನಗರದ ಮಸಾರಿ ಭಾಗದ ನಂದೀಶ್ವರಮಠ ಬಳಿ ಇರುವ ಮನೆಯಲ್ಲಿ ಈ ಘಟನೆ ನಡೆದಿದೆ. 21 ವರ್ಷದ ಧನಲಕ್ಷ್ಮೀ ನವಲಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಲಾಕ್‍ಡೌನ್ ಮುನ್ನವೇ ಧನಲಕ್ಷೀ ಮದುವೆ ನಿಶ್ಚಯವಾಗಿತ್ತು. ಆದರೆ ಕುಟುಂಬದವರು ಮದುವೆ ಮುಂದೂಡುವುದು ಬೇಡ ಎಂದು ಲಕ್ಷ್ಮೇಶ್ವರ ಪಟ್ಟಣದಲ್ಲಿ ಸರಳವಾಗಿ ಮದುವೆ ಮಾಡಿದ್ದಾರೆ.

ಮನೆಯಲ್ಲಿ ಸಂಬಂಧಿಗಳು ಇದ್ದರೂ ಸಹ ಸ್ನಾನಮಾಡಿ ಬರುವುದಾಗಿ ಹೇಳಿ ಬಾತ್‍ರೂಮ್ ಹೋಗಿದ್ದಾಳೆ. ಸುಮಾರು ಎರಡು ಗಂಟೆಯಾದರೂ ಧನಲಕ್ಷೀ ಬಂದಿಲ್ಲ. ನಂತರ ಮನೆಯವರು ಹೋಗಿ ನೋಡಿದ್ದಾರೆ. ಅಷ್ಟರಲ್ಲಿ ಧನಲಕ್ಷೀ ಬಾತ್‍ರೂಮ್ ಲಾಕ್‍ಮಾಡಿಕೊಂಡು ಒಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಸ್ಥಳಕ್ಕೆ ಬಡಾವಣೆ ಪೊಲೀಸರು ಹಾಗೂ ಗದಗ ತಹಶೀಲ್ದಾರ್ ಶ್ರೀನಿವಾಸ ಭೇಟಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಧನಲಕ್ಷ್ಮೀ ಸಾವಿಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರ ತನಿಖೆ ನಂತರವಷ್ಟೇ ಸತ್ಯಾಸತ್ಯತೆ ಹೊರಬಿಳ್ಳಲಿದೆ.


Spread the love

About Laxminews 24x7

Check Also

ಐತಿಹಾಸಿಕ ಲಕ್ಕುಂಡಿಯಲ್ಲಿ 7 ಹೆಡೆಯ ನಾಗರಕಲ್ಲಿನ ಮೂರ್ತಿ ಪತ್ತೆ

Spread the loveಗದಗ: ಗದಗದ  ಐತಿಹಾಸಿಕ ಲಕ್ಕುಂಡಿಯಲ್ಲಿ  9ನೇ ದಿನದ ಉತ್ಖನನ ಕಾರ್ಯ ಮುಂದುವರಿದಿದೆ. ಬಗೆದಷ್ಟು ಪ್ರಾಚ್ಯಾವಶೇಷಗಳು ಬಯಲಾಗುತ್ತಲೇ ಇವೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ