Breaking News

ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಬಿಜೆಪಿ ಟಿಕೆಟ್ : ಶಾಸಕ ಯತ್ನಾಳ್ ಹೊಸ ಬಾಂಬ್!

Spread the love

ವಿಜಯಪುರ : ಏಪ್ರಿಲ್ ಒಂಬತ್ತರಂದು ಕರ್ನಾಟಕ ಉಪಚುನಾವಣೆ ನಡೆಯಲಿದ್ದು ಬಾಗಲಕೋಟೆ ಹಾಗೂ ದಾವಣಗೆರೆಯ ದಕ್ಷಿಣ ಕ್ಷೇತ್ರಕ್ಕೆ ಈ ಒಂದು ಉಪಚುನಾವಣೆ ನಡೆಯಲಿದೆ. ಈಗಾಗಲೇ ಬಿಜೆಪಿ ಬಾಗಲಕೋಟೆಗೆ ಮಾಜಿ ಶಾಸಕರಾದಂತಹ ವೀರಣ್ಣ ಚರಂತಿಮಠ ಹಾಗೂ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಶ್ರೀನಿವಾಸ್ ಟಿ ದಾಸಕರಿಯಪ್ಪಗೆ ಟಿಕೆಟ್ ಘೋಷಣೆ ಮಾಡಿದೆ.

ಆದರೆ ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಟಿಕೆಟ್ ಸಿದ್ದೇಶ್ವರ ಆಪ್ತಗೆ ನೀಡಿದ್ದಾರೆ. ಆದರೆ, ಇದು ಪಕ್ಕಾ ಅಲ್ಲ, ಕೊನೆ ಕ್ಷಣದಲ್ಲಿ ಟಿಕೆಟ್ ಬದಲಾದ್ರೂ ಆಶ್ಚರ್ಯ ಪಡಬೇಡಿ. ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಮುಗಿಯುವ ವರೆಗೂ ಇದನ್ನ ನಂಬುವ ಹಾಗಿಲ್ಲ. ಕಾಂಗ್ರೆಸ್ ಟಿಕೆಟ್ ಮುಸ್ಲಿಮರಿಗೆ ಕೊಟ್ಟರೆ ಇದು ಬದಲಾಗುತ್ತೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೊಸ ಬಾಂಬ್‌ ಸಿಡಿಸಿದ್ದಾರೆ.

ಶಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಸಿಗುತ್ತೆ. ಶಾಮನೂರು ಅವರ ಉಪಕಾರ ಪೂಜ್ಯ ತಂದೆ ಯಡ್ಡಿಯೂರಪ್ಪ, ಪುತ್ರರಾದ ರಾಘವೇಂದ್ರ, ವಿಜಯೇಂದ್ರ ಮೇಲೆ ತುಂಬಾ ಇದೆ. ರಾಘವೇಂದ್ರ ಹಾಗೂ ವಿಜಯೇಂದ್ರ ಗೆಲ್ಲಲು ಶಾಮನೂರು ಅವರ ಸಹಾಯ ಇದೆ. ಟಿಕೆಟ್ ಈಗ ಕೊಟ್ಟಿರೋದು ತಾತ್ಕಾಲಿಕ ಎಂದು ಯತ್ನಾಳ್‌ ಮಾತನಾಡಿದ್ದಾರೆ.

ಸಿದ್ದೇಶ್ವರ ಆಪ್ತಗೆ ಟಿಕೆಟ್ ಕೊಟ್ಟರೂ ಪೂಜ್ಯ ತಂದೆ ಹಾಗೂ ಮಕ್ಕಳು ಬಿಜೆಪಿ ಅಭ್ಯರ್ಥಿಯನ್ನ ಸೋಲಿಸುತ್ತಾರೆ. ಶಾಮನೂರು ಅವರ ಉಪಕಾರ ತೀರಿಸಲು ಕೊನೆ ಕ್ಷಣದಲ್ಲಿ ಏನು ಬೇಕಾದ್ರೂ ಮಾಡ್ತಾರೆ. ಬಾಗಲಕೋಟೆ ಅಭ್ಯರ್ಥಿ ಚರಂತಿಮಠ ಅವರು ಸೂಕ್ತ ಅಭ್ಯರ್ಥಿ ಇದ್ದಾರೆ.


Spread the love

About Laxminews 24x7

Check Also

ನಾಳೆ ವಿಜಯಪುರದಲ್ಲಿ ಕಿತ್ತೂರು ಕರ್ನಾಟಕ ಭಾಗದ ʻಜೆಡಿಎಸ್ ಬೆಳ್ಳಿಹಬ್ಬʼ ಸಮಾವೇಶ

Spread the loveವಿಜಯಪುರ: ಇಲ್ಲಿ ನಾಳೆ ಜೆಡಿಎಸ್ ಪಕ್ಷದಿಂದ ಜನತಾ ಸಮಾವೇಶ ನಡೆಯಲಿದೆ. ಕಿತ್ತೂರು ಕರ್ನಾಟಕ ಭಾಗದ ಜೆಡಿಎಸ್ ಬೆಳ್ಳಿಹಬ್ಬದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ