Breaking News

ಶತಮಾನದ ಸಾಧಕ ಡಾ.ಪ್ರಭಾಕರ – ಸಚಿವ ವಿ.ಸೋಮಣ್ಣ

Spread the love

ಬೆಳಗಾವಿ: ಶಿಕ್ಷಣ, ಕೃಷಿ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಡಾ.ಪ್ರಭಾಕರ ಕೋರೆ ಕೊಡುಗೆ ಅಪಾರವಾದುದು. ಅವರ ಸಮಾಜಮುಖಿ ಸೇವೆ, ಧಾರ್ಮಿಕತೆಯ ಮನಸ್ಸು ಅವರನ್ನು ಎತ್ತರಕ್ಕೆ ಬೆಳೆಸಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಶ್ಲಾಘಿಸಿದರು.
ನಗರದ ಡಾ.ಪ್ರಭಾಕರ ಕೋರೆಯವರ ಸ್ವಗೃಹಕ್ಕೆ ಶನಿವಾರ ಆಗಮಿಸಿ, ಪದ್ಮಶ್ರೀಗೆ ಭಾಜನರಾಗಿದ್ದಕ್ಕಾಗಿ ಸತ್ಕರಿಸಿ ಬಳಿಕ ಕುಶಲೋಪಹರಿ ವಿಚಾರಿಸಿ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯನ್ನು ಜಾಗತಿಕವಾಗಿ ವಿಸ್ತರಿಸಿದ ಕೋರೆ ಅವರು ಸಮಾಜ ಸೇವೆಯನ್ನು ಒಂದು ವ್ರತವನ್ನಾಗಿಸಿ ಸ್ವೀಕರಿಸಿ ಶ್ರಮಿಸಿದವರು. ಯುವಶಕ್ತಿಗೆ ಒಂದು ರೋಲ್ ಮಾಡೆಲ್ ಆಗಿರುವ ಅವರು ಶತಮಾನ ಕಂಡ ಅಭೂತರ್ಪೂವ ವ್ಯಕ್ತಿ ಎಂದು ಬಣ್ಣಿಸಿದರು.
ರಾಜ್ಯ ಸರ್ಕಾರದ ಮಾಜಿ ಮುಖ್ಯ ಸಚೇತಕ, ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ, ಮಾಜಿ ಸಂಸದ ರಮೇಶ ಕತ್ತಿ, ಸುಭಾಸ ಪಾಟೀಲ, ಮಲ್ಲಿಕಾರ್ಜುನ ಮಾದಮ್ಮನವರ ಇತರರಿದ್ದರು.

Spread the love

About Laxminews 24x7

Check Also

ಅಕ್ರಮ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯ

Spread the loveಬೆಳಗಾವಿ: ಮಹಾನಗರ ಪಾಲಿಕೆ 8 ಮತ್ತು 9 ವಾರ್ಡ್‌ನಲ್ಲಿನ  ಆಸ್ತಿಗಳಿಗೆ ಮತ್ತೊಬ್ಬರ ಹೆಸರಿನಲ್ಲಿ ಬಾಂಡ್ ಆಧಾರದ ಮೇಲೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ