Breaking News

ಊಟ ಬಡಿಸುವುದು ತಡವಾಯಿತೆಂದು ತಾಯಿಗೇ ಗುಂಡಿಟ್ಟ ಭೂಪ!

Spread the love

ನವದೆಹಲಿ: ರಾತ್ರಿ ತನಗೆ ಊಟ ಬಡಿಸಲು ತಡಮಾಡಿದಳು ಎಂದು ಪುತ್ರನೊಬ್ಬ ಗುಂಡಿಟ್ಟು ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ.
ಬಾವಾನಾ ಕೈಗಾರಿಕಾ ಪ್ರದೇಶದ ನಿವಾಸಿ ಬಾಲಾ ದೇವಿ (60) ಹತಳಾದ ತಾಯಿ. ಸೂರಜ್​ (26) ಹತ್ಯೆ ಮಾಡಿದವನು. ಆತನನ್ನು ಬಂಧಿಸಲಾಗಿದೆ. ಆತನ ಬಳಿ ಇದ್ದ ಅಕ್ರಮ ಪಿಸ್ತೂಲ್​ ಅನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂರಜ್​ ಶುಕ್ರವಾರ ರಾತ್ರಿ ಪಾನಮತ್ತನಾಗಿ ಮನೆಗೆ ಬಂದಿದ್ದ. ಬಾಲಾದೇವಿ ಇನ್ನೂ ಅಡುಗೆ ಮಾಡುತ್ತಿದ್ದಳು. ಮನೆಗೆ ಬರುತ್ತಲೇ ಊಟಕ್ಕೆ ಕೊಡುವಂತೆ ಸೂರಜ್​ ಒತ್ತಾಯಿಸಿದ್ದ. ಕಂಠಮಟ್ಟ ಕುಡಿದು ಬಂದಿದ್ದೀಯಾ. ಸ್ವಲ್ಪವಾದರೂ ನಶೆ ಇಳಿಯಲಿ. ಅಲ್ಲದೆ, ಇನ್ನೂ ಅಡುಗೆ ಆಗಬೇಕಿದೆ ಎಂದು ಬಾಲಾ ದೇವಿ ಹೇಳಿದ್ದಳು.

ಇದರಿಂದ ಕೆರಳಿದ ಸೂರಜ್​ ತನ್ನ ಬಳಿ ಇದ್ದ ಅಕ್ರಮ ಪಿಸ್ತೂಲು ಬಳಸಿ ತಾಯಿಯ ಮೇಲೆ ಗುಂಡು ಸಿಡಿಸಿದ. ಗುಂಡಿನ ಮೊರೆತ ಕೇಳಿದ ನೆರೆಹೊರೆಯವರು ತಕ್ಷಣವೇ ಬಾಲಾ ದೇವಿ ಅವರ ಮನೆಗೆ ಬಂದಿದ್ದರು. ಗುಂಡು ಹಾರಿಸಿದ್ದು ಸೂರಜ್​ ಎಂದು ಗೊತ್ತಾಗುತ್ತಲೇ ಆತನನ್ನು ಹಿಡಿದು ಚೆನ್ನಾಗಿ ಥಳಿಸಿ ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಿದರು ಎನ್ನಲಾಗಿದೆ.

ಬಾವಾನಾ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯೊಂದರಲ್ಲಿ ಸೂರಜ್​ ಕೆಲಸ ಮಾಡುತ್ತಿದ್ದ. ತನ್ನ ಪರಿಚಿತರೊಬ್ಬರಿಂದ ಅಕ್ರಮವಾಗಿ ಪಿಸ್ತೂಲ್​ ಖರೀದಿಸಿ ತನ್ನ ಬಳಿ ಇಟ್ಟುಕೊಂಡಿದ್ದ. ಕೋಪದ ಕೈಗೆ ಬುದ್ಧಿಯನ್ನು ಕೊಟ್ಟ ಆತ ಇದೀಗ ಅದನ್ನು ಬಳಸಿ ತನ್ನ ತಾಯಿಯನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

SSLC ಪರೀಕ್ಷೆ| 625 ಅಂಕದ ಬದಲು 525ಕ್ಕೆ ಇಳಿಕೆ

Spread the loveಬೆಂಗಳೂರು: ಇನ್ನು ಮುಂದೆ  ಎಸ್‌ಎಸ್‌ಎಲ್‌ಸಿ ಪರೀಕ್ಷೆ  625ರ ಬದಲಿಗೆ 525 ಅಂಕಗಳಿಗೆ ನಡೆಸಲು ಕರ್ನಾಟಕ ಸರ್ಕಾರ ಮಹತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ