Breaking News

ಬೆಳಗಾವಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ; ದೇಶದ ನಾನಾ ರಾಜ್ಯದಿಂದ ಬಂದ ಶ್ವಾನಗಳು

Spread the love

ಬೆಳಗಾವಿ ನಗರದ ಶಗುನ್ ಗಾರ್ಡನ್​ನಲ್ಲಿ 1000ಕ್ಕೂ ಅಧಿಕ ಶ್ವಾನಗಳ ಪ್ರದರ್ಶನ

ಭಾನುವಾರ (ಅ.30) ವಿಕೇಂಡ್ ಇದ್ದ ಹಿನ್ನೆಲೆ ಕುಂದಾನಗರಿಯಲ್ಲಿ ಶ್ವಾನಗಳ ಭರ್ಜರಿ ಪ್ರದರ್ಶನ ನಡೆಯಿತು. ವರ್ಷಕ್ಕೊಮ್ಮೆ ನಡೆಯುವ ಈ ಶ್ವಾನಗಳ ಪ್ರದರ್ಶನಕ್ಕೆ ದೇಶದ ನಾನಾ ರಾಜ್ಯಗಳಿಂದ ಶ್ವಾನಗಳು ಬಂದಿರುತ್ತವೆ.

ಎರಡು ದಿನದಲ್ಲಿ ಸಾವಿರಕ್ಕೂ ಅಧಿಕ ಶ್ವಾನಗಳು, 43 ವಿವಿಧ ತಳಿಗಳು ಪ್ರದರ್ಶನದಲ್ಲಿ ಭಾಗಿಯಾಗಿ ಟ್ರೋಫಿ ಮುಡಿಗೇರಿಸಿಕೊಂಡಿವೆ. ಅಷ್ಟಕ್ಕೂ ಯಾವೆಲ್ಲಾ ತಳಿಗಳು ಭಾಗಹಿಸಿದ್ದವೂ? ಹೇಗೆ ಶ್ವಾಗಳನ್ನ ಇಲ್ಲಿ ಆಯ್ಕೆ ಮಾಡಿ ಟ್ರೋಫಿ ನೀಡಲಾಯಿತು? ಇಲ್ಲಿದೆ ಮಾಹಿತಿ

 

ಒಂದಕ್ಕಿಂತ ಒಂದು ಸಿಂಗಾರಗೊಂಡು ಮುದ್ದಾಗಿ ಕಾಣುತ್ತಿರುವ ಶ್ವಾನಗಳು, ತಮ್ಮ ವೈಯಾರದ ನಡಿಗೆಯಿಂದಲೇ ನೋಡುಗರ ಗಮನ ಸೆಳೆದ ವಿವಿಧ ತಳಿಯ ನಾಯಿಗಳು. ಗೆದ್ದ ಶ್ವಾನಕ್ಕೆ ಟ್ರೋಫಿ, ವಿಕೇಂಡ್​ನಲ್ಲಿ ಭರ್ಜರಿ ಶ್ವಾನ ಪ್ರದರ್ಶನ ನೋಡಿ ಎಂಜಾಯ್ ಜನರು ಮಾಡಿದರು. ಈ ಶ್ವಾನ ಪ್ರದರ್ಶನ ನಡೆದಿದ್ದು, ಬೆಳಗಾವಿ ನಗರದ ಶಗುನ್ ಗಾರ್ಡನ್​ನಲ್ಲಿ. ಎರಡು ದಿನಗಳ ಕಾಲ ನಡೆದ ಈ ಶ್ವಾನ ಪ್ರದರ್ಶನದಲ್ಲಿ ಬರೋಬ್ಬರಿ 1000ಕ್ಕೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗಿಯಾಗುವುದರ ಮೂಲಕ ನೋಡುಗರಣ್ಣ ಸೆಳೆದಿವೆ.

ರವಿವಾರ (ಅ.30) ರಂದು 367ಕ್ಕೂ ಅಧಿಕ ಶ್ವಾನಗಳು 43ವಿವಿಧ ಬಗೆಯ ತಳಿಗಳು ಭಾಗಿಯಾಗಿದ್ದವು. ಮುಖ್ಯವಾಗಿ ನಮ್ಮದೇ ರಾಜ್ಯದ ಪ್ರಸಿದ್ಧ ಮುದೋಳ ನಾಯಿ ಸೇರಿದಂತೆ ಜರ್ಮನ್ ಶಫರ್ಡ್, ರಾಟ್ ವೇಲರ್, ಡಾಬರ್ ಮ್ಯಾನ್, ಇಂಗ್ಲಿಷ್ ಕ್ವಾಕರ್, ಗೋಲ್ಡನ್ ರಿಟ್ರೀವರ್, ರಾಜಪಾಳಿ, ಕನ್ನಿ, ಕಾರ್ವಾನಾ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಇನ್ನೂ ಪ್ರತಿಯೊಂದು ಶ್ವಾನವನ್ನ ವಿಭಿನ್ನವಾಗಿ ರೆಡಿ ಮಾಡಿಕೊಂಡು ಬರಲಾಗಿತ್ತು, ಸ್ಪರ್ಧೆಗೂ ತಯಾರಿ ನಡೆಸಿ ಮತ್ತೆ ಅವುಗಳಿಗೆ ಮೇಕಪ್ ಮಾಡಿ ಸಿದ್ದಪಡಿಸುವ ದೃಶ್ಯ ಕೂಡ ಕಂಡು ಬಂತು.

 

ಎರಡು ದಿನಗಳ ಕಾಲ ನಡೆದ ಈ ಶ್ವಾನ ಪ್ರದರ್ಶನದಲ್ಲಿ ಶ್ವಾನಗಳ ನಡುವೆ ಸ್ಪರ್ಧೆ ಕೂಡ ಏರ್ಪಟ್ಟಿತ್ತು. ಗೆದ್ದ ಶ್ವಾನಕ್ಕೆ ಟ್ರೋಫಿ ನೀಡುವುದರ ಜತೆಗೆ ಪಾಯಿಂಟ್ಸ್ ಕೂಡ ನೀಡಲಾಯಿತು. ಇನ್ನೂ ಸ್ಪರ್ಧೆಯಲ್ಲಿ ಭಾಗಿಯಾದ ಶ್ವಾನಗಳ ಓಟ, ನಡಿಗೆ, ಅವುಗಳ ಹಲ್ಲುಗಳ ಸ್ವಚ್ಛತೆ, ಆರೋಗ್ಯ ಮತ್ತು ಎಷ್ಟು ಸ್ಟ್ರಾಂಗ್, ಯಾವ ರೀತಿ ಅವುಗಳಿಗೆ ಆಹಾರ ನೀಡಲಾಗುತ್ತಿದೆ ಅನ್ನೊದು ಸೇರಿದಂತೆ ಹಲವು ಅಂಶಗಳನ್ನ ಗಮನಿಸಿ ಆಯ್ಕೆ ಮಾಡಲಾಯಿತು. ಈ ಶ್ವಾನ ಪ್ರದರ್ಶನಕ್ಕೆ ಬೆಳಗಾವಿ, ಬೆಂಗಳೂರು, ದೆಹಲಿ, ಮುಂಬೈ, ಕೇರಳ, ತಮಿಳುನಾಡು, ಗೋವಾ, ಆಂದ್ರಪ್ರದೇಶ, ಪಂಜಾಬ್, ಹರಿಯಾಣಾ, ಔರಾಂಗಾಬಾದ್, ಛತ್ತಿಸಗಡ ಸೇರಿದಂತೆ ಬೇರೆ ಬೇರೆ ರಾಜ್ಯಗಳಿಂದ ಶ್ವಾನಗಳು ಆಗಮಿಸಿ ಸ್ಪರ್ಧೆಯಲ್ಲಿ ಭಾಗವಹಿಸಿದವು.


Spread the love

About Laxminews 24x7

Check Also

ಮಹಿಷ ದಸರಾ | ಯಾರಿಗೂ ತೊಂದರೆ ಆಗದಂತೆ ಮಾಡಿಕೊಳ್ಳಬಹುದು: ಮಹದೇವಪ್ಪ

Spread the love ಮೈಸೂರು: ‘ಯಾರಿಗೂ, ಯಾವ ತೊಂದರೆಯೂ ಆಗದಂತೆ ಯಾರು ಬೇಕಾದರೂ ಅವರವರ ಧಾರ್ಮಿಕ ಆಚರಣೆ ಮಾಡಿಕೊಳ್ಳಬಹುದು’ ಎಂದು ಜಿಲ್ಲಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ