Breaking News

ಸಿ.ಟಿ.ರವಿ ವಿರುದ್ಧ ಕ್ರಮಕ್ಕೆ ಆಗ್ರಹ

Spread the love

ಬೆಂಗಳೂರು: ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹಮದ್‌ ವಿರುದ್ಧ ಆಕ್ಷೇಪಣಾ ಪದ ಬಳಸಿದ್ದ ಬಿಜೆಪಿ ಸದಸ್ಯ ಸಿ.ಟಿ.ರವಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತ ಪಕ್ಷ ಸಭಾಪತಿಗಳಿಗೆ ಒತ್ತಾಯಿಸಿದ ಪರಿಣಾಮ ವಿಧಾನಪರಿಷತ್‌ನಲ್ಲಿ ಕಾವೇರಿದ ಬಿಸಿ ಬಿಸಿ ಚರ್ಚೆ ನಡೆಯಿತು.

ಒಂದು ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಕ್ಸಮರವು ನಡೆಯಿತು. ಗಮನ ಸೆಳೆಯುವ ಹಾಗೂ ಲಿಖಿತ ಮೂಲಕ ಪ್ರಶ್ನೆಗಳಿಗೆ ಉತ್ತರಿಸುವುದು ಮುಗಿದ ನಂತರ ಸಭಾಪತಿ ಹೊರಟ್ಟಿಯವರಿಗೆ ಮುಖ್ಯ ಸಚೇತಕ ಸಲೀಂ ಅವರು ವಿಷಯ ಪ್ರಸ್ತಾಪಿಸಿದ್ದು, ಸದನದಲ್ಲಿ ತೀವ್ರ ಚರ್ಚೆಗೆ ಎಡೆ ಮಾಡಿಕೊಟ್ಟಿತು. ಕಾಂಗ್ರೆಸ್‌‍ ಸದಸ್ಯ ನಸೀರ್‌ ಅಹಮದ್‌ ಅವರನ್ನು ನಿಮದು ಪಾಕಿಸ್ತಾನ ನಾಲಿಗೆಯಾ ಎಂದು ಬಿಜೆಪಿ ಸದಸ್ಯ ಸಿ.ಟಿ.ರವಿ ಅವರು ಹೇಳಿದ್ದಾರೆ.

ಇದು ಅತ್ಯಂತ ಹಗುರವಾದ ಮಾತು ಹೀಗಾಗಿ ಅವರು ಬೇಷರತ್‌ ವಿಷಾದ ವ್ಯಕ್ತಪಡಿಸಬೇಕು. ಇಲ್ಲವೇ ಸಭಾಪತಿಗಳು ಆದೇಶ ನೀಡಬೇಕೆಂದು ಮನವಿ ಮಾಡಿದರು.ಪರಿಷತ್‌ ಛಲವಾದಿ ನಾರಾಯಣ ಸ್ವಾಮಿ ಅವರು, ಸಿ.ಟಿ.ರವಿ ವಿಚಾರ ಈಗಾಗಲೇ ಮುಗಿದ ಅಧ್ಯಾಯ.

ಸದನ ಮುಂದಕ್ಕೆ ಹೋದ ಬಳಿಕ ಹಿಂದಕ್ಕೆ ಬರಲು ಆಗುವುದಿಲ್ಲ. ಪೀಠ ಆದೇಶ ಮಾಡಿದೆ ಎನ್ನುವುದು ಸತ್ಯಕ್ಕೆ ದೂರವಾದ ಮಾತು. ಇದು ಅಸಾಂವಿಧಾನಕ ಪದ ಅಲ್ಲ. ಆದರೂ ಅವರಿಗೆ ನೋವಾಗುತ್ತದೆ. ಹಾಗಾಗಿ ಕಡತದಿಂದ ತೆಗೆಯುತ್ತೇನೆ ಎಂದಿದ್ದೀರ. ಅದನ್ನು ಅವರ ಆತಾವಲೋಕನಕ್ಕೆ ಬಿಡುತ್ತೇನೆ ಎಂದು ಸಭಾಪತಿ ಹೇಳಿದ್ದಾರೆ. ಅವರು ಆ ನಾಲಿಗೆ ಯಾವುದು ಎಂಬುದನ್ನು ಕಂಡು ಹಿಡಿಯಿರಿ ಎಂದು ಪೀಠಕ್ಕೆ ಸಿ.ಟಿ.ರವಿ ಹೇಳಿದ್ದರು. ಅದನ್ನು ತಾವು ಕಂಡು ಹಿಡಿದಿದ್ದೀರ ಎಂದು ತಿಳಿಸಿದರು.

ಪ್ರಧಾನ ಮಂತ್ರಿಗಳ ವಿರುದ್ಧ ಒಂದು ಬಾರಿ ಪ್ರಸ್ತಾಪ ಮಾಡಿದರು. ಆದರೆ ಪದೇ ಪದೇ ಅದು ಚರ್ಚೆಗೆ ಬಂದು ನಾಗರಾಜ್‌ ಯಾದವ್‌ ಅವರು ಪೀಠಕ್ಕೆ ಒಂದು ಮಾತನ್ನು ಹೇಳಿದ್ದರು ಎಂದರು.
ಆಗ ಸದಸ್ಯ ಮಧ್ಯಪ್ರವೇಶ ಮಾಡಿದ ಯಾದವ್‌, ನಾನು ಸದನದಲ್ಲಿ ಮಾತನಾಡಿಲ್ಲ. ಇದರ ಬಗ್ಗೆ ಚರ್ಚೆಯಾಗಲಿ ಎಂದು ಒತ್ತಾಯಿಸಿದರು. ಮಾತು ಮುಂದುವರೆಸಿದ ಛಲವಾದಿ ನಾರಾಯಣಸ್ವಾಮಿ, ಪೀಠಕ್ಕೆ ಅಪಮಾನ ಆಗಿದೆ ಎಂದಿದ್ದರು. ತಕ್ಷಣ ಹರಿಪ್ರಸಾದ್‌ ಯಾದವ್‌ ಅವರಿಗೆ ಸೂಚನೆ ನೀಡಿ ಕ್ಷಮೆ ಯಾಚಿಸುವಂತೆ ಹೇಳಿದರು.

ಅದು ಅಲ್ಲಿಗೆ ಮುಗಿಯಿತು. ಆದರೆ ಈ ವಿಚಾರ ಮೂರು ದಿನ ನಡೆದಿದೆ ಎಂದು ವಿವಾದವನ್ನು ಸುಖಾಂತ್ಯಗೊಳಿಸುವ ಪ್ರಯತ್ನ ಮಾಡಿದರು. ಈ ವೇಳೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್‌.ಕೆ. ಪಾಟೀಲ್‌ ಮಾತನಾಡಿ, ನಾವು ನಿನ್ನೆಯೂ ಹೇಳಿದ್ದೆವು. ಐದು ಬಾರಿ ಪೀಠ ಮಾರ್ಗದರ್ಶನ ಮಾಡಿದೆ. ಪೀಠ ಮನವಿ ಮಾಡುವುದು ಅಂದರೆ ಏನು? ಇಬ್ಬರೂ ಸಭಾಪತಿಗಳು ಹೇಳಿದರು. ಸಭಾಪತಿ ಹೇಳಿದರು ಅಂದರೆ ಅದು ಕಮಾಂಡ್‌ ಮಾಡಿದ ಹಾಗೆ. ಎಲ್ಲದಕ್ಕೂ ಶಿಷ್ಟಾಚಾರ ಇವೆ. ಪೀಠ ಮನವಿ ಮಾಡುತ್ತದೆ. ಇದಕ್ಕೂ ಮೊದಲು ಅಂದರೆ ನೀವು ನಿರ್ಧಾರ ಮಾಡಬೇಕು. ನಸೀರ್‌ ಅವರಿಗೆ ಸಭಾಪತಿ ಹೇಳಿದ ತಕ್ಷಣ ಅವರು ಕ್ಷಮೆ ಯಾಚಿಸಿದರು.

ಈಗ ನೀವು ಕ್ಷಮೆ ಕೇಳಬೇಕಲ್ಲವೇ? ಇದನ್ನ ಮುಂದುವರೆಸುವುದರಲ್ಲಿ ಅರ್ಥ ಇಲ್ಲ. ನಿಮ ನಿಯಮವನ್ನು ಅವರು ಕೇಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೀಪಿಸಿದ ಛಲವಾದಿ ನಾರಾಯಣಸ್ವಾಮಿ, ನಸೀರ್‌ ಮಾಡಿದ್ದು ಘನಕಾರ್ಯ ಎನ್ನುವ ರೀತಿ ಸಮರ್ಥನೆ ಮಾಡುತ್ತಿದ್ದೀರಿ. ದೇಶದ ಪ್ರಧಾನಿಯನ್ನು ಟೀಕಿಸುವುದು ಎಷ್ಟು ಸರಿ? ಇದು ಮುಗಿದಿದೆ. ಈಗಾಗಲೇ ಸದನ ಆರಂಭ ಕೂಡ ಆಗಿದೆ. ಮುಂದೆ ಹೋಗಿದೆ ಹಿಂದೆ ಬರುವುದು ಬೇಡ ಎಂದು ಮನವಿ ಮಾಡಿಕೊಂಡರು.

ಆಗ ಕಾಂಗ್ರೆಸ್‌‍ ಪಕ್ಷದ ಹಿರಿಯ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರು, ನಾನು ಮೂರು ನಾಲ್ಕು ಜನ ಹೇಳಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದು, ಗದ್ದಲಕ್ಕೆ ಕಾರಣವಾಯಿತು.


Spread the love

About Laxminews 24x7

Check Also

ವಿಧಾನಸಭೆಯಲ್ಲಿ ʻಕುರ್ಚಿ ಕದನʼ ಪ್ರಸ್ತಾಪ; ಸಿಎಂ – ಡಿಸಿಎಂ ಒಗ್ಗಟ್ಟು ಪ್ರದರ್ಶನ

Spread the loveಬೆಂಗಳೂರು: ವಿಧಾನಸಭೆಯಲ್ಲಿ ಇಂದು ಪವರ್ ಶೇರ್ ವಿಚಾರ ಚರ್ಚೆಗೆ ಬಂದಾಗ ಸಿಎಂ ಸಿದ್ದರಾಮಯ್ಯ  ಹಾಗೂ ಡಿಸಿಎಂ ಡಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ