ಬೆಳಗಾವಿಯಲ್ಲಿ ಪೆಟ್ರೋಲ್, ಡೀಸಲ್ ಕೊರತೆ ಉಂಟಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿ ಸುದ್ದಿ ಹರಡಾಡಿದ ಪರಿಣಾಮ ಎಲ್ಲಾ ಬಂಕ್ ಗಳಲ್ಲಿ ಇಂಧನ ತುಂಬಿಸಿಕೊಳ್ಳಲು ವಾಹನ ಸವಾರರು ಮುಗಿಬಿದಿದ್ದರು. ಈ ವೇಳೆ ಹೋಡೆದಾಡಿಕೊಂಡ ಯುವಕರಿಗೆ ಪೊಲೀಸರು ಶಾಕ್ ನೀಡಿದ್ದಾರೆ.
ಬೆಳಗಾವಿ ನಗರದ ರಾಮದೇವ ಹೋಟೆಲ್ ಪಕ್ಕದ ಪೆಟ್ರೋಲ್ ಬಂಕ್ ಬಳಿ ನಡೆದ ಭೀಕರ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ಈಗ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ಇನ್ನು ಮುಂದೆ ಪೆಟ್ರೋಲ್ ಬಂಕ್ಗಳ ಬಳಿ ಇಂತಹ ಗಲಾಟೆಗಳು ನಡೆದರೆ ಅಥವಾ ಅಶಿಸ್ತು ತೋರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.
Laxmi News 24×7