Breaking News

ಬಿಗ್‌ಬಾಸ್‌ ಮನೆಯಿಂದ ಧನುಶ್ರೀ ಔಟ್‌?

Spread the love

ಬಿಗ್‌ಬಾಸ್‌ ಸೀಸನ್‌-8ರ ಮೊದಲ ವಾರ ಮನೆಯಿಂದ ಹೊರಹೋಗೋ ಸ್ಪರ್ಧಿ ಯಾರು? ಭಾನುವಾರ ಎಲ್ಲರ ತಲೆಗೆ ಹುಳ ಬಿಟ್ಟಿರೋ ಪ್ರಶ್ನೆ ಇದು. ಶನಿವಾರ ಎಪಿಸೋಡ್‌ಗಳಲ್ಲಿ ಎಲಿಮನೇಷನ್‌ ನಡೀತಾ ಇತ್ತು. ಆದ್ರೆ, ಈ ವಾರ ಎಲಿಮನೇಷನ್‌ ರೌಂಡ್‌ನ ಭಾನುವಾರಕ್ಕೆ ಮುಂದೂಡಲಾಗಿದ.

 

ನಿನ್ನೆಯ ಎಪಿಸೋಡ್‌ನಲ್ಲಿ ಶುಭಾ ಪೂಂಜಾ ಹಾಗೂ ಗಾಯಕ ವಿಶ್ವನಾಥ್‌ ಸೇವ್ ಆಗಿದ್ದಾರೆ. ಇನ್ನೂ ನೇರವಾಗಿ ನಾಮಿನೇಟ್ ಆಗಿರೋ ನಿರ್ಮಲಾ, ರಘು ಗೌಡ ಹಾಗೂ ಟಿಕ್‌ಟಾಕ್‌ ಸ್ಟಾರ್ ಧನುಶ್ರೀ ಡೇಂಜರ್‌ ಝೋನ್‌ನಲ್ಲಿದ್ದಾರೆ. ಈ ಮೂವರಲ್ಲಿ ಯಾರು ಎಲಿಮನೇಟ್ ಆಗ್ಬಹುದು ಅಂತಾ ಎಲ್ಲರೂ ಚರ್ಚೆ ಮಾಡ್ತಿದ್ದಾರೆ.

 

ನಮಗೆ ಸಿಕ್ಕಿರೋ ಮಾಹಿತಿಯ ಪ್ರಕಾರ ಟಿಕ್‌ಟಾಕ್‌ ಸ್ಟಾರ್‌ ಧನುಶ್ರೀ ಎಲಿಮನೇಟ್ ಆಗೋ ಚಾನಸ್ಸ್ ಜಾಸ್ತಿ ಇದೆ. ಕಳಪೆ ಬೋರ್ಡ್‌ ತೆಗೆದುಕೊಂಡು ಜೈಲಿಗೋ ಹೋಗಿದ್ದ ಧನುಶ್ರೀ ವಾರ ಪೂರ್ತಿ ಸೈಲಾಂಟಾಗಿದ್ದೇ ಹೆಚ್ಚು. ಮನೆಯವರ ಜೊತೆ ಹೆಚ್ಚು ಮಾತನಾಡದೇ ಸುಮ್ಮನಿದ್ದ ಧನುಶ್ರೀ, ಈ ವಾರ ಮನೆಯಿಂದ ಹೊರ ಬರೋ ಸಾಧ್ಯತೆ ದಟ್ಟವಾಗಿದೆ. ಆರಂಭದಲ್ಲಿ ಮೇಕಪ್ ವಿಚಾರವಾಗಿ ಟ್ರೋಲ್ ಆಗಿದ್ದ ಧನುಶ್ರೀ, ನಂತರ ಫುಲ್ ಡಲ್ ಹೊಡೆದು ಬಿಟ್ಟರು.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ