ಚಿಕ್ಕೋಡಿ: ಹಿಂದಿನ ಸರ್ಕಾರಗಳು ಹಳ್ಳಿಯ ಜನರಿಗೆ ಶುದ್ದ ಕುಡಿಯುವ ನೀರು ಕೊಡುವಲ್ಲಿ ವಿಫಲವಾಗಿದ್ದು, ರಾಜ್ಯ ಮತ್ತು ಕೇಂದ್ರದಲ್ಲಿರುವ ಬಿಜೆಪಿ ಸರಕಾರಗಳು ಗ್ರಾಮೀಣ ಪ್ರದೇಶದ ಎಲ್ಲ ಜನರಿಗೂ ಶುದ್ದ ಕುಡಿಯುವ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಶಾಸಕ ದುರ್ಯೋಧನ ಐಹೋಳೆ ಹೇಳಿದರು.
ತಾಲೂಕಿನ ಕಮತೇನಹಟ್ಟಿ ಹಾಗೂ ಮುಗಳಿ ಗ್ರಾಮದಲ್ಲಿ ಜೀವಜಲ ಯೋಜನೆಗೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಜೀವಜಲ ಯೋಜನೆಯಡಿ ಶೀಘ್ರ ರಾಯಬಾಗ ವಿಧಾನ ಸಭಾ ಕ್ಷೇತ್ರದ ಪ್ರತಿಯೊಂದು ಮನೆಗೂ ಶುದ್ದ ಕುಡಿಯುವ ನೀರು ಪೂರೈಕೆ ಮಾಡಲಾಗುವುದು ಎಂದು ಹೇಳಿದರು.
ಮಾಜಿ ಜಿ.ಪಂ.ಸದಸ್ಯ ಮಹೇಶ ಭಾತೆ ಮಾತನಾಡಿ, ಮನೆ ಮನೆಗೂ ಶುದ್ದ ಕುಡಿಯುವ ನೀರು ಕೊಡುವ ಸಲುವಾಗಿ ಕಮತೇನಹಟ್ಟಿ ಗ್ರಾಮಕ್ಕೆ 11 ಲಕ್ಷ ರೂ.ಗಳು ಹಾಗೂ ಮುಗಳಿ ಗ್ರಾಮಕ್ಕೆ 7 ಲಕ್ಷ ರೂ.ಗಳ ಅನುದಾನವನ್ನು ಶಾಸಕ ದುರ್ಯೋಧನ ಐಹೋಳೆಯವರು ಮಂಜೂರು ಮಾಡಿದ್ದಾರೆ ಎಂದು ಹೇಳಿದರು.
ಜಿ.ಪಂ.ಸದಸ್ಯೆ ಲಕ್ಷ್ಮೀ ನಿಂಗಪ್ಪ ಕುರುಬರ, ವಿಜಯ ಕೋಠಿವಾಲೆ, ಎಸ್.ಎಸ್.ಹೊಸಮನಿ, ಬಾಬುರಾವ ಪಾಟೀಲ, ಸಿದಗೌಡ ಪಾಟೀಲ, ಶಿವಪ್ಪ ಪೂಗತ್ಯಾನಟ್ಟಿ, ಗ್ರಾ.ಪಂ.ಅಧ್ಯಕ್ಷ ರಾಮನಗೌಡ ಪಾಟೀಲ, ಉಪಾಧ್ಯಕ್ಷ ಸಾರಿಕಾ ಕವಳಿಕಟ್ಟಿ, ಈರಗೌಡ ಪಾಟೀಲ, ದುಂದಪ್ಪ ಬಂಬಲವಾಡೆ, ಲಕ್ಷ್ಮೀ ಪಾಟೀಲ, ರಾಜು ಹರಗನ್ನವರ, ರಾಜು ಮಾದಿಗ, ಮಾರುತಿ ಬಡಿಗೇರ, ತೀರ್ಥಾ ಕಳಸನ್ನವರ ಮುಂತಾದವರು ಉಪಸ್ಥಿತರಿದ್ದರು.