Breaking News

Uncategorized

ವಿಧಾನಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ನೌಕರರಿಗೆ ಸಂಬಳ ನೀಡದ ವಿಚಾರದ ಕುರಿತಂತೆ ಶಾಸಕ ಹರ್ಷವರ್ಧನ್ ಪ್ರಸ್ತಾಪ

ಬೆಂಗಳೂರು : ಕೆಎಸ್ಆರ್ ಟಿಸಿ, ಬಿಎಂಟಿಸಿ ನೌಕರರಿಗೆ ಡಿಸೆಂಬರ್ ತಿಂಗಳ ಸಂಬಳವನ್ನು 10 ದಿನದೊಳಗೆ ನೀಡುತ್ತೇವೆ ಎಂದು ಸಾರಿಗೆ ಸಚಿವ ಮತ್ತು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ. ವಿಧಾನಪರಿಷತ್ ಅಧಿವೇಶನದ ಪ್ರಶ್ನೋತ್ತರ ಕಲಾಪದಲ್ಲಿ ಸಾರಿಗೆ ನೌಕರರಿಗೆ ಸಂಬಳ ನೀಡದ ವಿಚಾರದ ಕುರಿತಂತೆ ಶಾಸಕ ಹರ್ಷವರ್ಧನ್ ಪ್ರಸ್ತಾಪ ಮಾಡಿದರು. ಇದಕ್ಕೆ ಉತ್ತರಿಸಿದ ಲಕ್ಷ್ಮಣ ಸವದಿ ನವೆಂಬರ್ ತಿಂಗಳ ತನಕ ಎಲ್ಲಾ ನೌಕರರಿಗೆ ಸಂಬಳ ನೀಡಲಾಗಿದೆ. ಡಿಸೆಂಬರ್ ತಿಂಗಳ ಸಂಬಳವನ್ನು 8 ರಿಂದ …

Read More »

ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವ್ಯಕ್ತಿಯೊಬ್ಬನಿಗೆ ಕಾರ್ ಡಿಕ್ಕಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ

ಬೆಳಗಾವಿ : ರಾಷ್ಟ್ರೀಯ ಹೆದ್ದಾರಿ ದಾಟುವ ವೇಳೆ ವ್ಯಕ್ತಿಯೊಬ್ಬನಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಹುಕ್ಕೇರಿ ತಾಲ್ಲೂಕಿನ ಬೊಳಶ್ಯಾನಟ್ಟಿ ಗ್ರಾಮದ ಶಂಕರ  ಕೊಂಕಣಿ ಮೃತ ವ್ಯಕ್ತಿ. ಸಮೀಪದ ಏಕಸ್ ಕಂಪನಿ ಸಮೀಪದಲ್ಲಿ ಘಟನೆ ನಡೆದಿದ್ದು, ಬೆಳಗಾವಿಯಿಂದ ಸಂಕೇಶ್ವರ ಕಡೆಗೆ ಹೊರಟ್ಟಿದ್ದ  ಕಾರ್ ಡಿಕ್ಕಿ ಹೊಡೆದಿದೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಮೂರು ದಿನಗಳ ಕಾಲ ಮಲೆ ಮಾದಪ್ಪ ತನ್ನ ಭಕ್ತರಿಗೆ ದರ್ಶನ ಕೊಡಲ್ಲ.

ಚಾಮರಾಜನಗರ: ಮೂರು ದಿನಗಳ ಕಾಲ ಮಲೆ ಮಾದಪ್ಪ ತನ್ನ ಭಕ್ತರಿಗೆ ದರ್ಶನ ಕೊಡಲ್ಲ.ಜಿಲ್ಲೆಯ ಹನೂರು ತಾಲೂಕಿನ ಇತಿಹಾಸ ಪ್ರಸಿದ್ಧ ಮಲೆ ಮಹದೇಶ್ವರ ಬೆಟ್ಟದಲ್ಲಿ ಮೂರು ದಿನ ಭಕ್ತರಿಗೆ ದೇವರ ದರ್ಶನ ಸಿಗಲ್ಲ. ಕೊನೆಯ ಕಾರ್ತಿಕ ಸೋಮವಾರದ ಹಿನ್ನೆಲೆಯಲ್ಲಿ ಲಕ್ಷಾಂತರ ಭಕ್ತರು ಬೆಟ್ಟಕ್ಕೆ ಬರುವ ಸಾಧ್ಯತೆ ಇದೆ. ಕೊರೊನಾ ಮುಂಜಾಗ್ರತಾ ಕ್ರಮವಾಗಿ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಡಿ.12 ರಿಂದ ಡಿ.14 ರ ವರೆಗೆ ಮಾದಪ್ಪನ ದರ್ಶನ ಭಕ್ತರಿಗಿಲ್ಲ ಸಿಗಲ್ಲ. …

Read More »

ಪೊಲೀಸರ ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ,ಶಾಲು ಬಾರು ಕೋಲು ತೆಗೆಯಿರಿ ಎಂದು ಪೊಲೀಸ್ ಸಿಬ್ಬಂದಿ

ಬೆಂಗಳೂರು: ಕೃಷಿಕಾಯ್ದೆ ವಿರೋಧಿಸಿ ಇಂದು ವಿಧಾನಸೌಧ ಮುತ್ತಿಗೆ ಹಿನ್ನೆಲೆಯಲ್ಲಿ ಈಗಾಗಲೇ ರೈತರು ಮೆಜೆಸ್ಟಿಕ್ ರೈಲ್ವೆ ಸ್ಟೇಷನ್‍ಗೆ ಆಗಮಿಸುತ್ತಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆದಿದೆ.ಶಾಲು ತೆಗೆಯಿರಿ, ಬಾರು ಕೋಲು ತೆಗೆಯಿರಿ ಎಂದು ಪೊಲೀಸ್ ಸಿಬ್ಬಂದಿ ವಾರ್ನ್ ಮಾಡಿದ್ದಾರೆ. ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದ ನಡೆದಿದ್ದು, ಪೊಲೀಸ್ ಸಿಬ್ಬಂದಿ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ಶಾಲು ತೆಗೆಯಿರಿ, ಅಂತ ಹೇಳೋಕೆ ಅವನು …

Read More »

ರೈತ ವಿರೋಧಿ ಕಾನೂನುಗಳ ವಿರುದ್ಧ ಕಿಚ್ಚು – ಅಧಿಕಾರ ಸೌಧಕ್ಕೆ ಇಂದು ಅನ್ನದಾತರ ಲಗ್ಗೆ

ಬೆಂಗಳೂರು: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆ ಒಳಗೊಂಡಂತೆ ರೈತ ವಿರೋಧಿ ಕೃಷಿ ಕಾನೂನುಗಳ ವಿರುದ್ಧ ರೈತರು ನಡೆಸ್ತಿರೋ ಹೋರಾಟ ಇನ್ನಷ್ಟು ತೀವ್ರಗೊಳ್ತಿದ್ದು, ಅನ್ನದಾತರ ಹೋರಾಟಕ್ಕೆ ಇಂದು ಮತ್ತೆ ರಾಜಧಾನಿ ಬೆಂಗಳೂರು ಸಾಕ್ಷಿ ಆಗಲಿದೆ.ನಿನ್ನೆ ಇಡೀ ಕರ್ನಾಟಕ ಬಂದ್ ಆಚರಿಸಿದ್ದ ರೈತ ಪರ ಸಂಘಟನೆಗಳು ಇಂದು ಬೆಂಗಳೂರಲ್ಲಿ ಸಾಲು ಸಾಲು ಪ್ರತಿಭಟನೆಗಳನ್ನು ಹಮ್ಮಿಕೊಂಡಿವೆ. ರೈತರ ಪರವಾಗಿ ರೈತ ಸಂಘಟನೆಗಳ ಜೊತೆಗೆ ಇತರೆ ಸಂಘಟನೆಗಳು ಬೀದಿಗಿಳಿಯಲಿವೆ. ಮುಖ್ಯವಾಗಿ 10 …

Read More »

ವಿಧಾನಸಭೆಯಲ್ಲಿ ಕರ್ನಾಟಕ ಸ್ಟಾಂಪ್ ವಿಧೇಯಕ ಮಂಡನೆ

ಬೆಂಗಳೂರು,ಡಿ.8- ರಾಜ್ಯ ಸರ್ಕಾರವು ಕರ್ನಾಟಕ ಕೈಗಾರಿಕಾ ನೀತಿ 2020-25ರಲ್ಲಿ ಪ್ರಸ್ತಾಪಿಸಿರುವ ಕೈಗಾರಿಕಾ ಬೆಳವಣಿಗೆಗೆ ಉತ್ತೇಜನ ನೀಡುವ ಉದ್ದೇಶದ ಕರ್ನಾಟಕ ಸ್ಟಾಂಪ್(2ನೇ ತಿದ್ದುಪಡಿ) ವಿಧೇಯಕ 2020ನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು. ಶಾಸನ ರಚನಾ ಕಲಾಪದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಪರವಾಗಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸಿದರು. 2020-21ರ ಆಯವ್ಯಯ ಗಾತ್ರದಲ್ಲಿ ಪ್ರಸ್ತಾಪಿಸಿರುವ 35ಲಕ್ಷ ರು.ವರೆಗಿನ ಫ್ಲಾಟ್ ಅಥವಾ ಅಪಾರ್ಟ್‍ಮೆಂಟ್‍ನ ಮೊದಲ ಮಾರಾಟಕ್ಕೆ ಸ್ಟಾಂಪ್ ತೆರಿಗೆಯನ್ನು ಕಡಿಮೆ ಮಾಡುವ …

Read More »

ಭಾರತ್ ಬಂದ್‌ಗೆ ಸೈನಿಕನ ಬೆಂಬಲ

ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಭಾರತ್ ಬಂದ್‌ಗೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಬಂದ್ ಬಹುತೇಕ ಯಶ್ವಸಿಯಾಗಿದೆ. ಚೆನ್ನಮ್ಮ ಸರ್ಕಲ್ ಬಳಿ ಮುಂಜಾನೆ ಹೋರಾಟಗಾರರು ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರೆ, ಇನ್ನೊಂದೆಡೆ ರೈತ ಮುಖಂಡರು ಹೊಸೂರು ಡಿಪೋ ಮುಂದೆ ಸಾರಿಗೆ ಬಸ್ ಗಳು ಹೊರಹೋಗದಂತೆ ತಡೆದು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಈ ವೇಳೆ ಬಲವಂತವಾಗಿ ಬಂದ್ …

Read More »

ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಂದ ಬಿಟ್ಟು ಬಿಡದೇ ತುಂತುರು ಮಳೆ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರಾತ್ರಿಯಿಂದ ಬಿಟ್ಟು ಬಿಡದೇ ತುಂತುರು ಮಳೆ ಸುರಿಯುತ್ತಿದೆ.ನಿವಾರ್ ಮತ್ತೆ ಬುರೇವಿ ಚಂಡ ಮಾರುತದ ಬಳಿಕ ಬಂಗಾಳಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ ಉಂಟಾಗಿದೆ. ಈ ಚಂಡಮಾರುತ ಭಾರತ ಸೇರಿದಂತೆ 13 ದೇಶಗಳ ಮೇಲೆ ಅಪ್ಪಳಿಸಲಿದೆ. ಅದರಲ್ಲೂ ತಮಿಳುನಾಡಿಗೆ ಅಪ್ಪಳಿಸುವ ಸಾಧ್ಯತೆ ಹೆಚ್ಚಿದೆ. ಬುರೇವಿ ಚಂಡ ಮಾರುತ ಮತ್ತು ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತುಂತುರು ಮಳೆ ಮತ್ತು ಮೋಡ ಕವಿದ ವಾತಾವರಣ …

Read More »

ಸೋದರಿಯರು. ಆತ್ಮಹತ್ಯೆ

ಕಲಬರುಗಿ: ಸೋದರಿಯರಿಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಐನಾಪುರ ಗ್ರಾಮದಲ್ಲಿ ನಡೆದಿದೆ. ಐಶ್ವರ್ಯ(19) ಮತ್ತು ಸಾರಿಕಾ (17) ಆತ್ಮಹತ್ಯೆಗೆ ಶರಣಾದ ಸೋದರಿಯರು. ಐನಾಪುರ ಗ್ರಾಮದ ವಿಶ್ವನಾಥ್ ಎಂಬವರು ಮಕ್ಕಳು. ಮನೆಯಲ್ಲಿ ಯಾರು ಇಲ್ಲದಿದ್ದಾಗ ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿರುವ ಡೆತ್ ನೋಟ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಆತ್ಮಹತ್ಯೆಗೆ …

Read More »

ಪತ್ನಿಯ ಜೊತೆ ಮೊಬೈಲ್ ನಲ್ಲಿ ಮಾತುನಾಡುತ್ತಲೇ ಕಾರ್ಮಿಕನೊಬ್ಬ ನೇಣಿಗೆ

ಹುಬ್ಬಳ್ಳಿ: ಪತ್ನಿಯ ಜೊತೆ ಮೊಬೈಲ್ ನಲ್ಲಿ ಮಾತುನಾಡುತ್ತಲೇ ಕಾರ್ಮಿಕನೊಬ್ಬ ನೇಣಿಗೆ ಶರಣಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಮೋಹನ್ ಸಿಂಗ್ ಆತ್ಮಹತ್ಯೆಗೆ ಶರಣಾದ ಕಾರ್ಮಿಕನಾಗಿದ್ದು, ಪಶ್ಚಿಮಬಂಗಾಳ ಮೂಲದ ನಿವಾಸಿ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮೋಹನ್ ಸಿಂಗ್ ತಂದೆಯ ಸಾವಿನಿಂದ ಮನನೊಂದಿದ್ದರು.ಕಳೆದ ಎರಡು ತಿಂಗಳ ಹಿಂದೆ ಪಶ್ಚಿಮ ಬಂಗಾಳದಿಂದ ಕೆಲಸಕ್ಕೆಂದು ಬಂದು ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿನ ಫೇವರ್ಸ್ ಕಂಪನಿಯಲ್ಲಿ ಮೋಹನಸಿಂಗ್ ಕೆಲಸಕ್ಕೆ ಸೇರಿಕೊಂಡಿದ್ದರು. ತಂದೆಯ ಸಾವಿನ …

Read More »