ಬೆಂಗಳೂರು: ಡೇಟಿಂಗ್ ವೆಬ್ ಸೈಟ್ ನಲ್ಲಿ ಪರಿಯಚಯವಾದ ಯುವತಿಯೊಬ್ಬಳನ್ನು ನಂಬಿ ಚಾಲಕನೊಬ್ಬ ಹಣ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸುಂದರಿ ಬೀಸಿದ ಮೋಹದ ಬಲೆಗೆ ಬಿದ್ದ ಚಾಲಕ ಆಕೆ ಹೇಳಿದ ಬಣ್ಣದ ಮಾತುಗಳನ್ನು ನಂಬಿದ್ದಾನೆ. ಅಷ್ಟೇ ಅಲ್ಲದೆ ಆಕೆಯ ಸನಿಹ ಸೇರಲು ಹರಸಾಹಸಪಟ್ಟು ಆಕೆ ಹೇಳಿದಂತೆ ಹಣ ನೀಡಿ ಕಳೆದುಕೊಂಡು ಇದೀಗ ಆಕೆ ಹೇಳಿದ ಜೀವ ಬೆದರಿಕೆ ಕೇಳಿ ಕಕ್ಕಾಬಿಕ್ಕಿಯಾಗಿದ್ದಾನೆ.
ಯಲಹಂಕ ಉಪನಗರದ ನಿವಾಸಿ ಮನೋಹರ್ (ಹೆಸರು ಬದಲಿಸಲಾಗಿದೆ) ವೃತ್ತಿಯಲ್ಲಿ ಕಾರು ಚಾಲಕನಾಗಿದ್ದು ಇತ್ತೀಚೆಗೆ ಡೇಟಿಂಗ್ ವೆಬ್ ಸೈಟ್ ನೋಡುವಾಗ ಕಾಲ್ ಗರ್ಲ್ ನಂಬರ್ ಸಿಕ್ಕಿ ಚಾಟ್ ನಡೆಸಿದ್ದಾನೆ, ಅವಳ ಮಾದಕ ಪೋಟೋಗಳನ್ನ ಕಳುಹಿಸಿದ್ದಾಳೆ. ಇದರಿಂದ ಪ್ರೇರಿತವಾದ ಮನೋಹರ್ ಒಂದು ರಾತ್ರಿಗೆ ಆಕೆಯನ್ನು ಬುಕ್ ಮಾಡಿದ್ದಾನೆ, ಪೋನ್ ಪೇಯಲ್ಲಿ 5 ಸಾವಿರ ಹಣವನ್ನ ಕಳುಹಿಸಿದ್ದಾನೆ.
ಮತ್ತೆ ಪೋನ್ ಮಾಡಿದ ಕಾಲ್ ಗರ್ಲ್ ಯಲಹಂಕದಲ್ಲಿನ ಹೊಟೇಲ್ ಬಳಿಗೆ ಬರುವಂತೆ ಹೇಳಿದ್ದಾಳೆ. ಹೊಟೇಲ್ ಬಳಿಗೆ ಬರಲು ತನಗೆ ಸೆಕ್ಯೂರಿಟಿ ಬೇಕಿದ್ದು ಸೆಕ್ಯೂರಿಟಿ ಗಾಗಿ 4500 ರೂ. ಪಾವತಿಸುವಂತೆ ಹೇಳಿದ್ದಾಳೆ. ಮತ್ತೆ 4500 ರೂಪಾಯಿ ಪೋನ್ ಪೇ ಮೂಲಕ ಕಳುಹಿಸಿದ್ದಾನೆ, ಹಣ ಕ್ರೇಡಿಟ್ ಆದ ನಂತರ ಮತ್ತೆ ಪೋನ್ ಮಾಡಿದ ಕಾಲ್ ಗರ್ಲ್ ನಿಮಗೆ ಸೆಕ್ಯೂರಿಟಿ ನೀಡಲು 4500 ಪಾವತಿಸುವಂತೆ ಹೇಳಿದ್ದಾಳೆ. ಅವಳ ಮಾತು ನಂಬಿ ಮತ್ತೆ 4500 ರೂಪಾಯಿ ಪೋನ್ ಪೇ ಮೂಲಕ ಕಳುಹಿಸಿದ್ದಾನೆ.
ಕೆಲವೇ ಕ್ಷಣಗಳಲ್ಲಿ ಮತ್ತೆ ಪೋನ್ ಮಾಡಿದ ಕಾಲ್ ಗರ್ಲ್ 5000 ಸಾವಿರ ಹಣ ಪಾವತಿಸಿ ಒಟಿಪಿ ಕಳಿಸಲಾಗುವುದು, 10 ಸಾವಿರ ಹಣ ಹಿಂದುರುಗಿಸುವ ಭರವಸೆ ನೀಡಿದ್ದಾಳೆ, ಅವಳ ಮಾತು ನಂಬಿ ಮತ್ತೆ 5 ಸಾವಿರ ರೂ ಪೋನ್ ಪೇ ಮೂಲಕ ಪಾವತಿ ಮಾಡಿದ್ದಾನೆ. 19 ಸಾವಿರ ಹಣ ಕೊಟ್ಟರು ಆಕೆ ಬರೆದಿದ್ದಾಗ ಮೋಸಕ್ಕೆ ಒಳಗಾಗಿರುವುದು ಮನೋಹರ್ ಅರಿವಿಗೆ ಬಂದಿದೆ.
ಮತ್ತೆ ಅದೇ ನಂಬರ್ ಗೆ ಪೋನ್ ಮಾಡಿ ಪೊಲೀಸರಿಗೆ ದೂರು ನೀಡುವುದ್ದಾಗಿ ಹೇಳಿದ್ದಾಗ ಅತ್ಯಾಚಾರದ ಕೇಸ್ ದಾಖಲು ಮಾಡುವ ಬೇದರಿಕೆ ಹಾಕಿದ್ದಾರೆ. ಸೈಬರ್ ವಂಚಕರು ಮಾಡಿದ ಈ ಮೋಸದಿಂದ ಮನೋಹರ್ ಕಂಗಾಲಾಗಿದ್ದಾರೆ.