Breaking News

ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ನನ್ನು ಬಿಡುಗಡೆ ಮಾಡುತ್ತಿರುವುದು

Spread the love

ದೆಹಲಿ: ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ನನ್ನು ಬಿಡುಗಡೆ ಮಾಡುತ್ತಿರುವುದು ಶಾಂತಿಗಾಗಿ ಎಂದು ಹೇಳಿದ್ದ ಪಾಕಿಸ್ತಾನದ ನಿಜ ರೂಪ ಬಯಲಾಗಿದೆ. ಅಭಿನಂದನ್​ ಬಿಡುಗಡೆಗೆ ಕಾರಣ ಬಯಲಾಗಿದೆ. ಭಾರತದ ಆ ಬಂದು ಮಾತಿಗೆ ಹೆದರಿ ಪಾಪಿ ಪಾಕಿಸ್ತಾನ ಬಾಲು ಮುದುಡಿಕೊಂಡಿತ್ತು.

ಅಭಿನಂದನ್​ ಬಿಡುಗಡೆ ಮಾಡದಿದ್ರೆ ಭಾರತದಿಂದ ದಾಳಿ ಆಗುವ ಆತಂಕಕ್ಕೆ ಪಾಕ್​ ಸೇನೆ ಮುಖ್ಯಸ್ಥ ಖಮರ್ ಬಜ್ವಾ ಕಾಲುಗಳು ನಡುಗುತ್ತಿತ್ತು. 2019ರ ಪಾಕ್​ ಸರ್ವಪಕ್ಷ ಸಭೆ ಬಗ್ಗೆ ಪಾಕಿಸ್ತಾನ ಮುಸ್ಲಿಂ ಲೀಗ್​-ಎನ್​ ನಾಯಕ ಅಯಾಜ್ ಸಾದಿಕ್​ ಮಾಹಿತಿ ಹಂಚಿಕೊಂಡಿದ್ದಾರೆ. ಅಂದು ನಡೆದ ಸಭೆಯಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಆತಂಕ ವ್ಯಕ್ತಪಡಿಸಿದ್ದರು.

ವಿಂಗ್ ಕಮಾಂಡರ್ ಅಭಿನಂದನ್​ನನ್ನು ಬಿಡುಗಡೆ ಮಾಡದಿದ್ರೆ ರಾತ್ರಿ 9 ಗಂಟೆಯೊಳಗೆ ಭಾರತ ದಾಳಿ ಮಾಡುತ್ತೆ ಎಂಬ ಆತಂಕ ಅವರಿಗಿತ್ತು.

ಹೀಗಾಗಿ ಇಮ್ರಾನ್ ಖಾನ್ ಸರ್ಕಾರವು ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಥಮಾನ್ ಅವರನ್ನು ಭಾರತಕ್ಕೆ ಮರಳಿ ಕಳಿಸಿತ್ತು ಎಂದಿದ್ದಾರೆ.

 


Spread the love

About Laxminews 24x7

Check Also

ಬೆಳಗಾವಿ: ಸವದತ್ತಿ ಯಲ್ಲಮ್ಮನ ದೇವಸ್ಥಾನದ ಹುಂಡಿಯಲ್ಲಿ 97.49 ಲಕ್ಷ ರೂ. ಕಾಣಿಕೆ ಸಂಗ್ರಹ

Spread the loveಬೆಳಗಾವಿ: ಸವದತ್ತಿ ಯಲ್ಲಮ್ಮನ ದೇವಸ್ಥಾನದ ಹಂಡಿಯಿಂದ 97.49 ಲಕ್ಷ ರೂ. ಮೌಲ್ಯದ ಕಾಣಿಕೆ ಸಂಗ್ರಹಗೊಂಡಿದೆ. ಮಾರ್ಚ್ 6 …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ