Breaking News

ಅರ್ಜಿ ಹಾಕಿದ್ದ ಅಭ್ಯರ್ಥಿಗಳಿಗೆ ಗುಡ್‌ ನ್ಯೂಸ್: 1,40 ಲಕ್ಷ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರು

Spread the love

ನವದೆಹಲಿ, : ಭಾರತೀಯ ರೈಲ್ವೆಯಲ್ಲಿನ ನೇಮಕಾತಿ ಪ್ರಕ್ರಿಯೆ ಡಿಸೆಂಬರ್ 15ರಿಂದ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆಗಳನ್ನು ನಡೆಸಲು ಪ್ರಾರಂಭಿಸಲಿದೆ.

ಈ ಕುರಿತು ರಾಷ್ಟ್ರೀಯ ಸಾರಿಗೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ತಿಳಿಸಿದ್ದಾರೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ 1,40,640 ಹುದ್ದೆಗಳಿಗೆ ಕೊರೋನಾ ಭೀತಿ ಶುರುವಾಗುವ ಮುನ್ನ ಅರ್ಜಿ ಆಹ್ವಾನಿಸಲಾಗಿತ್ತು.

ಬಳಿಕ ಕೊರೋನಾ ಸಂಕಷ್ಟದಿಂದಾಗಿ ಈ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಇದೀಗ ಅವುಗಳ ನೇಮಕಾತಿ ಪ್ರಕ್ರಿಯೆ ಇದೇ ಡಿ.15ರಿಂದ ಆರಂಭವಾಗಲಿದೆ.

ಅಂಚೆ ಇಲಾಖೆಯಲ್ಲಿ ನೇಮಕಾತಿ: ವಿದ್ಯಾರ್ಹತೆ 10ನೇ ತರಗತಿ

1,40,640 ಹುದ್ದೆಗಳಿಗೆ 2.42 ಕೋಟಿ ಅರ್ಜಿಗಳು ಬಂದಿವೆ. ಈ ಅರ್ಜಿಗಳನ್ನು ಮುಂದಿನ ಹಂತಕ್ಕಾಗಿ ಈಗಾಗಲೇ ಅಂತಿಮಗೊಳಿಸಲಾಗಿದೆ.

ವಿ.ಕೆ.ಯಾದವ್ ಮಾಹಿತಿ ನೀಡಿದ್ದಾರೆ.

ಗಾರ್ಡ್​, ಕ್ಲರ್ಕ್​, ಟ್ರ್ಯಾಕ್​ ನಿರ್ವಹಣಕಾರ, ಪಾಯಿಂಟ್ಸ್​ಮೆನ್​ಗ ಹುದ್ದೆಗಳಿನ್ನು ಇದು ಒಳಗೊಂಡಿದೆ. ಈ ಕುರಿತು ರೈಲ್ವೆ ಸಚಿವ ಪಿಯೂಷ್​ ಗೋಯಲ್​ ಕೂಡ ಟ್ವಿಟರ್‌ ಮೂಲಕ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದ್ದಾರೆ.


Spread the love

About Laxminews 24x7

Check Also

ಪ್ರೀತಿಸುವಂತೆ ಸಹಪಾಠಿ ಒತ್ತಾಯಿಸಿದ್ದಕ್ಕೆ ಮಹಡಿ ಮೇಲಿಂದ ಹಾರಿ ವಿದ್ಯಾರ್ಥಿನಿ ಸೂಸೈಡ್

Spread the loveಬೀದರ್: ಪ್ರೀತಿಸುವಂತೆ ಸಹಪಾಠಿ ಒತ್ತಾಯಿಸಿದ್ದಕ್ಕೆ ಬೇಸತ್ತು ಶಾಲೆಯ ಮಹಡಿ ಮೇಲಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ದಾರುಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ