ಬೆಳಗಾವಿ ಹುಕ್ಕೇರಿ ತಾಲೂಕಿನ ಗೂಟುರ್ ಗ್ರಾಮ ಪಂಚಾಯತ್ ನರೇಗಾ ಕೂಲಿ ಕಾರ್ಮಿಕರು ಹಾಗೂ ಗ್ರಾಮ ಪಂಚಾಯತ್ ಸದಸ್ಯರುಗಳು ರಾಷ್ಟ್ರಪತಿಗಳಿಗೆ ಪತ್ರ ಬರೆದು ವೀಕೆಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ ಅಂಡ್ ಅಜ್ಮಿ ಮಿಶಿನ್ ನಾಮಕರಣ ಮಾಡಿ ಬಿಲ್ ಪಾಸ್ ಮಾಡಿರುವ ಕುರಿತು ತಮ್ಮ ವಿರೋಧ ವ್ಯಕ್ತಪಡಿಸಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಈ ಸಂದರ್ಭದಲ್ಲಿ ಹನುಮಂತ ಕಲ್ಲಪ್ಪ ಶೇಖನೂರ್ ಪಂಚಾಯತ್ ಸ್ವರಾಜ್ ಸಮಾಚಾರ್ ಜೊತೆಗೆ ಮಾತನಾಡಿ ಕೇಂದ್ರ ಸರ್ಕಾರ ಯಾರಿಗೂ ಹೇಳದೆ ಲೋಕಸಭೆಯಲ್ಲಿ ಸಮರ್ಪಕವಾಗಿ ಚರ್ಚೆ ಮಾಡದೆ ಈ ಬಿಲ್ಲನ್ನು ಪಾಸ್ ಮಾಡಿದ್ದು ಹಾಗೂ ಮಹಾತ್ಮ ಗಾಂಧೀಜಿಯವರ ಹೆಸರನ್ನು ಬದಲಾಯಿಸಿರುವುದು ನಾವು ತೀವ್ರವಾಗಿವಿರೋಧಿಸುತ್ತೇವೆ ಉದ್ಯೋಗ ಖಾತ್ರಿ ಯೋಜನೆಯಲ್ಲಿನಮಗೆ 100 ದಿನಗಳವರೆಗೂ ಕೆಲಸ ಸಿಗುತ್ತಿತ್ತು ನಾವು ಎಲ್ಲಿ ಕೇಳಿದಲ್ಲಿ ಕೆಲಸ ನಮಗೆ ದೊರಕುತ್ತಿತ್ತು ಆದರೆ ಹೊಸ ಬಿಲ್ಲಿನಲ್ಲಿ ಬದಲಾವಣೆ ಮಾಡಲಾಗಿದೆ ಕೃಷಿ ಚಟುವಟಿಕೆಯಲ್ಲಿ ಕೆಲಸಗಳನ್ನು ಕೈಗೊಳ್ಳುವಂತಿಲ್ಲ ನಿರ್ಧಾರವಂತ ಕೆಲಸಗಳನ್ನು ತೆಗೆದುಕೊಳ್ಳುವಂತಿಲ್ಲ ಹಾಗೂ ಗುತ್ತಿಗೆದಾರರಿಗೆ ಇದರಲ್ಲಿ ಅವಕಾಶ ನೀಡಿದ್ದು ಕೇಂದ್ರ ಸರ್ಕಾರ ಕೂಲಿ ಕಾರ್ಮಿಕರ ಕೆಲಸ ಕಿತ್ತುಕೊಳ್ಳುವ ಹಾಗೂ ಗುಲಾಮಗಿರಿಗೆ ತಳ್ಳುವ ನಿವೇದಿತ ಸಂಚಾಗಿದೆ.
ಈ ಕಾರಣದಿಂದಾಗಿ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮುಖಾಂತರ ನಮ್ಮ ನೋವು ಮತ್ತು ನಮ್ಮ ಆತಂಕವನ್ನು ಈ ಪತ್ರದ ಮೂಲಕ ನೀಡುತ್ತಿದ್ದೇವೆ ಇದನ್ನು ಪರಿಗಣಿಸುತ್ತಾರೆ ಎಂಬ ವಿಶ್ವಾಸ ನಮಗೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಗೊಟುರ್ ಗ್ರಾಮ ಪಂಚಾಯತ್ ಸದಸ್ಯರುಗಳು ಮನರೇಗಾ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು
ವರದಿ : ರತ್ನಾಕರ ಗೌಂಡಿ ಗೊಟುರ್ ಗ್ರಾಮ ಪಂಚಾಯತ್
Laxmi News 24×7