ಧಾರವಾಡ: ಕೊರೊನಾ ಮಹಾಮಾರಿಗೆ ವ್ಯಾಕ್ಸಿನ್ ಸಿಗುವವರೆಗೆ ಶಾಲೆ ಬೇಡ ಎಂದು ಧಾರವಾಡದ ಶಾಲಾ ಮಕ್ಕಳ ಪೋಷಕರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಕೊರೊನಾ ಬಗ್ಗೆ ಮಕ್ಕಳಿಗೆ ತಿಳುವಳಿಕೆ ಇಲ್ಲ, ಹೀಗಾಗಿ ಶಾಲೆಗೆ ಹೋದರೆ ಮಕ್ಕಳೆಲ್ಲ ಊಟಕ್ಕೆ ಹಾಗೂ ಆಟದಲ್ಲಿ ಗುಂಪಾಗಿ ಭಾಗವಹಿಸ್ತಾರೆ ಎಂದು ಬಹುತೇಕ ಪೋಷಕರು ಹೇಳುತ್ತಿದ್ದಾರೆ. ಅಲ್ಲದೆ ಮಕ್ಕಳು ಶಾಲೆಗೆ ಹೋಗಬೇಕಾದ್ರು ಆಟೋ ಹಾಗೂ ವ್ಯಾನ್‍ಗಳಲ್ಲಿ ಒಟ್ಟಿಗೆ ಕುಳಿತುಕೊಳ್ಳಬೇಕಾಗುತ್ತೆ. ಈ ಸಂದರ್ಭದಲ್ಲಿ ಒಂದು ಮಗುವಿಗೆ ಏನಾದ್ರು ಕೊರೊನಾ ಇದ್ರೆ ಅದು ಎಲ್ಲ ಮಕ್ಕಳಿಗೆ ಹಬ್ಬಲಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ.
ಮಕ್ಕಳು ಶಾಲೆಗೆ ಹೋಗಿ ಬರುವವರೆಗೆ ಪೋಷಕರಿಗೂ ಭಯ ಇರುತ್ತೆ ಎಂದು ಕೆಲ ಪೋಷಕರು ಹೇಳುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಗಳಿಂದ ಸದ್ಯಕ್ಕೆ ಸರ್ಕಾರ ಶಾಲೆ ಆರಂಭ ಮಾಡುವ ಬಗ್ಗೆ ಚಿಂತನೆ ಮಾಡೊದು ಅಷ್ಟು ಸೂಕ್ತವಲ್ಲ ಎಂದಿದ್ದಾರೆ.
ಇನ್ನೊಂದೆಡೆ ಮಕ್ಕಳ ಪೋಷಕರು, ‘ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸಲ್ಲ. ನನ್ನ ಮಕ್ಕಳ ಶಿಕ್ಷಣಕ್ಕಿಂತ ಆರೋಗ್ಯ ಮುಖ್ಯ’ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭಿಸಿದ್ದಾರೆ.