ಬೆಂಗಳೂರು: ವಿಧಾನಸೌಧದಲ್ಲಿ ಸಚಿವ ಬೈರತಿ ಸುರೇಶ್ ಕಚೇರಿಯಲ್ಲಿ ಚಿನ್ನ, ಹಣದ ಬ್ಯಾಗ್ ನಾಪತ್ತೆ ಆರೋಪ ಪ್ರಕರಣದ ಬಗ್ಗೆ ಖುದ್ದು ಗೃಹ ಸಚಿವ ಪರಮೇಶ್ವರ್ ಆತಂಕ ವ್ಯಕ್ತಪಡಿಸಿದ್ರು.
ಯಾರೇ ಇದ್ರೂ ಕಾನೂನಿಗೆ ವಿರುದ್ಧವಾಗಿ ಚಟುವಟಿಕೆ ಮಾಡಿದ್ರೆ ಕ್ರಮ ತಗೋತೇವೆ. ಅವರು ಯಾವ ಪಕ್ಷದವ್ರು ಅನ್ನೋದು ಆಮೇಲೆ. ಕಾನೂನು ಕ್ರಮ ತಗೊಂಡೇ ತಗೊಳ್ತೇವೆ. ಅವರು ಯಾರಿಗೇ ಆಪ್ತರಿದ್ರೂ ಯಾರೂ ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಿ ಅಂತ ಆಪ್ತರು ಹೇಳಲ್ಲ. ಕಾನೂನಿನಲ್ಲಿ ಏನು ಕ್ರಮ ಇದೆಯೋ ಅದರಂತೆ ಪೊಲೀಸರು ಕ್ರಮ ತಗೋತಾರೆ ಅಂತ ಹೇಳಿದ್ರು.
ಇನ್ನು ಬೈರತಿ ಬಸವರಾಜು ತಲೆಮರೆಸಿಕೊಂಡಿರುವ ವಿಚಾರ ಬಗ್ಗೆ ಮಾತಾಡಿ, ಅವರಾಗಿ ಅವರೇ ಬಂದು ಸರೆಂಡರ್ ಆದ್ರೆ ಒಳ್ಳೇದು. ಇಲ್ಲಾಂದ್ರೆ ಪೊಲೀಸರು ಅವರನ್ನು ಹುಡುಕ್ತಾರೆ ಅಂತ ಪರಮೇಶ್ವರ್ ತಿಳಿಸಿದ್ರು.
Laxmi News 24×7