Breaking News

ಪ್ಲಾಸ್ಟಿಕ್‌ ಕವರ್​​ನಲ್ಲಿ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಿದ ತಾಯಿ

Spread the love

ಬೆಳಗಾವಿ: ಪ್ಲಾಸ್ಟಿಕ್‌ ಕವರ್​​ನಲ್ಲಿ ನವಜಾತ ಶಿಶುವನ್ನು ಮರಕ್ಕೆ ನೇತು ಹಾಕಿರುವ ಅಮಾನವೀಯ ಘಟನೆ ಖಾನಾಪೂರ ತಾಲೂಕಿನ ನೇರಸಾ ಗೌಳಿವಾಡ ಗ್ರಾಮದಲ್ಲಿ ನಡೆದಿದೆ.

ಸದ್ಯ ಮಗು ಆರೋಗ್ಯವಾಗಿದ್ದು, ಹೆಚ್ಚಿನ‌ ಚಿಕಿತ್ಸೆಗೆ ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

 

ಗ್ರಾಮದಲ್ಲಿ ಅಪರಿಚಿತ ತಾಯಿಯೊಬ್ಬರು ನಿನ್ನೆ ರಾತ್ರಿ ಪ್ಲಾಸ್ಟಿಕ್ ಕವರ್​ನಲ್ಲಿ ಗಂಡು ಶಿಶುವನ್ನಿಟ್ಟು ಮರಕ್ಕೆ ನೇತು ಹಾಕಿ ಹೋಗಿದ್ದಾರೆ. ಇತ್ತ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಆಶಾ ಕಾರ್ಯಕರ್ತೆಯರು ಶಿಶುವನ್ನು ಖಾನಾಪೂರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ, ಚಿಕ್ಕಮಕ್ಕಳ ವೈದ್ಯ ಡಾ.ಪವನ್ ಪೂಜಾರಿ ಎಂಬುವವರು ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಕಳೆದ ರಾತ್ರಿ ಮಗುವನ್ನು ಪ್ಲ್ಯಾಸ್ಟಿಕ್ ಕವರನಲ್ಲಿ ಹಾಕಿದ್ದರಿಂದ ಮಗುವಿನ ಆರೋಗ್ಯದಲ್ಲಿ ಏರು ಪೇರಾಗಿದೆ. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆ ಬೆಳಗಾವಿಯ ಬಿಮ್ಸ್​ಗೆ ಮಗುವನ್ನು ರವಾನಿಸಲಾಗಿದ್ದು, ಸದ್ಯ ಮಗು ಆರೋಗ್ಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ.


Spread the love

About Laxminews 24x7

Check Also

ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ

Spread the love ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಎಲ್ಲ ಜಾತಿ, ಜನಾಂಗ ಒಟ್ಟುಗೂಡಿಸಿಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಇಲ್ಲಿಯವರೆಗೆ 150ಕ್ಕೂ ಅಧಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ