ನವದೆಹಲಿ: ಕೋವಿಡ್ 19 ನಿಂದ ಸಂಕಷ್ಟಕ್ಕೆ ಸಿಲುಕಿದ ಬೀದಿಬದಿ ವ್ಯಾಪಾರಿಗಳ ನೆರವಿಗೆ ಕೇಂದ್ರ ಸ್ಪಂದಿಸಿದ್ದು 5 ಸಾವಿರ ಕೋಟಿ ರೂ. ಸಾಲ ನೀಡಲಾಗುವುದು ಎಂದು ಹೇಳಿದೆ.
ನರೇಂದ್ರ ಮೋದಿ ಪ್ರಕಟಿಸಿದ 20 ಲಕ್ಷ ಕೋಟಿ ರೂ. ಪ್ಯಾಕೇಜ್‍ಗೆ ಸಂಬಂಧಿಸಿದಂತೆ ಎರಡನೇ ದಿನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಹಲವು ಪ್ಯಾಕೇಜ್ ಗಳನ್ನು ಪ್ರಕಟಿಸಿದರು.
ಮುಂದಿನ 1 ತಿಂಗಳ ಒಳಗಡೆ ಬೀದಿ ಬದಿಯ ವ್ಯಾಪಾರಿಗಳಿಗೆ ಸಾಲ ನೀಡಲು ವಿಶೇಷ ಯೋಜನೆಯನ್ನು ತರಲಾಗುವುದು. ಕನಿಷ್ಟ 10 ಸಾವಿರ ರೂ. ಬಂಡವಾಳ ಹೂಡುವ ಬೀದಿ ಬದಿಯ ವ್ಯಾಪಾರಿಗಳಿಗೆ ಇದು ನೆರವು ನೀಡಲಿದೆ.
ಒಟ್ಟಿ 50 ಲಕ್ಷ ಬೀದಿ ವ್ಯಾಪಾರಿಗಳಿಗೆ ನೆರವು ನೀಡಲು 5 ಸಾವಿರ ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.