Breaking News

ಮಹಿಳೆಗೆ ಚುಡಾಯಿಸಿದ ಆರೋಪ.. ಸ್ಥಳೀಯರಿಂದ ಪರಿಸರವಾದಿ ಡಿ.ವಿ.ಗಿರೀಶ್ ಮೇಲೆ ಹಲ್ಲೆ

Spread the love

ಚಿಕ್ಕಮಗಳೂರು: ಮಹಿಳೆಗೆ ಚುಡಾಯಿಸಿದರೆಂದು ಆರೋಪಿಸಿ ಪರಿಸರವಾದಿ ವೈಲ್ಡ್ ಕ್ಯಾಟ್ – ಸಿ ಸಂಸ್ಥೆಯ ಡಿ.ವಿ.ಗಿರೀಶ್ ಮೇಲೆ ಸ್ಥಳೀಯರು ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯ ಕಂಬಿಹಳ್ಳಿ ಗ್ರಾಮದ ಮಹಿಳೆಯೊಬ್ಬರಿಗೆ ಚುಡಾಯಿಸಿದ್ದಾರೆ ಎಂದು ಆರೋಪಿಸಿ ಕೆಲ ಸ್ಥಳೀಯರು ಡಿ.ವಿ.ಗಿರೀಶ್ ಹಾಗೂ ಅವರ ಸ್ನೇಹಿತರು ತೆರಳುತ್ತಿದ್ದ ಕಾರನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ. ಅಲ್ಲದೇ ಅವರ ಜೊತೆಯಲ್ಲಿದ್ದವರಿಗೂ ಥಳಿಸಿದ್ದಾರೆ ಎಂದು ಕೆಲ ಸ್ಥಳೀಯರು ಹೇಳುತ್ತಿದ್ದಾರೆ.

ಇನ್ನೂ ಕೆಲ ಗ್ರಾಮಸ್ಥರ ಪ್ರಕಾರ, ಕೆಲ ಯುವಕರು ಸಂತವೇರಿ ಘಾಟಿಯಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಈ ವೇಳೆ, ವಾಹನದಲ್ಲಿ ಬಂದ ಗಿರೀಶ್ ಮತ್ತವರ ಸಂಗಡಿಗರು ಯುವಕರತ್ತ ಕೈ ತೋರಿಸಿದ್ದಾರೆ. ಇದರಿಂದ ಕೋಪಗೊಂಡ ಯುವಕರು ವಾಹನ ಅಡ್ಡಗಟ್ಟಿ ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.

ಈ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಫ್ರಾನ್ಸ್ ಕೈಟ್ ಉತ್ಸವದಲ್ಲಿ ಮಂಗಳೂರಿನ ಗಾಳಿಪಟ: ಫ್ರೆಂಚರ ನಾಡಿನಲ್ಲಿ ಹಾರಲಿದೆ ‘ಕುಡ್ಲದ ತೇರು

Spread the love ಮಂಗಳೂರು: ಬಾನಾಡಿಯಲ್ಲಿ ಹಕ್ಕಿಗಳಂತೆ ಹಾರಾಡುವ ಗಾಳಿಪಟ ಈಗ ಅಂತಾರಾಷ್ಟ್ರೀಯ ಹಬ್ಬವಾಗಿದೆ. ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಸೆಪ್ಟಂಬರ್​ನಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ