ಕಲಬುರಗಿ: ಭೀಮೆ, ಕೃಷ್ಣಾರ್ಭಟಕ್ಕೆ ಉತ್ತರ ಕರ್ನಾಟಕದ ಮಂದಿ ಬೆಚ್ಚಿಬಿದ್ದಿದ್ದಾರೆ. ಊರಿಗೆ ಊರೇ ಮುಳುಗಡೆಯಾಗಿ, ಜನಜೀವನ ಅಯೋಮಯವಾಗಿದೆ. ಮನೆ, ಮಠ ಕಳೆದುಕೊಂಡ ಜನ ಕಣ್ಣೀರ ಹೊಳೆಯನ್ನೇ ಹರಿಸ್ತಿದ್ದಾರೆ. ಕಲಬುರಗಿಯಲ್ಲಂತೂ ಜಲರಾಕ್ಷಸ ಘನಘೋರ ಪರಿಸ್ಥಿತಿ ನಿರ್ಮಾಣ ಮಾಡಿದ್ದಾನೆ.ಹೌದು. ಉತ್ತರ ಕರ್ನಾಟಕದ ಸ್ಥಿತಿ ನಿಜಕ್ಕೂ ದುರಂತ ಅಂದ್ರೆ ತಪ್ಪಾಗಲ್ಲ. ಹಳ್ಳಿಗೆ ಹಳ್ಳಿಗಳನ್ನೇ ಮುಳುಗಿಸಿದೆ. ಮನೆಯೊಳಗೂ ನೀರು, ಹೊರಗೂ ನೀರು, ಅಕ್ಕಿ, ಗೋಧಿ, ಹೊಲ, ಗದ್ದೆ ಎಲ್ಲವೂ ನೀರುಪಾಲಾಗಿವೆ. ಕಲಬುರಗಿಯನ್ನಂತು ಮಹಾಮಳೆ ಮುಳುಗಿಸಿ ಬಿಟ್ಟಿದೆ. ರಣಭೀಕರ …
Read More »ಬಿಟೆಕ್ ವಿದ್ಯಾರ್ಥಿನಿ ಕೊಲೆ ಪ್ರಕರಣ- ಪೊಲೀಸರ ಎದುರು ಆರೋಪಿಯ ಅಚ್ಚರಿಯ ಹೇಳಿಕೆ
ಹೈದರಾಬಾದ್: ಆಂಧ್ರ ಪ್ರದೇಶದ ವಿಜಯರವಾಡ ನಗರದ ಬಿಟೆಕ್ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ ಕೊಲೆ ಪ್ರಕರಣಕ್ಕೆ ಮಹತ್ವದ ಟ್ವಿಸ್ಟ್ ಲಭಿಸಿದ್ದು, ಪ್ರಕರಣದ ಆರೋಪಿ ನಾಗೇಂದ್ರ ಪೊಲೀಸರ ಎದುರು ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾನೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ದಿವ್ಯ ತೇಜಸ್ವಿನಿ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಬಳಿಕ ತಾನು ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ನಾಗೇಂದ್ರ ಬಾಬು, ಗುಂಟೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸದ್ಯ ಕೃತ್ಯದ ಕುರಿತು ಪೊಲೀಸರ ಬಳಿ …
Read More »ವಿಕ್ರಮ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಫರಾಜ್ ಖಾನ್ಗೆ ಸಲ್ಮಾನ್ ಖಾನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ಸಹಾಯ ಮಾಡಿದ್ದಾರೆ.
ಮುಂಬೈ: ಪ್ರಸ್ತುತ ಬೆಂಗಳೂರಿನ ವಿಕ್ರಮ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಫರಾಜ್ ಖಾನ್ಗೆ ಸಲ್ಮಾನ್ ಖಾನ್ ಚಿಕಿತ್ಸಾ ವೆಚ್ಚ ಭರಿಸುವ ಮೂಲಕ ಸಹಾಯ ಮಾಡಿದ್ದಾರೆ. 1998ರಲ್ಲಿ ಬಿಡುಗಡೆಯಾದ ಮೆಹಂದಿ ಎಂಬ ಚಿತ್ರದಲ್ಲಿ ನಟಿ ರಾಣಿ ಮುಖರ್ಜಿಯೊಂದಿಗೆ ಫರಾಜ್ ಖಾನ್ ಅಭಿನಯಿಸಿದ್ದರು. ಈ ಚಿತ್ರದ ಮೂಲಕ ಬಹಳ ಹೆಸರುವಾಸಿಯಾಗಿದ್ದರು. ಕಳೆದ ಒಂದು ವರ್ಷದಿಂದ ಫರಾಜ್ ಖಾನ್ ಹೃದಯಕ್ಕೆ ಸಂಬಂಧಿಸಿದ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಸದ್ಯ ಬೆಂಗಳೂರಿನ ವಿಕ್ರಮ್ …
Read More »ಪ್ರೀತ್ಸೇ.. ಪ್ರೀತ್ಸೇ ಅಂತ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೇಲೆ ಕತ್ತಿಯಿಂದ ದಾಳಿ
ಹೈದರಾಬಾದ್: ಪ್ರೀತ್ಸೇ.. ಪ್ರೀತ್ಸೇ ಅಂತ ಎಂಜಿನಿಯರಿಂಗ್ ವಿದ್ಯಾರ್ಥಿನಿಯ ಬೆನ್ನು ಬಿದ್ದ ಪಾಗಲ್ ಪ್ರೇಮಿಯೊಬ್ಬ ಆಕೆಯ ಮೇಲೆ ಕತ್ತಿಯಿಂದ ದಾಳಿ ಮಾಡಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ವಿಜಯವಾಡ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ವಿದ್ಯಾರ್ಥಿನಿ ದಿವ್ಯ ತೇಜಸ್ವಿನಿ (20) ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಪೊಲೀಸರು ನೀಡಿರುವ ಮಾಹಿತಿ ಅನ್ವಯ, ಕ್ರಿಸ್ತು ರಾಜಪುರಂ ಪ್ರದೇಶದ ನಿವಾಸಿಯಾಗಿರುವ ದಿವ್ಯ ತೇಜಸ್ವಿನಿ ಎಂಜಿನಿಯರಿಂಗ್ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಾಳೆ. ಸ್ಥಳೀಯವಾಗಿ ಪೇಂಟಿಂಗ್ …
Read More »ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಹಾನಿ ನಾಳೆ ಕಂದಾಯ ಸಚಿವ ಆರ್. ಅಶೋಕ ಭೇಟಿ
ಬೆಂಗಳೂರು: ರಾಜ್ಯದಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಮಳೆ ಅಬ್ಬರಕ್ಕೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಅಪಾರ ಹಾನಿಯಾಗಿದೆ. ಪ್ರವಾಹ ಪೀಡಿತ ಜಿಲ್ಲೆಗಳಿಗೆ ನಾಳೆ ಕಂದಾಯ ಸಚಿವ ಆರ್. ಅಶೋಕ ಭೇಟಿ ನೀಡಲಿದ್ದಾರೆ. ಈ ವಿಚಾರವಾಗಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಕೊಪ್ಪಳ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ/. ಆಯಾ ಪ್ರದೇಶದಲ್ಲಿ 43 ಕಾಳಜಿ ಕೇಂದ್ರ …
Read More »ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪುಟ್ಟ ಕಂದಮ್ಮನನ್ನು ರಕ್ಷಣೆ
ಯಾದಗಿರಿ: ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಪುಟ್ಟ ಕಂದಮ್ಮನನ್ನು ರಕ್ಷಣೆ ಮಾಡಲಾಗಿದೆ. ಯಾದಗಿರಿ ಜಿಲ್ಲೆಯ ಶಹಪುರ ತಾಲೂಕಿನ ರೋಜಾ ಗ್ರಾಮದ ಬಳಿ ಈ ಘಟನೆ ನಡೆದಿದೆ. ಭೀಮಾ ನದಿ ಹಿನ್ನೀರು ಗ್ರಾಮ ನಡುಗಡ್ಡೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಬೋಟ್ ಮೂಲಕ ಸಂಚಾರ ಮಾಡುತ್ತಿದ್ದರು. ಹೀಗೆ ರಜಿಯಾ ಬೇಗಂ ಅವರು ಕೂಡ ತನ್ನ ಪುಟ್ಟ ಮಗುವಿನೊಂದಿಗೆ ತೆಪ್ಪದಲ್ಲಿ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ. ಈ ವೇಳೆ ಏಕಾಏಕಿ ತೆಪ್ಪ ಅಲುಗಾಡಿ ಮಗು ರಜಿಯಾ ಅವರ …
Read More »ಜಗನ್ಮೋಹನ್ರೆಡ್ಡಿ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯಲು ಅನರ್ಹರೆಂದು ಪರಿಗಣಿಸಬೇಕೆಂದು ಪಿಐಎಲ್
ಹೊಸದಿಲ್ಲಿ : ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರನ್ನು ಹುದ್ದೆಯಿಂದ ಕೆಳಗಿಳಿಸುವಂತೆ ಕೋರಿ ಜಿ.ಎಸ್. ಮಣಿ ಹಾಗೂ ಪ್ರದೀಪ್ ಕುಮಾರ್ ಯಾದವ್ ಎಂಬ ವಕೀಲರು ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ಹಾಲಿ ನ್ಯಾಯಾಧೀಶರಾದ ಜಸ್ಟಿಸ್ ಎನ್.ವಿ. ರಮಣ ವಿರುದ್ಧ ಸಿಎಂ ಹಗರಣದ ಆರೋಪ ಹೊರಿಸಿರುವ ಹಿನ್ನೆಲೆಯಲ್ಲಿ ಅರ್ಜಿ ಅಲ್ಲಿಸಿದ್ದಾರೆ. ಜಗನ್ ರೆಡ್ಡಿ ಸ್ವಯಂ ಅಕ್ರಮ ಹಣ ವರ್ಗಾವಣೆ ಹಾಗೂ ಭ್ರಷ್ಟಾಚಾರ ಸೇರಿ ಹಲವು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹಾಲಿ ನ್ಯಾಯಾಧೀಶರ …
Read More »ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ಅವರ ಅಳಿಯನ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಮಂಗಳವಾರ ರಾತ್ರಿ ಗಲಾಟೆ
ಬೆಳಗಾವಿ: ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ಅವರ ಅಳಿಯನ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದು ಮಂಗಳವಾರ ರಾತ್ರಿ ಗಲಾಟೆ ನಡೆದ್ದು, ಸದ್ಯ ಪ್ರಕರಣ ಸಂಬಂಧ ದೂರು ಪ್ರತಿ ದೂರು ದಾಖಲಾಗಿದೆ. ಸಿಪಿಐ ಗುರುರಾಜ್ ವ್ಯಕ್ತಿಯೊಬ್ಬರಿಗೆ ರಿವಾಲ್ವಾನ್ ತೋರಿಸಿ ಬೆದರಿಕೆ ಹಾಕಿರುವ ಆರೋಪವೂ ಕೇಳಿ ಬಂದಿದೆ. ಘಟನೆ ಹಿನ್ನೆಲೆ? ಮಂಗಳವಾರ ರಾತ್ರಿ ಹುಕ್ಕೇರಿ ಸಿಪಿಐ ಗುರುರಾಜ್ ಕಲ್ಯಾಣಶೆಟ್ಟಿ ತಮ್ಮ ಮಗನ ಜನುಮ ದಿನದ ಹಿನ್ನೆಲೆಯಲ್ಲಿ ಕುಟುಂಬಸ್ಥರೊಂದಿಗೆ ಜಾಂಬೋಟಿ ಬಳಿ ರೆಸಾರ್ಟ್ …
Read More »ಮೂರನೇ ಮದುವೆಯಾದ WWE ಸೂಪರ್ ಸ್ಟಾರ್ ಜಾನ್ ಸಿನಾ
ಫ್ಲೋರಿಡಾ: ಡಬ್ಯ್ಲುಡಬ್ಯ್ಲುಇ ಸೂಪರ್ ಸ್ಟಾರ್ ಜಾನ್ ಸಿನಾ ಅವರು ಮೂರನೇ ಬಾರಿಗೆ ವಿವಾಹವಾಗಿದ್ದು, ತಮ್ಮ ಗೆಳತಿ ಶೇ ಶರಿಯತ್ಜಾಡೆ ಅವರನ್ನು ವರಿಸಿದ್ದಾರೆ.ಜಾನ್ ಸಿನಾ ಮದುವೆಯಾಗಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ಆದರೆ ಫ್ಲೋರಿಡಾದ ಸುದ್ದಿ ಮಾಧ್ಯಮಗಳು ಜಾನ್ ಸಿನಾ ಮತ್ತು ಶೇ ಶರಿಯತ್ಜಾಡೆ ಅವರು ಬುಧವಾರ ನಡೆದ ಸರಳ ಮತ್ತು ಶಾಂತ ರೀತಿಯ ಮದುವೆ ಕಾರ್ಯಕ್ರಮದಲ್ಲಿ ವಿವಾಹವಾಗಿದ್ದಾರೆ ಎಂದು ವರದಿ ಮಾಡಿವೆ. ಸಿನಾ ತನಗಿಂತ 12 ವರ್ಷ ಚಿಕ್ಕವರಾದ ಶೇ ಶರಿಯತ್ಜಾಡೆ …
Read More »ಜೇಮ್ಸ್ ಚಿತ್ರ ತಂಡದಿಂದ ಸಿಹಿ ಸುದ್ದಿ ಹೊರ ಬಿದ್ದಿದ್ದು, ಹೀರೋಯಿನ್ ಆಯ್ಕೆ ಮಾಡಲಾಗಿದೆ.
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಪುನೀತ್ ರಾಜ್ಕುಮಾರ್ ಸಹ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಚಿತ್ರ ತಂಡದಿಂದ ಸಿಹಿ ಸುದ್ದಿ ಹೊರ ಬಿದ್ದಿದ್ದು, ಹೀರೋಯಿನ್ ಆಯ್ಕೆ ಮಾಡಲಾಗಿದೆ. ಅನ್ಲಾಕ್ ಬಳಿಕ ಬಹುತೇಕ ಚಿತ್ರಗಳ ಶೂಟಿಂಗ್ ಚುರುಕುಗೊಂಡಿದ್ದು, ಯುವರತ್ನ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಮೊನ್ನೆಯಷ್ಟೇ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಪ್ಪು ಜೇಮ್ಸ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್ಡೌನ್ ವೇಳೆ ಫುಲ್ …
Read More »