Breaking News

ಕಾಂಗ್ರೆಸ್ ಮುಖಂಡನ ಕೊಲೆ

Spread the love

ಬಾಗಲಕೋಟೆ:ಕೆರೂರ ಸಮೀಪದ ಸಾಗನೂರು ಗ್ರಾಮದ ಸಹಕಾರಿ ಧುರೀಣ, ಕಾಂಗ್ರೆಸ್ ಮುಖಂಡ ಶಿವಪ್ಪ ಬಸಪ್ಪ ಮೇಟಿ (54) ಕೊಲೆಯಾಗಿದ್ದು, ಕೆರೂರ ಪೊಲೀಸ್ ಠಾಣೆಯಲ್ಲಿ ಮೃತರ ಮಗ ಯಮನಪ್ಪ ಮೇಟಿ ಪ್ರಕರಣ ದಾಖಸಿದ್ದಾನೆ.

ಫೆಬ್ರುವರಿ 12 ಗುರುವಾರ 8.30 9.30ರ ಅವಧಿಯಲ್ಲಿ ಕೊಲೆಯಾದ ಶಿವಪ್ಪ ಮೇಟಿ ಸಾಗನೂರ ಗ್ರಾಮದ ಹೊರ ವಲಯದ ಬಟಕುರ್ಕಿ ರಸ್ತೆ ಕಡೆಗೆ ಬಯಲು ಬಹಿರ್ದಸೆಗೆಂದು ಹೋಗಿದ್ದಾಗ ಯಾರೋ ದುಷ್ಕರ್ಮಿಗಳು ಯಾವುದೋ ವಸ್ತುವಿನಿಂದ ಹೊಡೆದು ಕೊಲೆ ಮಾಡಿ, ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಮೃತರ ಹೊಟ್ಟೆಗೆ ಹಗ್ಗ ಬಿಗಿದು ಕಲ್ಲುಕಟ್ಟಿ ಸಮೀಪದ ಬಾವಿಗೆ ಎಸೆದು ಹೋಗಿದ್ದಾರೆಂದು ಮೃತರ ಮಗ ದೂರಿನಲ್ಲಿ ತಿಳಿಸಿದ್ದಾನೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.

ಆರೋಪಿಗಳ ಪತ್ತೆಗೆ ಶಾಸಕರ ಸೂಚನೆ: ಆಪ್ತನ ಕೊಲೆಯಾದ ಸುದ್ದಿ ತಿಳಿದ ಬೀಳಗಿಯ ಶಾಸಕ ಜೆ.ಟಿ ಪಾಟೀಲ ಸಂತಾಪ ಸೂಚಿಸಿ, ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡರು. ಕೆರೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಪೊಲೀಸರು ಹಾಗೂ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು ಆರೋಪಿಗಳ ಪತ್ತೆಗೆ ಶೀಘ್ರ ಕ್ರಮ ವಹಿಸುವಂತೆ ಬಾದಾಮಿ ಸಿಪಿಐ ಕರಿಯಪ್ಪ ಬನ್ನಿ ಹಾಗೂ ಕೆರೂರ ಠಾಣಾಧಿಕಾರಿ ಭೀಮಪ್ಪ ರಬಕವಿ ಅವರಿಗೆ ಸೂಚಿಸಿದರು.


Spread the love

About Laxminews 24x7

Check Also

ಬೆಂಬಲದಿಂದ ಬಿಜೆಪಿ ಭದ್ರಕೋಟೆಯಾದ ಬಾಗಲಕೋಟೆ

Spread the loveಬಾಗಲಕೋಟೆ: ಉಪಚುನಾವಣೆಯ ಹಿನ್ನೆಲೆ ಬಿಜೆಪಿ ಪ್ರಚಾರ ರಂಗೇರಿದ್ದು ಬಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ