Breaking News

ಕ್ಷೀರಭಾಗ್ಯ ಯೋಜನೆ ಹಾಲಿನಪುಡಿ ಅಕ್ರಮ ಸಾಗಾಟ, ಗ್ರಾಮಸ್ಥರಿಂದ ಓರ್ವನ ಸೆರೆ..

Spread the love

 

 

ಆಂಕರ್:

ಅಪೌಷ್ಟಿಕತೆ ಹೋಗಲಾಡಿಸಲು ಸರ್ಕಾರದ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಂಗನವಾಡಿ ಹಾಗೂ ಶಾಲೆಗಳಲ್ಲಿ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಹಾಲಿನ ಪುಡಿ ಸರಬರಾಜು ಮಾಡಲಾಗುತ್ತದೆ. ಆದರೆ ಚಿಕ್ಕೋಡಿ ಉಪವಿಭಾಗ ಅಥಣಿ ತಾಲೂಕಿನ ಖಿಳೆಗಾಂವ್ ಗ್ರಾಮದಲ್ಲಿ ಅಕ್ರಮವಾಗಿ ಹಾಲಿನ ಪುಡಿ ಸಾಗಾಟ ಮಾಡುತ್ತಿರುವ ಓರ್ವನನ್ನು ಗ್ರಾಮಸ್ಥರು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಡೆದಿದೆ.

 

ಅಕ್ರಮವಾಗಿ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿಯನ್ನು ಬೈಕ್ ಮೇಲೆ ಸಾಗಾಟ ಮಾಡುತ್ತಿರುವ ಅಥಣಿ ತಾಲೂಕಿನ ಅನಂತಪುರ ಗ್ರಾಮದ ಗಂಗಾಧರ ಶಂಕರ ಪತ್ತಾರ ಎಂದು ತಿಳಿದು ಬಂದಿದೆ.

 

ಕಳೆದ ಒಂದು ವರ್ಷಗಳಿಂದ, ಇದೇ ರೀತಿಯಾಗಿ ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ, ಖಿಳೇಗಾಂವ್ ಗ್ರಾಮದ ಅಂಗನವಾಡಿ ಹಾಗೂ ಪ್ರಾಥಮಿಕ ಶಾಲೆಗಳಿಂದ ಹಾಲಿನಪುಡಿ ಪಾಕೆಟ್ಟು ತೆಗೆದುಕೊಂಡು ಸಾಗಾಟ ಮಾಡುತ್ತಿರುವ ವ್ಯಕ್ತಿಯನ್ನು ಗ್ರಾಮಸ್ಥರು ತಡೆಹಿಡಿದು ತರಾಟೆ ತೆಗೆದುಕೊಂಡರು ಘಟನೆ ಸಂಭವಿಸಿದೆ. ಅದರೊಂದಿಗೆ ಅವನನ್ನು ಅಥಣಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳಕ್ಕೆ ಅಥಣಿ ಪೊಲೀಸ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ.

ಚಿಕ್ಕೋಡಿ: ಎವಿಬಿ

ವರದಿ: ಮಂಜುನಾಥ ಕರಾಕಾಯಿ

 


Spread the love

About Laxminews 24x7

Check Also

ನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ

Spread the loveನಿರ್ಮಲಾ ಸೀತಾರಾಮನ್‌ ಭೇಟಿ ಮಾಡಿದ ಸಿಎಂ ಸಿದ್ದರಾಮಯ್ಯ: ಅಲ್ಪಾವಧಿ ಕೃಷಿ ಸಾಲದ ಮಿತಿ ಹೆಚ್ಚಿಸುವಂತೆ ಮನವಿಮುಖ್ಯಮಂತ್ರಿ ಸಿದ್ದರಾಮಯ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ