Breaking News

ಹೊರರಾಜ್ಯದಿಂದ ಧಾರವಾಡಕ್ಕೆ ಆಗಮಿಸಿದ 665 ಮಂದಿಗೆ ಕ್ವಾರಂಟೈನ್- 103 ಮಂದಿಗೆ ಗಂಟಲು ದ್ರವ ಪರೀಕ್ಷೆ

Spread the love

ಧಾರವಾಡ: ಕಳೆದ 6 ದಿನಗಳಿಂದ ಜಿಲ್ಲೆಗೆ ಹೊರ ರಾಜ್ಯದಿಂದ ಒಟ್ಟು 665 ಜನ ವಲಸೆ ಕಾರ್ಮಿಕರು ಹಾಗೂ ಜಿಲ್ಲೆಯಿಂದ ಹೋಗಿದ್ದ ಯಾತ್ರಿಕರು ಆಗಮಿಸಿದ್ದಾರೆ. ಅವರೆಲ್ಲರನ್ನು ಧಾರವಾಡ ನಗರದಿಂದ ಹೊರಗೆ ಇರುವ ಕೃಷಿ ವಿವಿ ಆವರಣದಲ್ಲಿ ತಡೆದು ತಪಾಸಣೆ ಮಾಡಿ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.

ನಿನ್ನೆಯಷ್ಟೇ ಗುಜರಾತಿನ ಅಹ್ಮದಾಬಾದ್‍ನಿಂದ ಆಗಮಿಸಿದ್ದ 9 ಜನರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆ ಹೊರ ರಾಜ್ಯದಿಂದ ಬರುವವರ ಮೇಲೆ ಕಟ್ಟೆಚ್ಚರ ವಹಿಲಾಗಿದೆ. ಸದ್ಯ ಆಂಧ್ರಪ್ರದೇಶ್‍ನಿಂದ 38, ಗೋವಾ 168, ಗುಜರಾತ್ 46, ಕೇರಳ ಮತ್ತು ಮಧ್ಯ ಪ್ರದೇಶದಿಂದ ತಲಾ 2, ಮಹಾರಾಷ್ಟ್ರದಿಂದ 296, ರಾಜಸ್ಥಾನದಿಂದ 14, ತಮಿಳುನಾಡಿನಿದ 51, ತೆಲಂಗಾಣಾದಿಂದ 41 ಹಾಗೂ ಉತ್ತರ ಪ್ರದೇಶದಿಂದ 7 ಜನ ಜಿಲ್ಲೆಗೆ ಆಗಮಿಸಿದ್ದಾರೆ.

ದೇಶದ ಪ್ರಮುಖ ಕೊರೊನಾ ಹಾಟ್‍ಸ್ಪಾಟ್ ರಾಜ್ಯಗಳಿಂದ ಆಗಮಿಸಿದ ಇವರಲ್ಲಿ 103 ಮಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ.  223 ಜನರಿಗೆ ಹೊಟೇಲ್ ಕ್ವಾರಂಟೈನ್ ಹಾಗೂ 442 ಜನರಿಗೆ ಸಾಂಸ್ಥಿಕ ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.


Spread the love

About Laxminews 24x7

Check Also

ರಾಷ್ಟ್ರ ಮಟ್ಟದಲ್ಲಿ ವೈರಲ್ ಆಯ್ತು ವಿಡಿಯೋ; ನರ್ತಕಿ ಮೇಲೆ ಹಣ ತೂರಿದ ಕಾಂಗ್ರೆಸ್ ಮುಖಂಡ!

Spread the love ಧಾರವಾಡ: ನಿನ್ನೆ ನರ್ತಕಿಯೊಬ್ಬರ ಮೇಲೆ ಹಣ ತೂರಿದ್ದ ಕಾಂಗ್ರೆಸ್​ ಮುಖಂಡನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದು ದಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ