Breaking News

Uncategorized

ಕೃಷಿ, A.P.M.C.ಕಾಯ್ದೆ ತಿದ್ದುಪಡಿ- ಮುಚ್ಚುವ ಹಂತ ತಲುಪಿದ A.P.M.C.ಗಳು

ಕೋಲಾರ: ಪ್ರಧಾನಿ ಮೋದಿ ಸರ್ಕಾರ ಮತ್ತು ರಾಜ್ಯದ ಬಿಜೆಪಿ ಸರ್ಕಾರ ಎಪಿಎಂಸಿ ತಿದ್ದುಪಡಿ ತಂದ ಬಳಿಕ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆಯೇ ಬುಡಮೇಲಾಗಿದೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ವ್ಯಾಪಾರ ವ್ಯವಹಾರ ನಡೀತಿದೆ. ಆದರೆ ಹೊಸ ಕಾನೂನಿನಿಂದ ಬಂಗಾರಪೇಟೆ, ಮಾಲೂರು, ಶ್ರೀನಿವಾಸಪುರ ಎಪಿಎಂಸಿಗಳು ಖಾಲಿ ಹೊಡೆಯುತ್ತಿವೆ. ಹೊಸ ಕಾನೂನಿನಿಂದ ಎಪಿಎಂಸಿಗಳ ಆದಾಯ ಬಹುತೇಕ ನಿಂತು ಹೋಗಿದೆ. ಹೀಗಾಗಿ ಎಪಿಎಂಸಿಗಳ ನಿರ್ವಹಣೆ ಕಷ್ಟ ಆಗುತ್ತಿದೆ. ಹೊಸ ಕಾಯ್ದೆಯಿಂದಾಗಿ ಎಪಿಎಂಸಿಗಳ ಆದಾಯ ಶೇ.75 ರಷ್ಟು …

Read More »

ನಮ್ಮ ಕರ್ನಾಟಕದ ಸಚಿವರಾದ ವೀ ಸೋಮಣ್ಣ ಹಾಗೂ ಶ್ರೀ ರಾಮ ಲು ಅವರಿಗೆ ಕನ್ನಡದ ಬಗ್ಗೆ ಜ್ಞಾನ ಇಲ್ಲ ಯಾರ ಯಾರದೋ ಹೆಸರು ಹೇಳಿ ಭಾಷಣ ಮಾಡಿದ ಸಚಿವರೂ.

ಕೊಡಗು:  ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಭಾಷಣದಲ್ಲಿ ಸಚಿವ ವಿ.ಸೋಮಣ್ಣ ಯಡವಟ್ಟು ಮಾಡಿಕೊಂಡಿದ್ದು,  ಕವಿ  ಕುಮಾರವ್ಯಾಸನ ಬದಲು ಕುಮಾರಸ್ವಾಮಿ ಅವರನ್ನು ಹಾಡಿಹೊಗಳಿದ ಪ್ರಸಂಗ ನಡೆದಿದೆ.   ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ವಿ.ಸೋಮಣ್ಣ, ಕರ್ನಾಟಕದ ಕವಿಗಳ ಸಾಲಿನಲ್ಲಿ ಕುಮಾರಸ್ವಾಮಿ ಹೆಸರು ಸೇರಿಸಿ ಯಡವಟ್ಟು ಮಾಡಿಕೊಂಡಿದ್ದಾರೆ. ಪಂಪ, ರನ್ನ, ಪೊನ್ನ,ಜನ್ನ, ಕುಮಾರಸ್ವಾಮಿ ಮುಂತಾದವರು ಭಾಷೆಯನ್ನು ಆಗಸದೆತ್ತರಕ್ಕೆ ಕೊಂಡೊಯ್ದಿದ್ದಾರೆ ಎಂದು ಭಾಷಣದಲ್ಲಿ ಕುಮಾರಸ್ವಾಮಿ ಹೆಸರನ್ನು ಉಲ್ಲೇಖಿಸಿದ್ದಾರೆ. ತಮ್ಮ ತಪ್ಪು ಸುಧಾರಿಸಿಕೊಳ್ಳದೇ …

Read More »

65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಕನ್ನಡದಲ್ಲಿಯೇ ಶುಭಾಶಯಗಳನ್ನು ಕೋರಿದ್ದಾರೆ.

    ನವದೆಹಲಿ: 65ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ನಾಡಿನೆಲ್ಲೆಡೆ ಮನೆಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಜ್ಯದ ಜನತೆಗೆ ಕನ್ನಡದಲ್ಲಿಯೇ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಮೋದಿಯವರು, ಕರ್ನಾಟಕದ ನನ್ನ ಸಹೋದರ ಮತ್ತು ಸಹೋದರಿಯರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡಿಗರ ಜನ ಶಕ್ತಿ ಮತ್ತು ಕೌಶಲ್ಯದಿಂದ ಕರ್ನಾಟಕ ಪ್ರಗತಿಯ ಉತ್ತುಂಗಕ್ಕೇರುತ್ತಿದೆ. ಕರ್ನಾಟಕದ ಜನತೆಯ ಸಂತಸ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆಂದು …

Read More »

ಕಿಂಗ್ಸ್ ಸಂಕಟ : ಚನ್ನೈ ಗೆ ಚಿನ್ನಾಟ

ಹೈದರಾಬಾದ್ : ಯುವನಾಯಕ ಕೆ.ಎಲ್. ರಾಹುಲ್‌ಗೆ ಕಿಂಗ್ಸ್ ಇಲೆವನ್ ತಂಡವನ್ನು ಪ್ಲೇಆಫ್‌ಗೆ ಕೊಂಡೊಯ್ಯುವ ಛಲದಲ್ಲಿದ್ದಾರೆ. ಅದಕ್ಕಾಗಿ ಅವರು ಈಗ ‘ಕೂಲ್ ಕ್ಯಾಪ್ಟನ್’ ಮಹೇಂದ್ರಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌ ಸವಾಲನ್ನು ಮೀರಿ ನಿಲ್ಲಬೇಕಿದೆ. ಧೋನಿ ಬಳಗಕ್ಕೆ ಈಗಾಗಲೇ ಪ್ಲೇ ಆಫ್‌ ಬಾಗಿಲು ಮುಚ್ಚಿದೆ. ಉಳಿದಿರುವ ಒಂದು ಪಂದ್ಯವನ್ನು ಗೆದ್ದು ಸಂಭ್ರಮದೊಂದಿಗೆ ಹೊರ ನಡೆಯುವತ್ತ ಚಿತ್ತ ನೆಟ್ಟಿದೆ. ಕಿಂಗ್ಸ್‌ ತಂಡಕ್ಕೆ ಶುಕ್ರವಾರ ರಾಜಸ್ಥಾನ ರಾಯಲ್ಸ್‌ ಎದುರು ಜಯಿಸಿದ್ದರೆ ಹಾದಿ ಸುಲಭವಾಗುತ್ತಿತ್ತು. …

Read More »

ಕೊರೋನಾ ವೈರಸ್‌ ಸೋಂಕಿನಿಂದ ಸಚಿವರ ಪರಿಸ್ಥಿತಿ ಚಿಂತಾಜನಕ

ಚೆನ್ನೈ: ಕೊರೋನಾ ವೈರಸ್‌ ತಗುಲಿರುವುದರಿಂದ ಗೆ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡು ಕೃಷಿ ಸಚಿವ ಆರ್ ದೊರೈಕಣ್ಣಾ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಜೀವ ರಕ್ಷಕ ಅಳವಡಿಸಲಾಗಿದೆ ಎಂದು ಕಾವೇರಿ ಆಸ್ಪತ್ರೆ ಶನಿವಾರ ತಿಳಿಸಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 72 ವರ್ಷದ ದೊರೈಕಣ್ಣಾ ಅವರು ಅಕ್ಟೋಬರ್ 13ರಂದು ಕೋವಿಡ್-19 ಪರೀಕ್ಷೆ ಮಾಡಿಸಿದ್ದರು. ವರದಿ ಪಾಸಿಟಿವ್ ಬಂದಿದ್ದರಿಂದ ಚಿಕಿತ್ಸೆಗಾಗಿ ನಗರದ ಕಾವೇರಿ ಆಸ್ಪತ್ರೆಗೆ ದಾಖಲಾಗಿದ್ದರು. ಗರಿಷ್ಠ ಜೀವ ರಕ್ಷಕದ ಹೊರತಾಗಿಯೂ ಸಚಿವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದು, …

Read More »

ರೈಲ್ವೆ ಇಲಾಖೆ ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲ್ವೆ ಹಳಿಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ.

ನವದೆಹಲಿ: ರೈಲ್ವೆ ಇಲಾಖೆ ಬೆಂಗಳೂರು ಹಾಗೂ ಮೈಸೂರು ನಡುವಿನ ರೈಲ್ವೆ ಹಳಿಯ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸಿದೆ. ಕಾಮಗಾರಿಯ ನೈಪುಣ್ಯತೆಯನ್ನು ನೀರು ತುಂಬಿದ ಗಾಜಿನ ಲೋಟದ ಮೂಲಕ ಪರೀಕ್ಷೆ ಮೂಲಕ ಅದು ಜನರ ಮುಂದಿಟ್ಟಿದೆ. ಈ ವೇಳೆ ರೈಲು ವೇಗವಾಗಿ ಚಲಿಸಿದರೂ ಒಂದು ಹನಿ ನೀರು ಕೆಳಗೆ ಬಿದ್ದಿಲ್ಲ. ಈ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಅವರು ಟ್ವೀಟ್‌ ಮಾಡಿದ್ದು, ಈ ಮಾರ್ಗ ರೈಲು ಪ್ರಯಾಣ ಎಷ್ಟು ಸುಗಮವಾಗಿ ಇರಲಿದೆ …

Read More »

ಸಬರ್‌ಮತಿ ನದಿ ತೀರದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್‌ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ.

ನವದೆಹಲಿ : ಗುಜರಾತಿನ ಸಬರ್‌ಮತಿ ನದಿ ತೀರದಿಂದ ಸರ್ದಾರ್‌ ವಲ್ಲಭಭಾಯ್‌ ಪಟೇಲ್‌ ಅವರ ಏಕತಾ ಪ್ರತಿಮೆ ಇರುವ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ದೇಶದ ಮೊದಲ ಸೀಪ್ಲೇನ್‌ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಲಿದ್ದಾರೆ. ಸರ್ದಾರ್‌ ಪಟೇಲ್‌ ಅವರ 146ನೇ ಜನ್ಮ ದಿನದ ನಿಮಿತ್ತ ಈ ಸೇವೆಯನ್ನು ಆರಂಭಿಸಲಾಗುತ್ತಿದೆ. ಸೀಪ್ಲೇನ್‌ ವಿಮಾನ ಅಹಮದಾಬಾದ್‌ನ ನದಿ ತೀರದಿಂದ 10.15 ನಿಮಿಷಕ್ಕೆ ಹಾರಾಟ ಕೈಗೊಳ್ಳಲಿದ್ದು, 10.45ಕ್ಕೆ ಕೆವಾಡಿಯಾ ತಲುಪಲಿದೆ. ಕೆವಾಡಿಯಾದ ಸರ್ದಾರ್‌ …

Read More »

ಬ್ಲ್ಯಾಕ್ ಡೇ ಗೆ ಕರೆ ಕೊಟ್ಟ ಮಹಾರಾಷ್ಟ್ರ ಸರ್ಕಾರ…!

ಬೆಳಗಾವಿ- ಕನ್ನಡಿಗರು ಹಬ್ಬದ ದಿನ ರಾಜ್ಯೋತ್ಸವದ ದಿನ ಮಹಾರಾಷ್ಟ್ರ ಸರ್ಕಾರವೇ ಕಪ್ಪು ದಿನ ಆಚರಿಸುವ ಮೂಲಕ ಎಂಈಎಸ್ ಗೆ ಬೆಂಬಲ ನೀಡಲು ನಿರ್ಧರಿಸಿ ಭಾರತದ ಒಕ್ಕೂಟದ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿರುವಾಗ ಅದಕ್ಕೆ ತಕ್ಕ ಉತ್ತರ ಕೊಡಬೇಕಾದ ನಮ್ಮ ಸರ್ಕಾರ ಮಲಗಿದೆಯಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಕಪ್ಪು ಪಟ್ಟಿ ಧರಿಸಿ,ಕಪ್ಪು ದಿನ ಆಚರಣೆಗೆ ಬೆಂಬಲ ನೀಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿ ಈ ಕುರಿತು ಮಹಾರಾಷ್ಟ್ರ ಗಡಿ …

Read More »

ದೇವರಗುಂಡಿ ಜಲಪಾತದಲ್ಲಿ ಮಾಡೆಲ್‍ಗಳ ಅರೆಬೆತ್ತಲೆ ಫೋಟೋ ಶೂಟ್

ಮಂಗಳೂರು: ಬೆಂಗಳೂರಿನ ಇಬ್ಬರು ಮಾಡೆಲ್ ಗಳು ಕರಾವಳಿಯ ಪುಣ್ಯಕ್ಷೇತ್ರದ ಬಳಿ ಇರುವ ದೇವರ ಜಲಪಾತದ ಎದುರು ಅರೆಬೆತ್ತಲೆಯಾಗಿ ಫೋಟೋ ಶೂಟ್ ಮಾಡಿದ್ದು, ಇದೀಗ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ತೊಡಿಕಾನ ಗ್ರಾಮದಲ್ಲಿ 13 ಶತಮಾನದ ಇತಿಹಾಸವಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ನೆಲೆಸಿರೋ ಪರಮಾತ್ಮ ಇಲ್ಲಿಂದ 2 ಕಿಲೋಮೀಟರ್ ದೂರದಲ್ಲಿರುವ ಈ ಜಲಪಾತದಲ್ಲಿ ಸ್ನಾನ ಮಾಡುತ್ತಿದ್ದ ಎಂಬ ಐತಿಹ್ಯ ಇದೆ. ಹೀಗಾಗಿ ಇದಕ್ಕೆ …

Read More »

ಸಿಐಡಿ ಘಟಕದ ಡಿಜಿಪಿ ಟಿ. ಸುನೀಲ್‍ಕುಮಾರ್ ಅವರು ಈ ತಿಂಗಳ ಅಂತ್ಯದಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ.

ಬೆಂಗಳೂರು, ಅ. 29- ಸಿಐಡಿ ಘಟಕದ ಡಿಜಿಪಿ ಟಿ. ಸುನೀಲ್‍ಕುಮಾರ್ ಅವರು ಈ ತಿಂಗಳ ಅಂತ್ಯದಲ್ಲಿ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ. ಮೂಲತಃ ಆಂಧ್ರಪ್ರದೇಶದವರಾದ ಸುನೀಲ್‍ಕುಮಾರ್ ಅವರು ಬಿಎಸ್‍ಸಿ ಕೃಷಿ ಪದವಿಯನ್ನು ಪಾಸ್ ಮಾಡಿ ನವದೆಹಲಿಯಲ್ಲಿ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು 1986ರಲ್ಲಿ ಐಎಫ್‍ಎಸ್(ಅರಣ್ಯ) ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಅರಣ್ಯ ಅಧಿಕಾರಿಯಾಗಿದ್ದರು. ತದನಂತರ 1989ರಲ್ಲಿ ಐಪಿಎಸ್ ಪರೀಕ್ಷೆ ಪಾಸ್ ಮಾಡಿ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯಕ್ಕೆ ಬಂದರು. ಬೀದರ್ ಜಿಲ್ಲೆಯ ಹುಮ್ನಾಬಾದ್ ಉಪವಿಭಾಗದಲ್ಲಿ ಎಎಸ್‍ಪಿಯಾಗಿ …

Read More »