Breaking News

ರಿಷಬ್ – ರಜನಿಕಾಂತ್ ಭೇಟಿಯಾದಾಗ ‘ಕಾಂತಾರ’ ಬಗ್ಗೆ ಚರ್ಚಿಸಿದ್ದು ಕನ್ನಡದಲ್ಲಾ, ತಮಿಳಿನಲ್ಲಾ?

Spread the love

ಕಾಂತಾರ ಸದ್ಯ ವಿಶ್ವದಾದ್ಯಂತ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಈ ಚಿತ್ರ ಈ ಪರಿ ಗೆಲ್ಲಲಿದೆ ಎಂದು ಯಾರೂ ಊಹಿಸಿರಲಿಲ್ಲ. ಸ್ವತಃ ಕಾಂತಾರ ಚಿತ್ರತಂಡ ಕೂಡ ಈ ಚಿತ್ರ ಇಷ್ಟರ ಮಟ್ಟಿಗೆ ಚಿತ್ರ ಜನರಿಗೆ ಇಷ್ಟವಾಗಲಿದೆ ಎಂದು ಊಹಿಸಿರಲಿಲ್ಲ. ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡದಿರುವುದೇ ಇದಕ್ಕೆ ಸಾಕ್ಷಿ.

ಹೀಗೆ ಕನ್ನಡದಲ್ಲಿ ಮಾತ್ರ ಬಿಡುಗಡೆಗೊಂಡ ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಬಿಡುಗಡೆ ಮಾಡಬೇಕು ಎಂಬ ಕೂಗು ಹೆಚ್ಚಾದ ಬಳಿಕ ಹೊಂಬಾಳೆ ಫಿಲ್ಮ್ಸ್ ಕಾಂತಾರ ಚಿತ್ರವನ್ನು ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಡಬ್ ಮಾಡಿ ಬಿಡುಗಡೆಗೊಳಿಸಿತು.

 

ಚಿತ್ರ ಇತರೆ ಭಾಷೆಗಳಿಗೆ ಡಬ್ ಆದ ಬಳಿಕ ಕೇವಲ ಪರಭಾಷಾ ಪ್ರೇಕ್ಷಕರು ಮಾತ್ರವಲ್ಲದೇ ಪರಭಾಷಾ ಸ್ಟಾರ್ ನಟರು ಹಾಗೂ ನಟಿಯರೂ ಸಹ ಕಾಂತಾರ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಲು ಆರಂಭಿಸಿದರು. ತಮಿಳು ನಟ ಕಾರ್ತಿ, ಧನುಷ್, ತೆಲುಗಿನ ಪ್ರಭಾಸ್, ಅನುಷ್ಕಾ ಶೆಟ್ಟಿ, ಪೂಜಾ ಹೆಗ್ಡೆ, ಹಿಂದಿಯ ಕಂಗನಾ ರನೌತ್ ಹಾಗೂ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸ್ಟಾರ್‌ಗಳು ಕಾಂತಾರ ಚಿತ್ರವನ್ನು ಹೊಗಳಿ ರಿಷಬ್ ಹಾಗೂ ಚಿತ್ರತಂಡಕ್ಕೆ ಶುಭಾಷಯ ಕೋರಿದ್ದರು.

 

ಇನ್ನು ರಿಷಬ್ ಶೆಟ್ಟಿ ಅವರಿಗೆ ಈ ಎಲ್ಲಾ ಪ್ರಶಂಸೆಗಳಿಗಿಂತ ಹೆಚ್ಚು ಖುಷಿ ನೀಡಿದ್ದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಕಾಂತಾರ ಚಿತ್ರವನ್ನು ಹೊಗಳಿದಾಗ. ಹೌದು, ಕಾಂತಾರ ಚಿತ್ರವನ್ನು ವೀಕ್ಷಿಸಿದ ರಜನಿಕಾಂತ್ ರಿಷಬ್ ಶೆಟ್ಟಿಯವರನ್ನು ತಮ್ಮ ನಿವಾಸಕ್ಕೆ ಕರೆಸಿ ಭೇಟಿಯಾಗಿದ್ದರು. ರಿಷಬ್ ಶೆಟ್ಟಿಗೆ ಶಾಲು ಹೊದಿಸಿ ಸನ್ಮಾನವನ್ನೂ ಸಹ ಮಾಡಿದ್ದರು. ರಿಷಬ್ ರಜನಿಕಾಂತ್ ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆದುಕೊಂಡಿದ್ದರು. ರಜನಿಕಾಂತ್ ಅವರು ಕಾಂತಾರ ಚಿತ್ರವನ್ನು ಹೊಗಳಿದ್ದು ಕನಸು ನನಸಾದ ಘಳಿಗೆ ಎಂದು ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದರು.

ರಾಮು ಅಪ್ಪು ಎಂಬ ನೆಟ್ಟಿಗ ‘ರಜನಿಕಾಂತ್ ಸರ್ ನಿಮ್ಮ ಮಾತನಾಡುವಾಗ ಕನ್ನಡದಲ್ಲಿ ಮಾತನಾಡಿದ್ರಾ ಅಥವಾ ಇಂಗ್ಲಿಷ್ ಇಲ್ಲ ತಮಿಳಿನಲ್ಲಿ ಮಾತನಾಡಿದ್ರಾ’ ಎಂಬ ಪ್ರಶ್ನೆಯನ್ನು ಟ್ವೀಟ್ ಮಾಡುವ ಮೂಲಕ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ್ದ ರಿಷಬ್ ಶೆಟ್ಟಿ ‘ಕನ್ನಡದಲ್ಲಿ’ ಎಂದು ಟ್ವೀಟ್ ಮಾಡಿ ಉತ್ತರ ನೀಡಿದ್ದರು. ರಿಷಬ್ ಶೆಟ್ಟಿ ನೀಡಿದ್ದ ಉತ್ತರವನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು.

 

ಮುನ್ನೂರು ಕೋಟಿ ಕ್ಲಬ್ ಸೇರಿದ ಕಾಂತಾರ

ಐವತ್ತು ದಿನಗಳ ಸಂಭ್ರಮಾಚರಣೆಯತ್ತ ಮುನ್ನುಗ್ಗುತ್ತಿರುವ ಕಾಂತಾರ ಚಿತ್ರ ಮುನ್ನೂರು ಕೋಟಿ ಕ್ಲಬ್ ಸೇರಿದೆ. ಈ ಮೂಲಕ ಕೆಜಿಎಫ್ ಚಾಪ್ಟರ್ 1 ಚಿತ್ರದ ದಾಖಲೆಯನ್ನು ಹಿಂದಿಕ್ಕಿದ ಕಾಂತಾರ ಚಿತ್ರ ಅತಿಹೆಚ್ಚು ಗಳಿಕೆ ಮಾಡಿದ ಎರಡನೇ ಕನ್ನಡ ಚಿತ್ರ ಎಂಬ ದಾಖಲೆಯನ್ನು ಮಾಡಿದೆ. ಈ ವಿಷಯದ ಕುರಿತು ಇತ್ತೀಚೆಗಷ್ಟೇ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ರಿಷಬ್ ಶೆಟ್ಟಿ ಮಾಧ್ಯಮದವರ ಜತೆ ಮಾತನಾಡುವಾಗ ತಿಳಿಸಿದ್ದರು. ನೀವು ಕೇಳುತ್ತಿರುವ ಸುದ್ದಿಗಳೆಲ್ಲವೂ ನಿಜ, ಎಲ್ಲಾ ದಾಖಲೆ ಬ್ರೇಕ್ ಆಗಿದೆ ಎಂದು ರಿಷಬ್ ಶೆಟ್ಟಿ ತಿಳಿಸಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ