Breaking News

ರಾಬರ್ಟ್ ಗೆ 2 ಮುಖ್ಯ ಚಿತ್ರಮಂದಿರಗಳು..!

Spread the love

ಈ ಹಿಂದೆ ಸಿನಿಮಾಗಳು 1ಮುಖ್ಯ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿದ್ದವು. ಹೌದು ಬೆಂಗಳೂರಿನ ಕೆ ಜಿ ರಸ್ತೆಯಲ್ಲಿರುವ ಯಾವುದಾದರೂ ಒಂದು ಚಿತ್ರಮಂದಿರವನ್ನು ಮುಖ್ಯ ಚಿತ್ರಮಂದಿರ ಎಂದು ಘೋಷಿಸಿ ಚಿತ್ರಗಳನ್ನ ಬಿಡುಗಡೆ ಮಾಡಲಾಗುತ್ತಿತ್ತು ಆದರೆ ಇದೀಗ ಕಾಲ ಬದಲಾಗಿದೆ ಕೆಜಿ ರಸ್ತೆಯ ಚಿತ್ರಮಂದಿರ ಮಾತ್ರವಲ್ಲದೆ ಬೇರೆ ಚಿತ್ರಮಂದಿರಗಳನ್ನು ಸಹ ಮುಖ್ಯ ಚಿತ್ರಮಂದಿರ ಎಂದು ಘೋಷಿಸಲಾಗುತ್ತಿದೆ.

ಇದೀಗ ದರ್ಶನ್ ಅಭಿನಯದ ರಾಬರ್ಟ್ ಚಿತ್ರವನ್ನು ಸಹ 2ಮುಖ್ಯ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಮಾರ್ಚ್ 11 ರಂದು ಬಿಡುಗಡೆಯಾಗಲಿರುವ ರಾಬರ್ಟ್ ಚಿತ್ರಕ್ಕೆ ಕೆಜಿ ರಸ್ತೆಯ ಸಂತೋಷ್ ಮತ್ತು ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರಗಳನ್ನು ಮುಖ್ಯ ಚಿತ್ರಮಂದಿರ ಎಂದು ಘೋಷಣೆ ಮಾಡಲಾಗಿದೆ.
ರಾಬರ್ಟ್ ಚಿತ್ರದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಹುಟ್ಟಿಕೊಂಡಿತ್ತು ಸೋಮವಾರದಿಂದ ಎಲ್ಲೆಡೆ ಮುಂಗಡ ಬುಕಿಂಗ್ ಆರಂಭವಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

 


Spread the love

About Laxminews 24x7

Check Also

ಶಾಸಕ ಕೆ.ಸಿ.ವಿರೇಂದ್ರ ಪಪ್ಪಿಗೆ ಸೇರಿದ 50.33 ಕೋಟಿ ಮೌಲ್ಯದ 40 ಕೆ.ಜಿ. ಚಿನ್ನದ ಗಟ್ಟಿ ವಶ: ಇಡಿ

Spread the love ಬೆಂಗಳೂರು: ಆನ್‌ಲೈನ್ ಬೆಟ್ಟಿಂಗ್‌ ದಂಧೆ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ.ಸಿ.ವಿರೇಂದ್ರ ಪಪ್ಪಿ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ