Breaking News

ಕಾಂಗ್ರೆಸ್ ನಾಯಕತ್ವ ಬಿಕ್ಕಟ್ಟು ಕ್ಲೈಮ್ಯಾಕ್ಸ್‌ನತ್ತ : ಜಾರಕಿಹೊಳಿ

Spread the love

ನವದೆಹಲಿ : ಸದ್ದಿಲ್ಲದೆ ದೆಹಲಿಗೆ ತೆರಳಿ ಎರಡು ದಿನ ಅಲ್ಲೇ ಬೀಡು ಬಿಟ್ಟು, ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಟೀಮ್‌ಗೆ ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸುವ ಭರವಸೆ ಹೈಕಮಾಂಡ್‌ನಿಂದ ದೊರಕಿದೆ.

ಮಾಜಿ ಸಚಿವ ಕೆ.ಎನ್‌.ರಾಜಣ್ಣ ಹಾಗೂ ಪರಿಶಿಷ್ಟ ಪಂಗಡದ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದ ಸತೀಶ್‌ ಜಾರಕಿಹೊಳಿ ತಂಡ ಶನಿವಾರ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್‌ ಜಾರಕಿಹೊಳಿ ಅವರನ್ನು ಪರಿಗಣಿಸಿ ಮತ್ತು ಸಂಪುಟದಿಂದ ಹೊರ ಬಿದ್ದಿರುವ ನಾಯಕ ಸಮುದಾಯದ ಇಬ್ಬರನ್ನೂ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ.

ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಮಲ್ಲಿಕಾರ್ಜುವ ಖರ್ಗೆ ಅವರು, ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಉದ್ಭವಿಸಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್‌ ಒಂದು ತೀರ್ಮಾನಕ್ಕೆ ಬಂದಿದೆ. ಆದಷ್ಟು ಬೇಗ ಈ ಗೊಂದಲ ಬಗೆಹರಿಸುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.

ಖರ್ಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ನಾವು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಅದಷ್ಟೂ ಬೇಗ ರಾಜ್ಯದಲ್ಲಿನ ಗೊಂದಲ ಬಗೆಹರಿಸುತ್ತೇವೆ ಎಂದು ಖರ್ಗೆ ಅವರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಹೀಗೆ ಹೇಳಿದ್ದಾರೆ ಎಂದು ತಿಳಿಸಿದರು.

ಖರ್ಗೆಯವರನ್ನು ನಾವು ಭೇಟಿ ಮಾಡಿದ್ದೆವು. ರಾಜ್ಯದ ಗೊಂದಲಗಳು, ಕೆಲ ವಿಚಾರ ಕುರಿತು ಖರ್ಗೆ ಅವರ ಗಮನಕ್ಕೆ ತಂದಿದ್ದೇವೆ. ರಾಜ್ಯದ ಗೊಂದಲಗಳನ್ನು ತುರ್ತು ಬಗೆಹರಿಸಲು ಮನವಿ ಮಾಡಿದ್ದೇವೆ. ಖರ್ಗೆಯವರು ಕೆಲ ಸಲಹೆ ಕೊಟ್ಟಿದ್ದಾರೆ. ಸಮಸ್ಯೆ, ಗೊಂದಲ ಬಗೆಹರಿಸುವ ಬಗ್ಗೆ ಇಡೀ ಪಕ್ಷ, ಕಾರ್ಯಕರ್ತರ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು.

ಮಾಜಿ ಸಚಿವ ರಾಜಣ್ಣ ಮಾತನಾಡಿ, ಸತೀಶ ಅವರು ಹೇಳಿರುವ ಅಭಿಪ್ರಾಯಕ್ಕೆ ನಮ್ಮ ಸಹಮತ ವ್ಯಕ್ತಪಡಿಸಿದ್ದೇವೆ. ಗೊಂದಲ ಇರುವುದು ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಎರಡಕ್ಕೂ ಒಳಿತಲ್ಲ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಗಾದಿ ಪ್ರಸ್ತಾಪ!:

ಮೂಲಗಳ ಪ್ರಕಾರ ದೆಹಲಿಗೆ ಭೇಟಿ ನೀಡಿದ್ದ ಸತೀಶ್‌ ಜಾರಕಿಹೊಳಿ ತಂಡ ಖರ್ಗೆ ಅವರ ಭೇಟಿ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್‌ ಅವರನ್ನು ಪರಿಗಣಿಸುವಂತೆ ಹಕ್ಕೊತ್ತಾಯ ಮಂಡಿಸಿದೆ. ಜತೆಗೆ, ರಾಜ್ಯ ಸಚಿವ ಸಂಪುಟದಿಂದ ನಾಯಕ ಸಮುದಾಯದವರಾದ ನಾಗೇಂದ್ರ ಹಾಗೂ ಕೆ.ಎನ್‌.ರಾಜಣ್ಣ ಹೊರ ಬಿದ್ದಿದ್ದಾರೆ. ಹೀಗಾಗಿ ನಾಯಕ ಸಮುದಾಯದ ಪ್ರಾತಿನಿಧ್ಯ ಸಚಿವ ಸಂಪುಟದಲ್ಲಿ ಕಡಿಮೆಯಾಗಿದೆ.

ಇದರಿಂದ ಸಮುದಾಯದಲ್ಲಿ ಅಸಮಾಧಾನ ಮೂಡಿದ್ದು, ತೆರವಾಗಿರುವ ಈ ಎರಡು ಸ್ಥಾನಗಳನ್ನು ಕೂಡಲೇ ನಾಯಕ ಸಮುದಾಯದವರಿಗೆ ನೀಡಬೇಕು. ನಾಯಕತ್ವ ಗೊಂದಲದ ನೆಪದಲ್ಲಿ ಸಚಿವ ಸಂಪುಟಕ್ಕೆ ನಾಯಕ ಸಮುದಾಯದವರ ಸೇರ್ಪಡೆ ವಿಳಂಬ ಮಾಡಲಾಗುತ್ತಿದೆ. ಇದು ಸರಿಯಲ್ಲ ಎಂದು ವಾದಿಸಿದರು ಎನ್ನಲಾಗಿದೆ.

ನಾಯಕತ್ವ ಗೊಂದಲ ವಿಚಾರದಲ್ಲಿ ಹೈಕಮಾಂಡ್‌ ಒಂದು ತೀರ್ಮಾನಕ್ಕೆ

ಇದಕ್ಕೆ ಪ್ರತಿಯಾಗಿ ನಾಯಕತ್ವ ಗೊಂದಲ ವಿಚಾರದಲ್ಲಿ ಹೈಕಮಾಂಡ್‌ ಒಂದು ತೀರ್ಮಾನಕ್ಕೆ ಬಂದಿದ್ದು, ಶೀಘ್ರ ಈ ವಿಚಾರ ಬಗೆಹರಿಸಲಾಗುವುದು. ಇದು ಬಗೆಹರಿಯುತ್ತಿದ್ದಂತೆಯೇ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಸಂಪುಟ ಪುನಾರಚನೆಯಂಥ ವಿಚಾರಗಳು ಸಹ ಇತ್ಯರ್ಥಗೊಳ್ಳಲಿವೆ ಎಂಬ ಸುಳಿವು ಹೈಕಮಾಂಡ್‌ ನೀಡಿದೆ ಎಂದು ಮೂಲಗಳು ತಿಳಿಸಿವೆ.

– ನಾಯಕತ್ವ ಬಗ್ಗೆ ಹೈಕಮಾಂಡ್‌ ತೀರ್ಮಾನಕ್ಕೆ ಬಂದಿದೆ : ಜಾರಕಿಹೊಳಿ ಟೀಂಗೆ ಖರ್ಗೆ ಭರವಸೆ

– ಕೆಪಿಸಿಸಿ ಅಧ್ಯಕ್ಷ ಹುದ್ದೆ, ಸಂಪುಟದ 2 ಎಸ್ಸಿ ಸ್ಥಾನ ಭರ್ತಿಗೂ ಹೈಕಮಾಂಡ್‌ಗೆ ಸತೀಶ್‌ ಮನವಿ

ಪರಿಶಿಷ್ಟ ಪಂಗಡದ ಶಾಸಕರ ಜೊತೆಗೂಡಿ ದೆಹಲಿಯಲ್ಲಿ ಖರ್ಗೆ ಭೇಟಿ ಮಾಡಿದ ಸತೀಶ್ ಜಾರಕಿಹೊಳಿ

ಭೇಟಿ ವೇಳೆ ನಾಯಕತ್ವ ಬಿಕ್ಕಟ್ಟಿನಿಂದಾಗಿ ರಾಜ್ಯ ಕಾಂಗ್ರೆಸ್‌ನಲ್ಲಿನ ಗೊಂದಲ ಬಗ್ಗೆ ಖರ್ಗೆಗೆ ಮಾಹಿತಿ

ಈ ವಿಷಯದಲ್ಲಿ ಈಗಾಗಲೇ ಹೈಕಮಾಂಡ್‌ ಒಂದು ತೀರ್ಮಾನಕ್ಕೆ ಬಂದಿದೆ ಎಂದು ಖರ್ಗೆ ಮಾಹಿತಿ

ಖರ್ಗೆ ಇಂಥ ಮಾಹಿತಿ ನೀಡಿದ್ದು ಇದೇ ಮೊದಲ ಸಲವಾದ ಕಾರಣ ಕಾಂಗ್ರೆಸ್‌ನಲ್ಲಿ ಭಾರೀ ಸಂಚಲನ

ಇದೇ ವೇಳೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್‌ ಜಾರಕಿಹೊಳಿಗೆ ನೀಡುವಂತೆ ಖರ್ಗೆಗೆ ತಂಡದ ಮನವಿ

ಈ ಬದಲಾವಣೆ ಜೊತೆಗೆ ರಾಜಣ್ಣ, ನಾಗೇಂದ್ರ ರಾಜೀನಾಮೆಯಿಂದ ತೆರವಾದ ಸ್ಥಾನ ಭರ್ತಿಗೂ ಒತ್ತಾಯ


Spread the love

About Laxminews 24x7

Check Also

ಮರಾಠಾ ಅಭಿವೃದ್ಧಿ ನಿಗಮಕ್ಕೆ ಸಾವಿರ ಕೋಟಿ ರೂ.ಅನುದಾನ ನೀಡಿ: ಕಿರಣ್ ಜಾಧವ್ ಆಗ್ರಹ

Spread the loveಬೆಳಗಾವಿ : ಕರ್ನಾಟಕ ರಾಜ್ಯದಲ್ಲಿ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಮರಾಠಾ ಸಮಯದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ