Breaking News

ಚಿಕ್ಕೋಡಿ ತಾಲೂಕಿನ 4 ಏತ ನೀರಾವರಿ ಯೋಜನೆಗೆ 2 ಕೋಟಿ ಅನುದಾನ ಮಂಜೂರು: ಎಂಎಲ್ಸಿ ಪ್ರಕಾಶ ಹುಕ್ಕೇರಿ

Spread the love

ಚಿಕ್ಕೋಡಿ:ನನ್ನ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯ ಇಂಗಳಿ ಗ್ರಾಮದ-2 ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮಗಳ ಒಟ್ಟು 04 ಏತ ನೀರಾವರಿ ಯೋಜನೆಗಳ 159 ಎಕರೆ ಜಮೀನುಗಳಿಗೆ ರೂ. 2.00 ಕೋಟಿಗಳ ಅನುದಾನ ಮಂಜೂರಾಗಿದೆ ಎಂಎಲ್ಸಿ ಪ್ರಕಾಶ ಹುಕ್ಕೇರಿ ಹೇಳಿದರು.

ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಂಜೂರಾದ ಆದೇಶ ಪತ್ರವನ್ನು ವಿತರಿಸಿ ಮಾತನಾಡಿ ಅವರು ಚಿಕ್ಕೋಡಿ ತಾಲೂಕಿನ ವ್ಯಾಪ್ತಿಯಲ್ಲಿ ಇಂಗಳಿ, ಯಕ್ಸಂಬಾ ಹಾಗೂ ಯಡೂರವಾಡಿ ಗ್ರಾಮದ ರೈತರು ಖುಷ್ಕಿ ಜಮೀನುಗಳಿಗೆ ಏತ ನೀರಾವರಿ ಯೋಜನೆಗಳು ಮಂಜೂರು ಮಾಡುವಂತೆ ನನ್ನಲ್ಲಿ ವಿನಂತಿಸಿಕೊಂಡ ಪ್ರಯುಕ್ತ ಬೇಡಿಕೆ ಅನುಗುಣವಾಗಿ ಇಂಗಳಿ ಗ್ರಾಮದ ಮೋಹನ ನಾಮದೇವ ಪಾಟೋಳೆ ಹಾಗೂ ಇತರರ ಜಮೀನುಗಳಿಗಳಿಗೆ ಹಾಗೂ ವಿನಾಯಕ ಬಸಪ್ಪಾ ಚೌಗುಲೆ ಹಾಗೂ ಇತರರ ಜಮೀನುಗಳಿಗೆ 2 ಏತ ನೀರಾವರಿ ಯೋಜನೆ.ಯಕ್ಸಂಬಾ ಗ್ರಾಮದ ತಾನಾಜಿ ದತ್ತು ಪವಾರ ಹಾಗೂ ಇತರರ ಜಮೀನುಗಳಿಗೆ ಏತ ನೀರಾವರಿ ಯೋಜನೆ ಹಾಗೂ ಯಡೂರವಾಡಿ ಗ್ರಾಮದ ಸದಾಶಿವ ದುಂಡಪ್ಪಾ ಸಾವಳೆ ಹಾಗೂ ಇತರರ ಜಮೀನುಗಳಿಗೆ ಏತ ನೀರಾವರಿ ಯೋಜನೆಗಳ ಮಂಜೂರಾತಿದೆ. ಸದರಿ ಮಂಜೂರಾದ ಏತ ನೀರಾವರಿ ಯೋಜನೆಗಳಿಂದ ಗುಣಮಟ್ಟದ ಕಾಮಗಾರಿಯನ್ನು ನಿರ್ವಹಿಸಿಕೊಂಡು ತಮ್ಮ ಜಮೀನುಗಳಲ್ಲಿ ಒಳ್ಳೆಯ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮಂದುವರೆಯಲಿಕ್ಕೆ ಅನುಕೂಲವಾಗಲಿದೆ.ಈ 04 ಏತ ನೀರಾವರಿ ಯೋಜನೆ ಕಾಮಗಾರಿಗಳ ಒಟ್ಟು 159.01 ಎಕರೆ ಜಮೀನುಗಳಿಗೆ ರೂ. 2.00 ಕೋಟಿಗಳ ಅನುದಾನ ಮಂಜೂರು ಮಾಡಿ, ಟೆಂಡರ ಕರೆಯಲಾಗಿ ಕಾಮಗಾರಿಯನ್ನು ಕೂಡಲೇ ಅನುಷ್ಠಾನಗೊಳಿಸುವಂತೆ ಸಂಬಂಧಪಟ್ಟ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಚಿಕ್ಕೋಡಿ ತಾಲುಕಿನ ಇಂಗಳಿ ಗ್ರಾಮದ ಮೋಹನ ನಾಮದೇವ ಪಾಟೋಳೆ ಹಾಗೂ ಇತರರ ಒಟ್ಟು 51-19 ಎಕರೆ ಜಮೀನುಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆಗಾಗಿ ರೂ. 83.00 ಲಕ್ಷ
ಚಿಕ್ಕೋಡಿ ತಾಲುಕಿನ ಇಂಗಳಿ ಗ್ರಾಮದ ವಿನಾಯಕ ಬಸಪ್ಪಾ ಚೌಗುಲೆ ಹಾಗೂ ಇತರರ ಒಟ್ಟು 45-25 ಎಕರೆ ಜಮೀನಗಳಿಗೆ ಕೃಷ್ಣಾ ನದಿಯಿಂದ ಏತ ನೀರಾವರಿ ಯೋಜನೆಗಾಗಿ ರೂ. 55.00 ಲಕ್ಷಗಳ ಅನುದಾನ ಮಂಜೂರಾಗಿದೆ.ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ತಾನಾಜಿ ದತ್ತು ಪವಾರ ಹಾಗೂ ಇತರರ ಒಟ್ಟು 24-37 ಎಕರೆ ಜಮೀನುಗಳಿಗೆ ದೂಧಗಂಗಾ ನದಿಯಿಂದ ಏತ ನೀರಾವರಿ ಯೋಜನೆಗಾಗಿ ರೂ. 42.00 ಲಕ್ಷಗಳ ಅನುದಾನ ಮಂಜೂರಾಗಿದೆ.ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಸದಾಶಿವ ದುಂಡಪ್ಪಾ ಸಾವಳೆ ಹಾಗೂ ಇತರರ ಒಟ್ಟು 37-00 ಎಕರೆ ಜಮೀನುಗಳಿಗೆ ಏತ ನೀರಾವರಿ ಯೋಜನೆಗಾಗಿ ರೂ. 20.00 ಲಕ್ಷಗಳ ಅನುದಾನ ಮಂಜೂರು ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗಣೇಶ ಹುಕ್ಕೇರಿ,ಹೂವಣ್ಣಾ ಚೌಗುಲಾ, ರಮೇಶ ಮುರಚಿಟ್ಟೆ, ಚಂದ್ರಕಾಂತ ಲಂಗೋಟೆ,,ವಿಶ್ವನಾಥ ಮಾನೆ, ಸಂಜು ಪಿರಾಜೆ, ಅಜೀತ ಕಿಲ್ಲೇದಾರ, ಧನಗರ, ಶಿವಾಜಿ ಪವಾರ, ಗಜು ಚಿನುಮನೆ, ಸದಾಶಿವ ಕುಂಬಾರ ಹಾಗೂ 4 ಏತ ನೀರಾವರಿ ಯೋಜನೆಗಳ ರೈತರ ಫಲಾನುಭವಿಗಳ ಮುಖಂಡರ ಉಪಸ್ಥಿತರಿದ್ದರು.


Spread the love

About Laxminews 24x7

Check Also

ಚಿಕ್ಕೋಡಿ ಜಿಲ್ಲೆ ಮಾಡಿದಲ್ಲಿ,ಅಂಬೇಡ್ಕರ್ ಎಂದು ಹೆಸರಿಡಿ

Spread the love ಚಿಕ್ಕೋಡಿ ಜಿಲ್ಲೆ ಮಾಡಿದಲ್ಲಿ,ಅಂಬೇಡ್ಕರ್ ಎಂದು ಹೆಸರಿಡಿ ಚಿಕ್ಕೋಡಿ : ಬೆಳಗಾವಿ ಜಿಲ್ಲೆ ವಿಭಜಿಸಿ ನೂತನ ಜಿಲ್ಲೆಯನ್ನಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ