ಮಂಗಳೂರು, ಜೂನ್ 08: ಬಸ್ಸಿನಲ್ಲಿ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಯುವತಿಯ (Girl) ಸಂಬಂಧಿಕರು ಧರ್ಮದೇಟು ನೀಡಿರುವ ಘಟನೆ ಮಂಗಳೂರಿನ (Mangaluru) ಬಲ್ಲಾಳ್ ಬಾಗ್ ಎಂಬಲ್ಲಿ ನಡೆದಿದೆ. ಪಾಂಡೇಶ್ವರ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಯುವತಿ ಮಂಗಳೂರು ನಗರದ ನಾಗೂರಿಯಲ್ಲಿರುವ ಎಸ್ಕೆ ಗ್ರೂಪ್ ಆಫ್ ಕಂಪನಿಯಲ್ಲಿ ಪ್ರೊಡಕ್ಟ್ಗಳನ್ನು ಸೇಲ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಯುವತಿ ಶುಕ್ರವಾರ (ಜೂ.07) ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ನಾಗೂರಿಯಲ್ಲಿರುವ ಕಚೇರಿಗೆ ಹೋಗಿ ಪ್ರೊಡಕ್ಟ್ಗಳನ್ನು ತೆಗೆದುಕೊಂಡಿದ್ದಾಳೆ. ಬಳಿಕ …
Read More »ನದಿ ಪಕ್ಕದಲ್ಲೇ ಇದ್ದರೂ ಕುಡಿಯಲು ನೀರಿಲ್ಲ
ಮೈಸೂರು,ಜೂ. 8- ಕಪಿಲಾ ನದಿ ದಂಡೆ ಕೂಗಳತೆ ದೂರದಲ್ಲಿದ್ದರೂ ಸಹ ಸ್ಥಳೀಯರಿಗೆ ನೀರಿನ ಸಮಸ್ಯೆ ತಪ್ಪಿಲ್ಲ. ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವಂತಾಗಿದೆ.ಪ್ರತಿದಿನ ಬಿಂದಿಗೆ ಹಿಡಿದು ನೀರಿಗಾಗಿ ಅಲೆದಾಡುವ ಗೋಳೂರು ಗ್ರಾಮಸ್ಥರ ಪರಿಪಾಟಲಿಗೆ ಸ್ಪಂದಿಸುವವರೇ ಇಲ್ಲದಂತಾಗಿದೆ. ಸುಮಾರು ಮೂರು ಸಾವಿರ ಕುಟುಂಬಗಳಿರುವ ಈ ಗ್ರಾಮ ನಿರ್ಲಕ್ಷಕ್ಕೆ ಒಳಗಾಗಿ ನೀರಿನ ಅಭಾವ ಇಲ್ಲಿನ ಜನಗಳಿಗೆ ನಿರಂತರವಾಗಿ ಕಾಡುತ್ತಿದೆ.ನೀರಿಗಾಗಿ ಪರದಾಡುತ್ತಿರುವ ಗ್ರಾಮಸ್ಥರ ಸಂಯಮ ಮೀರಿದೆ. ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿ ಗಳ ವಿರುದ್ಧ ಆಕೋಶ …
Read More »ಅಕ್ಕಪಕ್ಕದ ಸೆಲ್ ನಲ್ಲಿದ್ರೂ ಮುಖ ನೋಡಲಾಗದ ತಾಯಿ-ಮಗ..!
ಬೆಂಗಳೂರು : ಅಶ್ಲೀಲ ವಿಡಿಯೋ ಹಂಚಿಕೆ ಹಾಗೂ ಕಿಡ್ನ್ಯಾಪ್ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ತಾಯಿ ಭವಾನಿ ರೇವಣ್ಣ ಹಾಗೂ ಮಗ ಪ್ರಜ್ವಲ್ ರೇವಣ್ಣ ಅಕ್ಕಪಕ್ಕದ ಸೆಲ್ ನಲ್ಲಿದ್ದಾರೆ. ಇಬ್ಬರೂ ಕೂಡ ಅಕ್ಕ ಪಕ್ಕದ ಸೆಲ್ ನಲ್ಲಿದ್ರೂ ಕೂಡ ಒಬ್ಬರನ್ನೊಬ್ಬರು ಮುಖ ನೋಡಿಕೊಂಡಿಲ್ಲ. ಸುಮಾರು ಒಂದೂವರೆ ತಿಂಗಳಿನಿಂದ ಮಗನ ಮುಖ ನೋಡದ ಭವಾನಿ ರೇವಣ್ಣ ಎಸ್ ಐ ಟಿ ವಿಚಾರಣೆ ಮುಗಿಸಿ ಹೊರ ಬಂದಿದ್ದಾರೆ. ಮಹಿಳೆ ಕಿಡ್ನ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ …
Read More »ಬೆಂಗಳೂರು ಮಳೆ: ಬೀಳುವ ಮರಗಳ ಬಗ್ಗೆ ಚಿಂತೆ ಬಿಡಿ, ಫಟಾಫಟ್ ತೆರವಿಗೆ ವ್ಯವಸ್ಥೆ ರೆಡಿ
ಬೆಂಗಳೂರು, ಜೂನ್ 08: ಮಳೆಗಾಲ ಶುರುವಾಗಿದ್ದು, ಬೆಂಗಳೂರಿನಲ್ಲಿ ಬರುವ ಮಳೆ ಗಾಳಿಗೆ ಮರಗಳು ಧರೆಗುರುಳುವುದು ಸಾಮಾನ್ಯ. ಕಳೆದ ಬಾರಿಯ ಮಳೆಗೆ ನೂರಾರು ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಇದೀಗ ಮರಗಳನ್ನು ತ್ವರಿತವಾಗಿ ತೆರವು ಮಾಡಿ, ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಲು ಬಿಬಿಎಂಪಿ ವ್ಯವಸ್ಥೆ ಮಾಡಿಕೊಂಡಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಯಿಂದಾಗಿ ಬೃಹತ್ ಮರಗಳು ಧರೆಗುರುಳಿದ್ದು, ಹೆಚ್ಚುವರಿಯಾಗಿ ಕ್ರೇನ್ ಗಳನ್ನು ಹಾಗೂ ಸಿಲ್ಟ್ ಮತ್ತು ಟ್ರ್ಯಾಕ್ಟರ್ ಗಳನ್ನು ಅಗತ್ಯ ಸಿಬ್ಬಂದಿ/ಅಭಿಯಂತರರು/ಅರಣ್ಯ …
Read More »ಲೋಕಸಭೆ ಚುನಾವಣೆ ಮುಕ್ತಾಯ: ಐಎಎಸ್ ಅಧಿಕಾರಿಗಳ ವರ್ಗಾವಣೆ
ಬೆಂಗಳೂರು, ಜೂನ್ 08; ಲೋಕಸಭೆ ಚುನಾವಣೆ 2024ರ ಫಲಿತಾಂಶ ಘೋಷಣೆಯಾಗಿದೆ. ಕರ್ನಾಟಕದ 28 ಕ್ಷೇತ್ರಗಳಲ್ಲಿ ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಸೀಟುಗಳಲ್ಲಿ ಜಯಗಳಿಸಿದೆ. ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಆಯೋಗ ವಾಪಸ್ ಪಡೆದಿದೆ. ಮಾದರಿ ಚುನಾವಣಾ ನೀತಿ ಸಂಹಿತೆ ವಾಪಸ್ ಪಡೆಯುತ್ತಿದ್ದಂತೆಯೇ ಕರ್ನಾಟಕ ಸರ್ಕಾರ ಆಡಳಿತ ಯಂತ್ರದಲ್ಲಿ ಬದಲಾವಣೆ ಮಾಡಿದೆ. ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. IAS transfer; KPSC ಕಾರ್ಯದರ್ಶಿ …
Read More »ನೂತನ ಸಂಸದರಿಗೆ ರಾಹುಲ್ ಗಾಂಧಿ ಪಾಠ
ಬೆಂಗಳೂರು: ಸಂಸತ್ತು ಮತ್ತು ನಿಮ್ಮ ಕ್ಷೇತ್ರಗಳಲ್ಲಿ ಕ್ರಿಯಾಶೀಲರಾಗಿರಬೇಕು. ಜನರ ಸಮಸ್ಯೆಗಳ ಬಗ್ಗೆ ಸಂಸತ್ತಿನಲ್ಲಿ ದನಿ ಎತ್ತಬೇಕು. ಯಾವುದೇ ಹೇಳಿಕೆಗಳು ಪಕ್ಷದ ಚೌಕಟ್ಟಿನಲ್ಲಿರಬೇಕೇ ಹೊರತು, ವೈಯಕ್ತಿಕವಾಗಿರಬಾರದು – ಇದು ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಕಾಂಗ್ರೆಸ್‌ನ ನೂತನ ಸಂಸದರಿಗೆ ಪಕ್ಷದ ವರಿಷ್ಠ ರಾಹುಲ್ ಗಾಂಧಿ ನೀಡಿದ ಪಾಠ ಇದು. ಶುಕ್ರವಾರ ಖುದ್ದು ಬೆಂಗಳೂರು ನ್ಯಾಯಾಲಯಕ್ಕೆ ಹಾಜರಾದ ಬಳಿಕ ರಾಹುಲ್ ಗಾಂಧಿ, ಲೋಕಸಭಾ ಚುನಾವಣೆಯಲ್ಲಿ ಸೋತ ಮತ್ತು ಗೆದ್ದ ಅಭ್ಯರ್ಥಿಗಳೊಂದಿಗೆ ಫಲಿತಾಂಶದ ಪರಾಮರ್ಶೆ ನಡೆಸಿದರು. ಆಯ್ಕೆಯಾದವರಲ್ಲಿ …
Read More »D.K. Shivakumar ಸಿಬಿಐ ತನಿಖೆಗೆ ಸಹಕಾರ ನೀಡಲು ಸಿದ್ಧ
ಬೆಂಗಳೂರು: ರಾಜ್ಯ ಸರಕಾರದ ಅನುಮತಿ ಇಲ್ಲದಿದ್ದರೂ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ತನಿಖೆ ನಡೆಸಲು ಸಿಬಿಐಗೆ ಅವಕಾಶವಿದೆ. ಹಾಗಾಗಿ ತನಿಖೆಗೆ ಎಲ್ಲ ರೀತಿಯ ಸಹಕಾರ ನೀಡಲು ಸಿದ್ಧ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ, ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣವನ್ನು ಸಿಬಿಐಗೆ ವಹಿಸುವ ಪ್ರಶ್ನೆಯಿಲ್ಲ. ಆದರೆ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಅಕ್ರಮ ನಡೆದರೆ ಸರಕಾರದ ಅನುಮತಿ …
Read More »ಕರಾವಳಿಯಲ್ಲಿ ಬಿರುಸಿನ ಮಳೆ ಸಾಧ್ಯತೆ ; ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು: ಕರಾವಳಿ ಭಾಗದಲ್ಲಿ ಮುಂಗಾರು ಮಳೆ ಬಿರುಸು ಪಡೆಯುವ ಸಾಧ್ಯತೆ ಇದ್ದು, ಜೂ. 8ರಿಂದ 11ರ ವರೆಗೆ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ವೇಳೆ ಬಿರುಸಿನ ಗಾಳಿ-ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ. ಕರಾವಳಿ ಭಾಗದಲ್ಲಿ ಜೂ. 2ರಂದು ಮುಂಗಾರು ಆಗಮಿಸಿತ್ತಾದರೂ ಬಳಿಕದ ದಿನಗಳಲ್ಲಿ ಭಾರೀ ಮಳೆ ಸುರಿಯಲಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ …
Read More »TDP ಚಂದ್ರಬಾಬು ನಾಯ್ಡು ಕುಟುಂಬದ ಆಸ್ತಿ 5 ದಿನದಲ್ಲಿ 870 ಕೋ.ರೂ ಏರಿಕೆ!!
ಹೊಸದಿಲ್ಲಿ: ಆಂಧ್ರ ವಿಧಾನಸಭೆ, ಲೋಕಸಭೆ ಚುನಾವಣೆ ಯಲ್ಲಿ ತೆಲುಗು ದೇಶಂ ಪಕ್ಷದ ಮುಖ್ಯಸ್ಥ (ಟಿಡಿಪಿ) ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಚಂದ್ರಬಾಬು ನಾಯ್ಡು ಕುಟುಂ ಬದ ಆಸ್ತಿ ಮೌಲ್ಯವು 870 ಕೋಟಿ ರೂ. ಹೆಚ್ಚಳವಾಗಿದೆ. ನಾಯ್ಡು ಕುಟುಂಬಸ್ಥರು ಪ್ರವರ್ತಕರಾಗಿರುವ ಹಾಗೂ ಷೇರುಗಳನ್ನು ಹೊಂದಿರುವ ಹೆರಿಟೇಜ್ ಫುಡ್ಸ್ ಕಂಪೆನಿಯ ಷೇರು ಮೌಲ್ಯ ಜೂ.3ರಂದು 424 ರೂ.ಗಳಿತ್ತು. ಶುಕ್ರವಾರ ಅದು 661.25 ರೂ.ಗೆ ಏರಿದೆ. ಹೀಗಾಗಿ ಜೂ.3ರಂದು 3,700 ಕೋಟಿ ರೂ.ಗಳಿದ್ದ ಕಂಪೆನಿಯ ಮಾರುಕಟ್ಟೆ …
Read More »ನಿರೀಕ್ಷೆ ಹುಸಿಗೊಳಿಸಿದ ನಾಯಕರಿಗೆ ಚಾಟಿ ಬೀಸಿದ ರಾಹುಲ್ ಗಾಂಧಿ
ಬೆಂಗಳೂರು: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಿದ ಸಾಮಾನ್ಯ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರೀಕ್ಷೆ ಹುಸಿಗೊಳಿಸಿದ ನಾಯಕರಿಗೆ ಚಾಟಿ ಬೀಸಿದ್ದಾರೆ. ಕರ್ನಾಟಕದಲ್ಲಿ ನಾವು ಈ ರೀತಿಯ ಫಲಿತಾಂಶ ನಿರೀಕ್ಷೆ ಮಾಡಿರಲಿಲ್ಲ. ಇದು ನಮಗೆ ತುಂಬ ನಿರಾಸೆ ಉಂಟುಮಾಡಿದೆ. ಚುನಾವಣೆಗೆ ಮುನ್ನ ನೀವು ಕಟ್ಟಿಕೊಟ್ಟ ಚಿತ್ರಣವೇ ಬೇರೆ ಆಗಿತ್ತು. ಅದರಂತೆಯೇ ಲೆಕ್ಕ ಹಾಕಿದರೂ ಕನಿಷ್ಠ 17ರಿಂದ 18 ಸ್ಥಾನಗಳನ್ನು ಗೆದ್ದು ತರಬಹುದು ಅಂದುಕೊಂಡಿದ್ದೆವು. ಆದರೆ ಚುನಾವಣೆ ಅನಂತರ …
Read More »