Breaking News

Uncategorized

ಬಸವನಾಡಲ್ಲಿ ಭರ್ಜರಿ ಮುಂಗಾರು ಬಿತ್ತನೆ: ನಿರೀಕ್ಷೆ ಮೀರಿದ ಉತ್ತಮ ಮಳೆ

ವಿಜಯಪುರ: ಕಳೆದ ವರ್ಷದ ಭೀಕರ ಬರದಿಂದ ಕಂಗಾಲಾಗಿದ್ದ ವಿಜಯಪುರ ಜಿಲ್ಲೆಯ ರೈತರಿಗೆ ಈ ಬಾರಿಯ ಮುಂಗಾರು ಭಾರಿ ಆಶಾಭಾವ ಮೂಡಿಸಿದ್ದು, ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ. ಸಾಮಾನ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ಅನ್ನದಾತರಿಂದ ಬಿತ್ತನೆ ಕಾರ್ಯವೂ ಭರದಿಂದ ಸಾಗಿದೆ. ಜೂನ್ 1 ರಿಂದ 11 ವರೆಗೆ 35 ಮಿ.ಮೀ. ಸಾಮಾನ್ಯ ಮಳೆ ಆಗಬೇಕಿದ್ದರೂ 180 ಮಿ.ಮೀ. ಮಳೆ ಸುರಿದಿದ್ದು, ಭೂಮಿ ಉತ್ತಮ ಹದಗೊಂಡಿದ್ದು, ಬಿತ್ತನೆ ಕಾರ್ಯ ಚುರುಕು …

Read More »

ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

ಮುದ್ದೇಬಿಹಾಳ: ಮತಕ್ಷೇತ್ರದ ಅಭಿವೃದ್ಧಿ ಸೇರಿ ರಾಜ್ಯದ ಎಲ್ಲ ಹಿಂದುಳಿದ ಪ್ರದೇಶಗಳಿಗೆ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ. ಎಲ್ಲ ಹಿಂದುಳಿದ ಪ್ರದೇಶಗಳಿಗೆ ಸಮಾನವಾಗಿ, ಸಮತೋಲನ ಮಾಡಿ ಅಭಿವೃದ್ಧಿಗೆ ಮುಂದಾಗದಿದ್ದರೆ ನನಗೆ ರಾಜಕೀಯ ಮಾಡುವ ಇಚ್ಛೆ ಇಲ್ಲ. ರಾಜಕೀಯ ತ್ಯಾಗಕ್ಕೂ ನಾನು ಸಿದ್ದನಾಗಿದ್ದೇನೆ ಎಂದು ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಇಲ್ಲಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಕೆಬಿಜೆಎನ್ನೆಲ್ ಅಧಿಕಾರಿಗಳ ಸಭೆಯ ನಂತರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ …

Read More »

ಕೊಲೆ ಆರೋಪಿ ದರ್ಶನ್ ಜೊತೆ ಮತ್ತೊಬ್ಬ ಸ್ಯಾಂಡಲ್‌ವುಡ್ ನಟ ಅರೆಸ್ಟ್!

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ. ಘಟನೆ ಸಂಬಂಧ ನಟ ದರ್ಶನ್‌ ಸ್ನೇಹಿತ ಹಾಗೂ ಅವರೊಂದಿಗೆ ಕೆಲ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ, ಪ್ರದೋಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತ ಆರೋಪಿಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದೆ.ಕನ್ನಡದ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿರುವ ಈತ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ A14 ಆರೋಪಿಯಾಗಿದ್ದಾನೆ ಎನ್ನಲಾಗಿದ್ದು, ದರ್ಶನ್ ಜೊತೆಗೆ ಸ್ನೇಹವನ್ನು ಹೊಂದಿದ್ದ ಎನ್ನಲಾಗಿದೆ

Read More »

ಚಾರ್ಮಾಡಿಯಲ್ಲಿ ಬಸ್ಸಿಗೆ ಅಡ್ಡ ಬಂದ ಕಾಡಾನೆ.

ಚಾರ್ಮಾಡಿ: ಇತ್ತೀಚಿನ ದಿನಗಳಲ್ಲಿ ಚಾರ್ಮಾಡಿ ಪರಿಸರದಲ್ಲಿ ಕಾಡಾನೆಗಳ ಉಪಟಳ ಜೋರಾಗಿದ್ದು ರಾತ್ರಿ ಹೊತ್ತು ಚಾರ್ಮಾಡಿ ಮಾರ್ಗವಾಗಿ ಸಂಚರಿಸಿದರೆ ಕಾಡಾನೆಗಳ ಹಾವಳಿ ಸರ್ವೇ ಸಾಮಾನ್ಯ ಎಂಬಂತಾಗಿದೆ.   ಅದೇ ರೀತಿ ಬುಧವಾರ ರಾತ್ರಿ ಚಾರ್ಮಾಡಿ ಘಾಟಿಯ 7 ಮತ್ತು 8ನೇ ತಿರುವಿನಲ್ಲಿ ಬಸ್ಸು ಸಂಚರಿಸುವ ವೇಳೆ ಏಕಾಏಕಿ ಕಾಡಾನೆ ಬಸ್ಸಿಗೆ ಅಡ್ಡ ಬಂದು ನಿಂತಿದೆ, ಕೂಡಲೇ ಎಚ್ಚೆತ್ತ ಬಸ್ಸು ಚಾಲಕ ಬಸ್ಸನ್ನು ನಿಲ್ಲಿಸಿದ್ದಾನೆ ಈ ವೇಳೆ ಬಸ್ಸಿನಲ್ಲಿದ್ದ ಪ್ರಯಾಣಿಕರು ಬಸ್ಸಿನ ಎದುರು ನಿಂತಿದ್ದ …

Read More »

ಅನೈತಿಕ ಚಟುವಟಿಕೆಗಳಿಗೆ ತಾಣವಾದ ಪಾಳು ಬಿದ್ದ ವಿದ್ಯಾರ್ಥಿ ವಸತಿ ನಿಲಯ!

ಹಿರೇಬಾಗೇವಾಡಿ: ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದವರ ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರವೂ ಸಾಕಷ್ಟು ಅನುದಾನವನ್ನು ಒದಗಿಸುತ್ತಿದ್ದು, ಹಲವಾರು ಯೋಜನೆಗಳನ್ನು ರೂಪಿಸಿ ಸಮುದಾಯದ ಪ್ರಗತಿಗೆ ಶ್ರಮಿಸುತ್ತಿದೆ. ಆದರೆ ಕೆಲ ಸಂದರ್ಭಗಳಲ್ಲಿ ಇಂಥಹ ಹಲವಾರು ಯೋಜನೆಗಳು ಕಾರಣಾಂತರಗಳಿಂದ ಇನ್ನೂ ತಳ ಸಮುದಾಯವನ್ನು ತಲುಪುವಲ್ಲಿ ತೀರಾ ವಿಳಂಬವಾಗುತ್ತಿದೆ.   ಸರ್ಕಾರಗಳು ಯಾವುದಾದರೂ ಅಷ್ಠೆ ! ಆಡಳಿತ ಶಾಹಿಯಲ್ಲಿನ ಜಿಡ್ಡುಗಳಾದ ಈ ಚಲತಾಹೈ ಎಂಬ ಧೋರಣೆ ಹಾಗು ಚುನಾಯಿತ ಜನಪ್ರತಿನಿಧಿಗಳ ಆಲಸೈತನಗಳೆ ಇದಕ್ಕೆ ಮುಖ್ಯ ಕಾರಣ ಎಂಬ ಆರೋಪಗಳು ತಳ …

Read More »

ಅಪ್ರಾಪ್ತ ಮಕ್ಕಳಿಗೆ ವಾಹನ ಚಾಲನೆಗೆ ಕೊಡುವ ಪೋಷಕರೇ ತಪ್ಪದೇ ಈ ಸುದ್ದಿ ಓದಿ!

ಬೆಂಗಳೂರು : ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಪಾಲಕರು ವಾಹನ ಚಲಾಯಿಸಲು ಅವಕಾಶ ಮಾಡಿಕೊಡುವ ಮುನ್ನ ಈ ಸುದ್ದಿಯನ್ನು ಒಮ್ಮೆ ಓದಿ. ವಾಹನ ಚಲಾಯಿಸಿ ಅಪಘಾತ ಉಂಟು ಮಾಡಿದರೆ, ವಾಹನದ ಮಾಲೀಕರು ಸಂಬಂಧಪಟ್ಟವರಿಗೆ ಪರಿಹಾರ ನೀಡಬೇಕೇ ಹೊರತು ವಿಮಾ ಕಂಪನಿಯಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ವಿಮಾ ಕಂಪನಿಯ ಮೇಲೆ ಹೊಣೆಗಾರಿಕೆ ವಹಿಸಿದ ಮೋಟಾರು ವಾಹನ ಅಪಘಾತ ನ್ಯಾಯಮಂಡಳಿಯ ತೀರ್ಪು ರದ್ದುಗೊಳಿಸಿ ನ್ಯಾಯಮೂರ್ತಿ ಹಂಚಾಟೆ ಸಂಜೀವ್‌ಕುಮಾರ್ ಈ ತೀರ್ಪು ನೀಡಿದ್ದಾರೆ. …

Read More »

ಬೆಂಗಳೂರಿನ ಮೊದಲ ‘ಡಬಲ್ ಡೆಕ್ಕರ್ ಫ್ಲೈಓವರ್’ ಕೊನೆಗೂ ಸಿದ್ಧ

ಬೆಂಗಳೂರು: ಹಲವಾರು ವಿಳಂಬಗಳ ನಂತರ, ಬೆಂಗಳೂರಿನ ಮೊದಲ ಡಬಲ್ ಡೆಕ್ಕರ್ ಫ್ಲೈಓವರ್ ಅಂತಿಮವಾಗಿ ಸಿದ್ಧವಾಗಿದೆ.ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ಯೆಲ್ಲೋ ಲೈನ್ (ಆರ್ ವಿ ರಸ್ತೆ- ಬೊಮ್ಮಸಂದ್ರ) ಉದ್ದಕ್ಕೂ 3.3 ಕಿ.ಮೀ ಉದ್ದದ ರಸ್ತೆ ಮೇಲ್ಸೇತುವೆ ಪೂರ್ಣಗೊಂಡಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ ಸಿಎಲ್) ತಿಳಿಸಿದೆ. ಅಧಿಕಾರಿಗಳ ಅಂತಿಮ ತಪಾಸಣೆಯ ನಂತರ ಜೂನ್ 15 ರಂದು ಅಥವಾ ನಂತರ ಮೇಲ್ಸೇತುವೆಯಲ್ಲಿ (ರಾಗಿಗುಡ್ಡದಿಂದ ಸಿಎಸ್ಬಿವರೆಗೆ) ವಾಹನ …

Read More »

ರೇಣುಕಾಸ್ವಾಮಿ ಮೃತದೇಹ ಸಾಗಿಸಿದ್ದ‌ ಸ್ಜಾರ್ಪಿಯೋ ಕಾರು ಸೀಜ್!

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ರೇಣುಕಾಸ್ವಾಮಿ ಮೃತದೇಹ ಸಾಗಿಸಲು ಬಳಸಿದ್ದ ಸ್ಕಾರ್ಪಿಯೋ ಕಾರನ್ನು ಸೀಜ್‌ ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಸಾಗಿಸಲು ಬಳಸಿದ್ದಾರೆ ಎನ್ನಲಾಗಿರುವ KA 03 MU 8821 ನಂಬರ್ ನ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕಾರು ಆರ್.ಆರ್.ನಗರ ದರ್ಶನ್ ಅಭಿಮಾನಿ ಸಂಘದ ಅಧ್ಯಕ್ಷ ಮನೆ ಬಳಿ‌ ಇತ್ತು. ಇದೀಗ ಪೊಲೀಸರು ಕಾರು ಸೀಜ್ ಮಾಡಿ‌ …

Read More »

ಕೆಪಿಎಸ್‌ಸಿಯಿಂದ 79 ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿ ಪ್ರಕಟ..!

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗವು ಅಧಿಸೂಚಿಸಿರುವ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಉಳಿಕೆ ಮೂಲ ವೃಂದದ – 1122 ಕಿರಿಯ ಸಹಾಯಕರು / ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ: 09-01-2023 ಹಾಗೂ ಪರಿಷ್ಕøತ ಅಂತಿಮ ಆಯ್ಕೆಪಟ್ಟಿಯನ್ನು ದಿನಾಂಕ: 14-03-2023 ಮತ್ತು ಹೆಚ್ಚುವರಿ ಆಯ್ಕೆಪಟ್ಟಿಯನ್ನು ದಿನಾಂಕ: 05-05-2023 ರಂದು ಪ್ರಕಟಿಸಲಾಗಿರುತ್ತದೆ. ಪ್ರಸ್ತುತ ಸದರಿ ಹುದ್ದೆಗಳ ಹೆಚ್ಚುವರಿ ಆಯ್ಕೆಪಟ್ಟಿಗಾಗಿ 16 ಇಲಾಖೆಗಳಿಂದ ಸ್ವೀಕೃತವಾದ ಪ್ರಸ್ತಾವನೆಯ ಕಾಲನುಕ್ರಮದನುಸಾರ 79 ಹುದ್ದೆಗಳ ಹೆಚ್ಚುವರಿ …

Read More »

ದರ್ಶನ್ ಸರ್ವನಾಶ ಆಗ್ತಾರೆ ಕರ್ಮ ಬಿಡಲ್ಲ; ರೇಣುಕಾ ಸ್ವಾಮಿ ತಾಯಿ

ರೇಣುಕಾ ಸ್ವಾಮಿ (Renuka Swami) ಸಾವಿನಿಂದ ಅವರ ಕುಟುಂಬಕ್ಕೆ ಸಾಕಷ್ಟು ದುಃಖ ಉಂಟಾಗಿದೆ. ರೇಣುಕಾ ಸ್ವಾಮಿ ಪತ್ನಿ ಈಗ ಮೂರು ತಿಂಗಳ ಗರ್ಭಿಣಿ. ರೇಣುಕಾ ಸ್ವಾಮಿ ಅವರ ತಾಯಿ ರತ್ನಪ್ರಭಾ ದರ್ಶನ್​ಗೆ ಹಿಡಿ ಶಾಪ ಹಾಕಿದ್ದಾರೆ. ‘ನನ್ನ ಮಗ ಯಾವಾಗಲೂ ಹೋಗುವಂತೆ ಹೋಗಿದ್ದ. ಅವನ ಕಿಡ್ನ್ಯಾಪ್ ಮಾಡಿದ್ದಾರೆ. ಮದುವೆ ಆದ ಬಳಿಕ ಮನೆ ಕೆಲಸದಲ್ಲೇ ತೊಡಗಿಕೊಳ್ಳುತ್ತಿದ್ದ. ಯಾವಾಗಲೂ ಅವನು ಡಿಸ್ಟರ್ಬ್ ಆದಂತೆ ಕಾಣುತ್ತಿರಲಿಲ್ಲ. ನಮಗೆ ಮಗನ ಬಗ್ಗೆ ಹೇಳಿದ್ರೆ ನಾವೇ ತಿದ್ದಿ ಹೇಳುತ್ತಿದ್ದೆವು. …

Read More »