ಕೊರೊನಾ ವೈರಸ್ ಭೀತಿಯಿಂದಾಗಿ ದೆಹಲಿಯ ಎಲ್ಲಾ ಚಿತ್ರಮಂದಿರಗಳನ್ನು ಬಂದ್ ಮಾಡುವ ಆದೇಶವನ್ನು ಸರ್ಕಾರ ಹೊರಡಿಸಿದೆ.
ಮೊದಲಿಗೆ ಕೇರಳ ಸರ್ಕಾರವು ಅಲ್ಲಿನ ಚಿತ್ರಮಂದಿರಗಳನ್ನು ಬಂದ್ ಮಾಡಿತ್ತು. ಈಗ ದೆಹಲಿ ಸಹ ವೈರಸ್ ಹರಡದಂತೆ ತಡೆಯಲು ಚಿತ್ರಮಂದಿರಗಳನ್ನು ಬಂದ್ ಮಾಡಿದೆ.
ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇಂದು ಆದೇಶ ಹೊರಡಿಸಿದ್ದು, ಮಾರ್ಚ್ 31 ರ ವರೆಗೆ ದೆಹಲಿಯ ಎಲ್ಲಾ ಚಿತ್ರಮಂದಿರಗಳು ಮತ್ತು ಶಾಲೆ-ಕಾಲೇಜುಗಳು ಬಂದ್ ಮಾಡಲು ಆದೇಶ ಹೊರಡಿಸಿದ್ದಾರೆ.
ಮೊದಲಿಗೆ ಕೇರಳ ಸರ್ಕಾರ ಬಂದ್ ಮಾಡಿ ಆದೇಶ ಹೊರಡಿಸಿತು
ಮೊದಲಿಗೆ ಕೇರಳ ಸರ್ಕಾರವು ಅಲ್ಲಿನ ಚಿತ್ರಮಂದಿರಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿತ್ತು. ಇದೀಗ ದೆಹಲಿ ಸಹ ಇದೇ ಆದೇಶ ಹೊರಡಿಸಿದೆ. ಕರ್ನಾಟಕದಲ್ಲಿಯೂ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ.
ಚಿತ್ರಮಂದಿರಗಳು ಬಂದ್ ಆಗುತ್ತಿರುವ ಕಾರಣ, ಈಗ ಬಿಡುಗಡೆ ಆಗಿರುವ ಚಿತ್ರಗಳಿಗೆ ಸಮಸ್ಯೆ ಆಗಲಿದೆ. ಅಲ್ಲದೆ ಹಲವು ಸಿನಿಮಾಗಳ ಬಿಡುಗಡೆ ಸಹ ಮುಂದಕ್ಕೆ ಹೋಗಲಿದೆ.
Laxmi News 24×7