ಮಂಗಳೂರು: ಏಕಾಏಕಿ ಸ್ಟುಡಿಯೋಗೆ ನುಗ್ಗಿ ಫೋಟೋಗ್ರಾಫರ್ ಮೇಲೆ ತಲ್ವಾರ್ ದಾಳಿ ಮಾಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ ನಡೆದಿದೆ. ದಿನೇಶ್ ಕೊಟ್ಟಿಂಜ ದಾಳಿಗೊಳಗಾದ ಫೋಟೋಗ್ರಾಫರ್. ಇವರು ಫರಂಗಿಪೇಟೆಯಲ್ಲಿ ಸ್ಟುಡಿಯೋ ಇಟ್ಟುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಅಂಗಡಿಗೆ ನುಗ್ಗಿ ದಾಳಿ ಮಾಡಿದ್ದಾರೆ. ಘಟನೆಯಿಂದ ಗಂಭೀರ ಗಾಯಗೊಂಡ ದಿನೇಶ್ ಅವರನ್ನು ಕೂಡಲೇ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಬಂಟ್ವಾಳ ಡಿ.ವೈ.ಎಸ್.ಪಿ ವೆಲೆಂಟೈನ್ ಡಿ.ಸೋಜ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ …
Read More »ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ನನ್ನು ಬಿಡುಗಡೆ ಮಾಡುತ್ತಿರುವುದು
ದೆಹಲಿ: ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ನನ್ನು ಬಿಡುಗಡೆ ಮಾಡುತ್ತಿರುವುದು ಶಾಂತಿಗಾಗಿ ಎಂದು ಹೇಳಿದ್ದ ಪಾಕಿಸ್ತಾನದ ನಿಜ ರೂಪ ಬಯಲಾಗಿದೆ. ಅಭಿನಂದನ್ ಬಿಡುಗಡೆಗೆ ಕಾರಣ ಬಯಲಾಗಿದೆ. ಭಾರತದ ಆ ಬಂದು ಮಾತಿಗೆ ಹೆದರಿ ಪಾಪಿ ಪಾಕಿಸ್ತಾನ ಬಾಲು ಮುದುಡಿಕೊಂಡಿತ್ತು. ಅಭಿನಂದನ್ ಬಿಡುಗಡೆ ಮಾಡದಿದ್ರೆ ಭಾರತದಿಂದ ದಾಳಿ ಆಗುವ ಆತಂಕಕ್ಕೆ ಪಾಕ್ ಸೇನೆ ಮುಖ್ಯಸ್ಥ ಖಮರ್ ಬಜ್ವಾ ಕಾಲುಗಳು ನಡುಗುತ್ತಿತ್ತು. 2019ರ ಪಾಕ್ ಸರ್ವಪಕ್ಷ …
Read More »ಮತ್ತೊಂದ್ಕಡೆ 2ನೇ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ.
ದೆಹಲಿ : ಕೊರೊನಾ ಬಿಕ್ಕಟ್ಟಿನ ನಡುವೆ ಬಿಹಾರ ಮೊದಲ ಹಂತದ ಮತದಾನ ಯಶಸ್ವಿಯಾಗಿದೆ. 1066 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮತ್ತೊಂದ್ಕಡೆ 2ನೇ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ. ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಬಿರುಸಿನ ಮತದಾನ ನಡೆದಿದೆ. ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಕಂಡುಬಂದ ದೋಷದಿಂದಾಗಿ ವೋಟಿಂಗ್ ತಡವಾಗಿ ಆರಂಭವಾಗಿತ್ತು. ಇಂತಹ ಸಣ್ಣಪುಟ್ಟ ಘಟನೆಗಳನ್ನು …
Read More »ಸೇಂದಿ ಕಾಯಿಸುವ ಅಡ್ಡೆ ಮೇಲೆ ಅಬಕಾರಿ ಇಲಾಖೆ ದಾಳಿ
ಯಾದಗಿರಿ: ಸೇಂದಿ ಕಾಯಿಸುವ ಅಡ್ಡೆ ಮೇಲೆ ಯಾದಗಿರಿ ಅಬಕಾರಿ ಇಲಾಖೆ ಇಂದು ದಾಳಿ ನಡೆಸಿದೆ. ದಾಳಿಯಲ್ಲಿ ಸಂಗ್ರಹಿಸಿಟ್ಟ 1,030 ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಯಾದಗಿರಿ ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಕುರಬಗೇರಾ ಗ್ರಾಮದಲ್ಲಿ ಬಹಳಷ್ಟು ದಿನಗಳಿಂದಲೂ ಕಳ್ಳಭಟ್ಟಿ ತಯಾರು ಮತ್ತು ಮಾರಾಟ ಮಾಡುವ ದಂಧೆ ಬಗ್ಗೆ ಖಚಿತ ಮಾಹಿತಿ ಪಡೆದ ಅಬಕಾರಿ ಇಲಾಖೆಯ ಪೊಲೀಸರು, ಯಾದಗಿರಿ ಅಬಕಾರಿ ಉಪ ಅಧೀಕ್ಷಕರ ಸೂಚನೆ ಮೇರೆಗೆ, ಉಪ ವಿಭಾಗ ಶಹಾಪೂರ ಅಧಿಕಾರಿ ಬಸವರಾಜ ಜಾಮಗೊಂಡ …
Read More »ಕೊರೊನಾ ಲಸಿಕೆ ಪ್ರಯೋಗಕ್ಕೆ ಒಳಗಾದ ಮೈಸೂರಿನ ವೈದ್ಯ ದಂಪತಿ
ಮೈಸೂರು: ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿ ಪಡಿಸಿರುವ ಪ್ರಯೋಗ ಹಂತದಲ್ಲಿರುವ ಕೋವಿಶಿಲ್ಡ್ ಲಸಿಕೆಯನ್ನು ಮೈಸೂರಿನ ವೈದ್ಯ ದಂಪತಿಯನ್ನು ಹಾಕಿಸಿಕೊಂಡಿದ್ದಾರೆ. 3ನೇ ಹಂತದ ಲಸಿಕೆಯನ್ನು ಮೈಸೂರಿನ ವೈದ್ಯೆ ಶಿಲ್ಪ ಸಂತೃಪ್ತ್ ಹಾಗೂ ಅವರ ಪತಿ ಡಾ. ಸಂತೃಪ್ತ್ ಹಾಕಿಸಿ ಕೊಂಡಿದ್ದಾರೆ. ಈ ಬಗ್ಗೆ ಡಾ. ಶಿಲ್ಪ ಸಂತೃಪ್ತ್ ಮಾತನಾಡಿದ್ದಾರೆ. ಅ. 1 ರಂದು ಕೊರೊನಾ ಲಸಿಕೆ ಹಾಕಿಸಿಕೊಂಡಿರುವ ವೈದ್ಯೆ ಶಿಲ್ಪ ಲಸಿಕೆ ಪಡೆದು 28 ದಿನಗಳಿಂದ ಆರೋಗ್ಯದಿಂದಿದ್ದಾರೆ. ಇನ್ನೂ ಎರಡು ಇಂಜೆಕ್ಷನ್ ಪಡೆಯಬೇಕಿದ್ದು …
Read More »ನಮ್ಮಲ್ಲಿರುವುದು ಕೆಂಪು, ಬಿಳಿ ರಕ್ತ ಕಣ, ಡಿ.ಕೆ.ಸುರೇಶ್ಗೆ ಬಯಾಲಜಿ ಪುಸ್ತಕ ಕೊಡಿ- ಸುಧಾಕರ್
ಕೋಲಾರ: ಸಂಸದ ಡಿ.ಕೆ.ಸುರೇಶ್ ಅವರ ಕೇಸರಿ ರಕ್ತ ಹೇಳಿಕೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಟಾಂಗ್ ನೀಡಿದ್ದು, ನಮ್ಮಲ್ಲಿರುವುದು ಕೆಂಪು ಹಾಗೂ ಬಿಳಿ ರಕ್ತ ಕಣಗಳು ಎಂದಿದ್ದಾರೆ. ನಗರದಲ್ಲಿ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ.ಸುರೇಶ್ ಕೇಸರಿ ರಕ್ತ ಹೇಳಿಕೆ ವಿಚಾರಕ್ಕೆ ತಿರುಗೇಟು ನೀಡಿ, ಅವರಿಗೆ ಬಯಾಲಜಿ ಪುಸ್ತಕ ಕೊಡಿಸುತ್ತೇನೆ ನೋಡಿಕೊಳ್ಳಲಿ. ನನಗೆ ಗೊತ್ತಿರೋದು ಬಿಳಿ ಹಾಗೂ ಕೆಂಪು ರಕ್ತ ಕಣ ಅಷ್ಟೆ ಕೇಸರಿ ರಕ್ತ ಕಣ ಇರೋದು …
Read More »ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.
ಮಂಡ್ಯ: ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮನ ವಿಷಪ್ರಸಾದ ದುರಂತ ಪ್ರಕರಣ ಮಾಸುವ ಮುನ್ನವೇ ಇದೀಗ ಮಂಡ್ಯದಲ್ಲೂ ಮಾರಮ್ಮನ ಪ್ರಸಾದ ಸ್ವೀಕರಿಸಿದ ಭಕ್ತರು ಅಸ್ವಸ್ಥರಾಗಿದ್ದಾರೆ.ಪ್ರಸಾದ ಸೇವನೆ ಬಳಿಕ ಗ್ರಾಮದ 60ಕ್ಕೂ ಹೆಚ್ಚು ಮಂದಿಗೆ ವಾಂತಿ ಭೇದಿ ಕಾಣಿಸಿಕೊಂಡಿದೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ಲಿಂಗಪಟ್ಟಣದಲ್ಲಿ ಮಾರಮ್ಮ ದೇವಾಲಯದ ಪ್ರಸಾದ ಸೇವಿಸಿದ 60 ಮಂದಿಗೆ ವಾಂತಿ-ಭೇದಿ ಕಾಣಿಸಿಕೊಂಡಿದೆ. 60 ಜನರ ಪೈಕಿ ಐವರು ತೀವ್ರ ಸುಸ್ತಿನಿಂದ ಬಳಲಿದ್ದು. ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಗ್ಯಾಧಿಕಾರಿಗಳು ಗ್ರಾಮದಲ್ಲೇ …
Read More »ಸಚಿವ ರಮೇಶಜಾರಕಿಹೊಳಿಕಿಂಗ್ ಮೇಕರ್ ಆಗಿದ್ದಾರೆ: ಮೃತ್ಯುಂಜಯ ಸ್ವಾಮೀಜಿ
ಬೆಳಗಾವಿ: ಸಚಿವ ರಮೇಶಜಾರಕಿಹೊಳಿ ಅವರಿಗೆ ಕಿಂಗ್ ಆಗುವ ಅವಕಾಶವಿತ್ತು. ಆದ್ರೆ ಅವರು ಕಿಂಗ್ ಮೇಕರ್ ಆಗಿದ್ದಾರೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು. ಇಲ್ಲಿನ ಸುವರ್ಣಸೌಧ ಎದುರು ಲಿಂಗಾಯತ ಸಮುದಾಯವನ್ನು 2ಎ ಗೆ ಸೇರಿಸುವಂತೆ ಆಗ್ರಹಿಸಿ ಹಮ್ಮಿಕೊಂಡಿದ್ದ ಸತ್ಯಾಗ್ರಹ ವೇಳೆ ಮನವಿ ಸ್ವೀಕರಿಸಲು ಸ್ಥಳಕ್ಕೆ ಸಚಿವರು ಬಂದಿದ್ದ ವೇೆಳೆ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದರು. ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಲು ರಮೇಶ ಜಾರಕಿಹೊಳಿ ಅವರು …
Read More »ನಿಷೇಧವಿದ್ರೂ ಹಣಕ್ಕಾಗಿ ಕಾವೇರಿ ನದಿಯಲ್ಲಿ ಡೇಂಜರಸ್ ತೆಪ್ಪದ ಸವಾರಿ!
ಚಾಮರಾಜನಗರ: ಕೊರೊನಾ ಭಯ, ಲಾಕ್ಡೌನ್ನಿಂದ ಕಳೆದ ಏಳೆಂಟು ತಿಂಗಳಿನಿಂದ ಮನೆಯಲ್ಲಿಯೇ ಇದ್ದ ಜನ ಈಗ ಪ್ರವಾಸಿ ತಾಣಗಳತ್ತ ಮುಖ ಮಾಡ್ತಿದ್ದಾರೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗ ದಂಡೇ ನೆರೆದಿದೆ. ಮೋಜು ಮಸ್ತಿಯ ಮೂಡ್ನಲ್ಲಿರೋ ಜನ ಕೊಂಚ ಮೈಮರೆತಂತೆ ಕಾಣುತ್ತಿದೆ. ಇದನ್ನೇ ಬಂಡವಾಳ ಮಾಡ್ಕೊಂಡಿರೋರು ಜನರ ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಹೌದು. ಕಾವೇರಿ ಮೈದುಂಬಿ ಹರಿಯುತ್ತಿದ್ದು ಕೊಳ್ಳೆಗಾಲದ ಭರಚುಕ್ಕಿಗೆ ಪ್ರವಾಸಿಗರ ದಂಡೇ ಬರುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರೋ ಇಲ್ಲಿನವರು ಪ್ರವಾಸಿಗರಿಗೆ ತೆಪ್ಪದ …
Read More »ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲು ಹಣವಿಲ್
ಹಾಸನ: ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ ಕಟ್ಟಲೂ ಹಣವಿಲ್ಲವೇ ಎಂಬ ಪ್ರಶ್ನೆ ಇದೀಗ ಕಾಡುತ್ತಿದ್ದು, ಬರೋಬ್ಬರಿ ಮೂರು ಕೋಟಿಗೂ ಅಧಿಕ ರೂ.ಗಳ ಬಿಲ್ ಮೊತ್ತವನ್ನು ಗ್ರಾಮ ಪಂಚಾಯಿತಿ ಬಾಕಿ ಉಳಿಸಿಕೊಂಡಿದೆ. ಗ್ರಾಮ ಪಂಚಾಯಿತಿ ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗದೆ ಕಳೆದ ಏಳೆಂಟು ವರ್ಷಗಳಿಂದ ಸುಮಾರು ಮೂರು ಕೋಟಿಗೂ ಅಧಿಕ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. ಶ್ರವಣಬೆಳಗೂಳಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುವುದರಿಂದ ಅವರಿಗೆ ಕುಡಿಯುವ ನೀರು …
Read More »